ಪಣಜಿ: ಇದೀಗ ಗೋವಾ ಕರಾವಳಿ ಪೊಲೀಸ್ ಪಡೆಗೆ 15 ಮೀಟರ್ ಇಂಟರ್‌ಸೆಪ್ಟರ್ ಬೋಟ್ ಸೇರ್ಪಡೆಗೊಂಡಿರುವುದರಿಂದ ಗೋವಾದ ಕರಾವಳಿ ಭದ್ರತೆ ಇನ್ನಷ್ಟು ಹೆಚ್ಚಳವಾಗಲಿದೆ. ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ವಾಸ್ಕೋ ಶಿಪ್‍ಯಾರ್ಡ್‍ನಲ್ಲಿ ಈ ಅತ್ಯಾಧುನಿಕ ಬೋಟ್‍ನ್ನು ಪೊಲೀಸ್ ಪಡೆಗೆ ಹಸ್ತಾಂತರಿಸಲಾಯಿತು. 59 ಲಕ್ಷ 40 ಸಾವಿರ ಮೌಲ್ಯದ ಮೂರು ಡ್ರೋನ್ ಕ್ಯಾಮೆರಾಗಳನ್ನು ಸಹ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಾವಂತ್- ನಾವು ಈ ಇಂಟರ್‍ಸೆಪ್ಟರ್ ಬೋಟ್ ಖರೀದಿಸಿದ್ದೇವೆ. ಇದು ಕರಾವಳಿ ಭದ್ರತೆಯ ಬಗ್ಗೆ ನಾವು ಎಷ್ಟು ಗಂಭೀರವಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಗೋವಾ ಶಿಪ್ ಯಾರ್ಡ್ ನಿಗದಿತ ಸಮಯಕ್ಕೆ ಬೋಟ್ ನಿರ್ಮಾಣ ಪೂರ್ಣಗೊಳಿಸಿದೆ. ಈ ಅತ್ಯಾಧುನಿಕ ಬೋಟ್ ಕರಾವಳಿ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಈ ಬೋಟ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ಕೇಂದ್ರ ಮಟ್ಟದಲ್ಲಿ ಈ ಅತ್ಯಾಧುನಿಕ ಬೋಟ್ ನಿರ್ಮಾಣಕ್ಕೆ ಸಾಕಷ್ಟು ಸಂಶೋಧನೆ ನಡೆದಿದೆ. ಡ್ರೋನ್ ಕ್ಯಾಮೆರಾಗಳು ಮತ್ತು ಡ್ರೋನ್ ಉಪಕರಣಗಳು ವಿವಿಧ ವಿಷಯಗಳಿಗೆ ಪ್ರಮುಖವಾಗುತ್ತಿವೆ. ನಾವು ಮೂರು ಡ್ರೋನ್‍ಗಳನ್ನು ಖರೀದಿಸಿದ್ದೇವೆ. ಇದು ಹೆಚ್ಚಿನ ವೇಗ ಮತ್ತು ಹೆಚ್ಚಿನ ತಂತ್ರಜ್ಞಾನವನ್ನು ಹೊಂದಿದೆ. ನಾವು ಅದರಿಂದ ಪ್ರಯೋಜನ ಪಡೆಯುತ್ತೇವೆ, ಈ ಕುರಿತು ಅಗತ್ಯ ತರಬೇತಿಯನ್ನೂ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಗೋವಾ ರಾಜ್ಯ ಕರಾವಳಿ ಭಧ್ರತೆಯ ವಿಷಯದಲ್ಲಿ ನಾವು ಗಂಭೀರವಾಗಿದ್ದೇವೆ. ಕರಾವಳಿ ಭಾಗದಲ್ಲಿ ದಲ್ಲಾಳಿಗಳ ವಿರುದ್ಧ ಹಾಗೂ ಭಿಕ್ಷುಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಅಕ್ರಮ ಚಟುವಟಿಕೆ ಹಾಗೂ ಅಕ್ರಮ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟಲು ಕಟ್ಟೆಚ್ಚರ ವಹಿಸಲಾಗಿದೆ. ದೇಶ-ವಿದೇಶಿಯ ಪ್ರವಾಸಿಗರು ಗೋವಾಕ್ಕೆ ಬರುತ್ತಾರೆ. ಇದರಿಂದಾಗಿ ಸುರಕ್ಷತಾ ದೃಷ್ಠಿಯಿಂದ ಕಟ್ಟೆಚ್ಚರ ವಹಿಸಲು ಪೋಲಿಸ್ ಇಲಾಖೆಗೆ ಸೂಚಿಸಲಾಗಿದೆ. ಅಪರಾಧಿಗಳನ್ನು ಬಂಧಿಸುವಲ್ಲಿ ಗೋವಾ ಪೋಲಿಸರು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದಾರೆ. ಗೋವಾದಲ್ಲಿ ಜಿ-20 ಶೃಂಗಸಭೆ ಆಯೋಜಿಸುವಂತ ಉತ್ತಮ ಅವಕಾಶ ಲಭಿಸಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ