ಅಧ್ಯಾತ್ಮದಲ್ಲಿ ಸೇವೆಯ ಪಾತ್ರ ದೊಡ್ಡದು: ಸ್ವಾಮಿ ಮುಕ್ತಾನಂದ ಮಹಾರಾಜ್

Upayuktha
0

ಮಂಗಳೂರು: ಆಧ್ಯಾತ್ಮಿಕತೆಯೊಂದಿಗೆ ಸೇವೆಯು ಜೊತೆಗೂಡಿದಾಗ ಸಮಾಜಕ್ಕೆ ಅದ್ವಿತೀಯ ವಿಚಾರಗಳು ಲಭ್ಯವಾಗುತ್ತವೆ. ಪ್ರಭು ಶ್ರೀರಾಮಚಂದ್ರನ ವ್ಯಕ್ತಿತ್ವವು ಇದಕ್ಕೊಂದು ಉದಾಹರಣೆ ಎಂದು ಕಾಞಂಗಾಡಿನ ಆನಂದಾಶ್ರಮದ ಸ್ವಾಮೀಜಿ ಮುಕ್ತಾನಂದಜೀ ಮಹಾರಾಜ್ ಹೇಳಿದರು.


ನಗರದ ಬೋಳೂರಿನ ಶ್ರೀಮಾತಾನಂದಮಯಿ ಮಠದಲ್ಲಿ ವಿಷು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉತ್ತಮ ಬದುಕಿಗಾಗಿ ರುಜುಮಾರ್ಗ ಎಂಬ ವಿಚಾರದ ಬಗ್ಗೆ ಅವರು ಉಪನ್ಯಾಸ ನೀಡಿದರು. ನಗರದ ವಿಜಯಕೃಷ್ಣ ಭಕ್ತ ಸಂಘವು ಕಾರ್ಯಕ್ರಮ ಆಯೋಜಿಸಿತ್ತು. 


ಪ್ರಭು ಶ್ರೀರಾಮಚಂದ್ರನದು ಒಂದು ಮಾದರಿಯಾದ ಆದರ್ಶ ವ್ಯಕ್ತಿತ್ವ. ಸೇವೆ ಮತ್ತು ಮಾರ್ಗದರ್ಶನ ಎರಡೂ ಆತನ ವ್ಯಕ್ತಿತ್ವದಲ್ಲಿ ಅಡಗಿದೆ ಎಂದು ಸ್ವಾಮೀಜಿ ಹೇಳಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ ಸಾಹಿತಿ ಹಾಗೂ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ವಸಂತಕುಮಾರ ಪೆರ್ಲ ಅವರು ವಹಿಸಿದ್ದರು. ಮಠವು ಹಮ್ಮಿಕೊಂಡಿರುವ ವಿವಿಧ ಶೈಕ್ಷಣಿಕ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಅವರು ವಿವರಿಸಿದರು.


ವಿಜಯಕೃಷ್ಣ ಭಕ್ತಸಂಘದ ಎಂ. ಆರ್. ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಉದ್ಯಮಿ ರಾಮ್ ಗೋಪಾಲ್ ಅಗರ್ ವಾಲ್, ಅಮೃತಾನಂದ ಸೇವಾ ಸಮಿತಿಯ ಕಾರ್ಯದರ್ಶಿ ಡಾ. ಅಶೋಕ್ ಶೆಣೈ, ಸುಗುಣನ್, ಭಾರತಿ ಸೊರಕೆ ಮೊದಲಾದವರು ಉಪಸ್ಥಿತರಿದ್ದರು. 


ಕಾರ್ಯಕ್ರಮ ಸಂಯೋಜಕರಾದ ಪ್ರಕಾಶ್ ಥಕ್ಕರ್ ಅವರು ಸ್ವಾಮೀಜಿಯವರಿಗೆ ಶಾಲು ಹೊದೆಸಿ ಫಲಪುಷ್ಪಗಳೊಂದಿಗೆ ಸತ್ಕರಿಸಿದರಲ್ಲದೆ ಕೊನೆಯಲ್ಲಿ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top