ಡಾ. ನರೇಂದ್ರ ರೈ ದೇರ್ಲ ಅವರ “ ಎಲ್.ಸಿ.ಸೋನ್ಸ್ ಸೃಷ್ಟಿಸಿದ ಫಲ ಪ್ರಪಂಚ ಸೋನ್ಸ್ ಫಾರ್ಮ್” ಎಂಬ ಕೃತಿಯನ್ನು ಮೂಡುಬಿದಿರೆ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ ಸೋನ್ಸರ ಒಡನಾಟ ಹಾಗೂ ಅವರ ಆದರ್ಶ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಡಾ. ನರೇಂದ್ರ ರೈ ದೇರ್ಲ ಅವರು ಕೃತಿ ರಚನೆಯ ಹಿನ್ನೆಲೆಯ ಬಗ್ಗೆ ವಿವರಿಸುತ್ತಾ ಹಸ್ತಪ್ರತಿಯನ್ನು ನೋಡಿ ಸಂತೋಷಪಟ್ಟಿದ್ದ ಸೋನ್ಸ್ ಅವರ ಅನುಮತಿಯಂತೆ ಪುಸ್ತಕ ಬಿಡುಗಡೆಗೆ ಇಂದಿನ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಇಂದು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಈ ಕೃತಿ ಬಿಡುಗಡೆಗೊಳ್ಳುತ್ತಿರುವುದು ಖೇದದ ಸಂಗತಿಯಾಗಿದೆ ಅಂದರು.
ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀ ಪಡ್ರೆಯವರು ಕೃತಿ ಪರಿಚಯ ನೆರವೇರಿಸಿದರು. ಇತಿಹಾಸ ತಜ್ಞ, ವಿಶ್ರಾಂತ ಪ್ರ್ರ್ರಾಧ್ಯಾಪಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ನುಡಿ ನಮನ ಸಲ್ಲಿಸಿದರು. ಮಾಜಿ ಸಚಿವರಾದ ಅಭಯಚಂದ್ರ ಜೈನ್, ಸಂಪತ್ ಸಾಮ್ರಾಜ್ಯ , ನಾರಾಯಣ ಪಿ.ಎಂ. ಶ್ರೀಪತಿ ಭಟ್, ಕುಲದೀಪ್ ಎಂ, ಪುಷ್ಪರಾಜ್ ಬಿ, ಡಾ. ಸೋನ್ಸ್ ಅವರ ಪತ್ನಿ ಬೆನಿಟಾ ಸೋನ್ಸ್, ಪುತ್ರ ಸುನೀಲ್ ಸೋನ್ಸ್, ಪುತ್ರಿ ಸೋನಿಯಾ ಮಾರ್ಟಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷರಾದ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
.........................................................................
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ