ಮೈಸೂರು: ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಂಸ್ಕೃತ ಛಾತ್ರ ಪ್ರತಿಭಾ ಸಮಾರೋಹದ ವಿವಿಧ ಸ್ಪರ್ಧೆಗಳಲ್ಲಿ ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಹಲವು ಬಹುಮಾನ ಸಹಿತ ಪದಕ ವಿಜೇತರಾಗಿದ್ದಾರೆ.
ಸುಘೋಷ ಆಚಾರ್ಯ: ಪುರಾಣ- ಇತಿಹಾಸ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ ಸ್ವರ್ಣ ಪದಕ ಮತ್ತು ವೇದಾಂತ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನದೊಂದಿಗೆ ರಜತ ಪದಕ ಗಳಿಸಿದ್ದಾನೆ.
ಸೌಮಿತ್ರಿ ಆಚಾರ್ಯ: ಶ್ಲೋಕ ಅಂತ್ಯಾಕ್ಷರೀ ಸ್ಪರ್ಧೆಯಲ್ಲಿ (ದ್ವಿ) ರಜತ ಪದಕ ಮತ್ತು ಸಾಂಖ್ಯ ಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ (ತೃ)ಕಂಚಿನ ಪದಕ ವಿಜೇತನಾಗಿದ್ದಾನೆ.
ಆಯಾಚಿತ ಶ್ರೀಶ ಆಚಾರ್ಯ: ಧರ್ಮಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ (ದ್ವಿ)ರಜತ ಪದಕ ವಿಜೇತನಾಗಿದ್ದಾನೆ.
ದೇಶದ ವಿವಿಧ ರಾಜ್ಯಗಳ ಒಟ್ಟು 22 ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ಸಂಸ್ಕೃತ ವಿವಿ ಕುಲಪತಿ ಜಿ.ಎಸ್.ಆರ್. ಕೃಷ್ಣಮೂರ್ತಿ, ಕುಲಸಚಿವ ಚೆಲ್ಲಾ ವೆಂಕಟೇಶ್ವರ, ಡೀನ್ ಪ್ರೊ. ಶ್ರೀಪಾದ ಭಟ್, ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಅಧಿಕಾರಿ ಅತುಲ್ ಕೊಠಾರಿ ವಿಜೇತರಿಗೆ ಬಹುಮಾನ ವಿತರಿಸಿದರು ಎಂದು ವ್ಯಾಸತೀರ್ಥ ವಿದ್ಯಾಪೀಠದ ಗೌ. ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ