ಮಂಗಳೂರು: ಇಲ್ಲಿನ ಶ್ರೀನಿವಾಸ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಏಪ್ರಿಲ್ 20 ರಂದು ಗುರುವಾರ ಬೆಳಗ್ಗೆ 9.30ಕ್ಕೆ ಸುರತ್ಕಲ್‍ನಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‍ನಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ, ಕುಕ್ಕೆ ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕರ್ಣಾಟಕ ಬ್ಯಾಂಕ್ ನಿವೃತ್ತ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಎಂ.ಎಸ್. ಮಹಾಬಲೇಶ್ವರ ಅವರಿಗೆ ಈ ಸಂದರ್ಭದಲ್ಲಿ ಡಾಕ್ಟರೇಟ್ ಆಫ್ ಲೆಟರ್ಸ್ ಪದವಿ ಪ್ರದಾನಿಸಲಾಗುವುದು. ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಮಾನ್ಯ ಉಪಕುಲಪತಿ ಡಾ. ಎಂ.ಕೆ. ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕಾಲೇಜು ದಿನಾಚರಣೆ ಮತ್ತು ಪ್ರತಿಭಾ ದಿನಾಚರಣೆ:
ಏಪ್ರಿಲ್ 18ರಂದು ಬೆಳಗ್ಗೆ 9.30ಕ್ಕೆ ಕಾಲೇಜು ದಿನಾಚರಣೆ ಮತ್ತು ಏಪ್ರಿಲ್ 19ರಂದು ಬೆಳಗ್ಗೆ 9.30ಕ್ಕೆ ಪ್ರತಿಭಾ ದಿನಾಚರಣೆ ಮುಕ್ಕ ಕ್ಯಾಂಪಸ್‍ನಲ್ಲಿ ನಡೆಯಲಿದೆ.
ಎ. ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ.ಸಿಎ. ಎ. ರಾಘವೇಂದ್ರ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸನ್ಮಾನ್ಯ ಸಹ ಕುಲಾಧಿಪತಿಗಳಾದ ಡಾ.ಎ.ಶ್ರೀನಿವಾಸ ರಾವ್, ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿಯ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮೀ ಆರ್ ರಾವ್, ಪ್ರೊ. ಶ್ರೀಮತಿ ಎ. ಮಿತ್ರಾ ಎಸ್. ರಾವ್, ಶ್ರೀಮತಿ ಪದ್ಮಿನಿ ಕುಮಾರ್, ವಿವಿ ಉಪಕುಲಪತಿಗಳಾದ ಡಾ. ಪಿ.ಎಸ್. ಐತಾಳ್, ವಿವಿ ಕುಲಸಚಿವರಾದ ಡಾ. ಅನಿಲ್ ಕುಮಾರ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ್ ಮಯ್ಯ, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್, ಶೈಕ್ಷಣಿಕ ವಿಭಾಗದ ಕುಲಸಚಿವರಾದ ಶ್ರೀ ಆದಿತ್ಯಕುಮಾರ್ ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿರುವರು.
ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಸಂಸ್ಥಾಪಕರಾದ ಅಡ್ಕ ಶಾಮ ರಾವ್ ಅವರ ಸುಪುತ್ರರು, ಹೆಸರಾಂತ ಲೆಕ್ಕ ಪರಿಶೋಧಕರಾದ ಡಾ. ಸಿಎ ಎ.ರಾಘವೇಂದ್ರ ರಾವ್ ಅವರು 1988ರಲ್ಲಿ 7ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಶ್ರೀನಿವಾಸ ಸಮೂಹ ಶೈಕ್ಷಣಿಕ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಶೈಕ್ಷಣಿಕ ಅಭ್ಯಾಸವನ್ನು ಮಾಡುತ್ತಿದ್ದಾರೆ. ನಾಲ್ಕು ಸಾವಿರ ಸಿಬ್ಬಂದಿಗಳು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೋಟೆಲ್ ಮ್ಯಾನೇಜ್‍ಮೆಂಟ್, ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಅರೆ ವೈದ್ಯಕೀಯ, ಫಿಸಿಯೋಥೆರಪಿ, ನರ್ಸಿಂಗ್, ಮ್ಯಾನೇಜ್‍ಮೆಂಟ್, ಫಾರ್ಮಸಿ, ಬಿಎಡ್, ಅಲೈಡ್ ಹೆಲ್ತ್ ಸೈನ್ಸಸ್, ವೈಮಾನಿಕ, ಸಂಸ್ಕೃತ, ಯೋಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇವೇ ಮೊದಲಾದ ಕ್ಷೇತ್ರಗಳಲ್ಲಿ ಶ್ರೀನಿವಾಸ ಸಮೂಹ ಶೈಕ್ಷಣಿಕ ಸಂಸ್ಥೆಗಳು ಉತ್ತಮ ಸಾಧನೆಯನ್ನು ಮಾಡಿವೆ.
1050 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ. 794 ಪದವಿ ವಿದ್ಯಾರ್ಥಿಗಳಿಗೆ, 256 ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನಿಸಲಾಗುವುದು. 125 ರ್‍ಯಾಂಕ್‍ಗಳಲ್ಲಿ 33 ಚಿನ್ನದ ಪದಕ, 12 ಪಿಎಚ್‍ಡಿ, 3 ಡಿಎಸ್‍ಸಿ, 2 ಡಿಲಿಟ್ಟ್ ಪದವಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶ್ರೀನಿವಾಸ ವಿವಿ ಉಪಕುಲಪತಿಗಳಾದ ಡಾ. ಪಿ.ಎಸ್. ಐತಾಳ್, ವಿವಿ ಕುಲಸಚಿವರಾದ ಡಾ. ಅನಿಲ್ ಕುಮಾರ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ್ ಮಯ್ಯ , ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಎಂ. ಎಸ್. ಮಹಾಬಲೇಶ್ವರ ಅವರ ಪರಿಚಯ:
ಎಂ. ಎಸ್. ಮಹಾಬಲೇಶ್ವರ ಅವರು ಕೆಬಿಎಲ್ ಸರ್ವಿಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಂಡಿ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರು ಮತ್ತು ಬ್ಯಾಂಕರ್ಸ್ ಕ್ಲಬ್‌ನ ಅಧ್ಯಕ್ಷರು. ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕೊ. ಲಿಮಿಟೆಡ್ ಕಂಪನಿಯ ಮಂಡಳಿಯಲ್ಲಿದ್ದಾರೆ ಮತ್ತು ಸೌತರ್ನ್ ಇಂಡಿಯನ್ ಬ್ಯಾಂಕ್ಸ್ ಸ್ಟಾಫ್ ಟ್ರೈನಿಂಗ್ ಕಾಲೇಜು ಅಧ್ಯಕ್ಷರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಆಂಡ್ ಫೈನಾನ್ಸ್ ನ ಅಸೋಸಿಯೇಟ್ ಮತ್ತು ಗವರ್ನಿಂಗ್ ಕೌನ್ಸಿಲ್ ನ ಸದಸ್ಯರಾಗಿದ್ದಾರೆ. ಅವರ ಹಿಂದಿನ ವೃತ್ತಿಜೀವನದಲ್ಲಿ, ಎಂ.ಎಸ್.ಮಹಾಬಲೇಶ್ವರ ಅವರು ಚೇರ್ಮನ್ಸ್ ಕ್ಲಬ್‌ನ ಸದಸ್ಯ ಸ್ಥಾನವನ್ನು ಹೊಂದಿದ್ದರು. ಇವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸೇಂಟ್ ಅಲೋಶಿಯಸ್ ಕಾಲೇಜಿನಿಂದ ಪದವಿ ಪಡೆದಿರುತ್ತಾರೆ
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪರಿಚಯ:
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕುಕ್ಕೆ ಸುಬ್ರಹ್ಮಣ್ಯ ಮಠದ 38ನೇ ಮಠಾಧೀಶರು. ಅವರ ಮಾರ್ಗದರ್ಶನದಲ್ಲಿ, ಮಠವು ಬೆಂಗಳೂರು ಮತ್ತು ಬಾಂಬೆಯಲ್ಲಿ ಕೇಂದ್ರಗಳೊಂದಿಗೆ ತನ್ನನ್ನು ವಿಸ್ತರಿಸಿದೆ. ಅವರ ಆಡಳಿತ ಕೌಶಲ್ಯದ ಮೇಲೆ, ಅವರ ಸ್ನೇಹಪರ ವ್ಯಕ್ತಿತ್ವವು ಅನೇಕ ಭಕ್ತರನ್ನು ಆಕರ್ಷಿಸಿದೆ.
ಆಧ್ಯಾತ್ಮಿಕತೆ: ಸ್ವಾಮೀಜಿ ಅವರು ಶ್ರೀ ವಿಶ್ವೇಶ ತೀರ್ಥರು ಅವರ ಮಾರ್ಗದರ್ಶನದಲ್ಲಿ ನ್ಯಾಯ ಸುಧಾಮಂಗಲ (ಹಿಂದೂ ಧರ್ಮಗ್ರಂಥಗಳ ಪದವಿ ಹಂತದ ಅಧ್ಯಯನ) ಪೂರ್ಣಗೊಳಿಸಿದ್ದಾರೆ. ಕುಕ್ಕೆ ಮಠದ ಪೀಠಾಧಿಪತಿಯಾದ ನಂತರ, ಸ್ವಾಮೀಜಿ ಅವರು ಸಂಪುಟ ನರಸಿಂಹನನ್ನು ಪ್ರತಿದಿನ ಪೂಜಿಸುವ ಅವಕಾಶವನ್ನು ಪಡೆದರು. ಅವರು ಸ್ವತಃ ಹೆಚ್ಚು ಆಧ್ಯಾತ್ಮಿಕರು ಅಲ್ಲದೆ ಅವರು ತಮ್ಮ ಅನೇಕ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮಗ್ರಂಥಗಳ ಜ್ಞಾನದಿಂದ ಶಿಕ್ಷಣ ನೀಡುತ್ತಿದ್ದಾರೆ.
ಶಿಕ್ಷಣ ತಜ್ಞರು: ಸ್ವಾಮೀಜಿ ಅವರು ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಪ್ರಾಚೀನ ಕಾನೂನು, ವೇದಾಂತ ಮತ್ತು ಸಂಸ್ಕೃತ ವ್ಯಾಕರಣವನ್ನು ಅಧ್ಯಯನ ಮಾಡಿದ್ದಾರೆ. ಈ ವಿದ್ಯಾರ್ಹತೆಗಳ ಜೊತೆಗೆ, ಸ್ವಾಮೀಜಿಯವರು 1992 ರಲ್ಲಿ ಆಧುನಿಕ ಕಾನೂನಿನಲ್ಲಿ ಪದವಿಯನ್ನು ಪಡೆದರು ಮತ್ತು 1994 ರಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದರು. ಸ್ವಾಮೀಜಿ ಸ್ವತಃ ಉನ್ನತ ಶಿಕ್ಷಣ ಪಡೆದಿರುವುದರಿಂದ, ಮಕ್ಕಳ ಜೀವನದಲ್ಲಿ ಶಿಕ್ಷಣದ ಉಪಸ್ಥಿತಿಯಲ್ಲಿ ಅವರು ದೃಢವಾದ ನಂಬಿಕೆ ಹೊಂದಿದ್ದಾರೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಶ್ರೀ ಗೋಪಾಲ ಕೃಷ್ಣ ಹೈಸ್ಕೂಲ್ ಮತ್ತು ಸಂಸ್ಕೃತ ಗುರುಕುಲದ ರಚನೆಗೆ ಮುಂದಾದರು.
ಸಮಾಜ/ಸಮುದಾಯ ಸೇವೆ: ಸ್ವಾಮೀಜಿಯವರು ಸಮಾಜಕ್ಕೆ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಕ್ಕೆ ಮತ್ತು ಸುತ್ತಮುತ್ತ ವಾಸಿಸುವ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಅವರು ರಚಿಸಿದ ಗೋಪಾಲ ಕೃಷ್ಣ ಪ್ರೌಢಶಾಲೆ ಇದಕ್ಕೆ ಸಾಕ್ಷಿಯಾಗಿದೆ. ಇದರ ಹೊರತಾಗಿ ಅವರು ಗೋಸಂರಕ್ಷಣೆಯನ್ನು ಮಾಡುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ