ಹಾಸನ: ಹಾಸನದ ಹೊಯ್ಸಳ ನಗರದ ದೊಡ್ಡ ಪಾರ್ಕಿನಲ್ಲಿ ಹೊಯ್ಸಳೇಶ್ವರ ಸ್ವಾಮಿ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಹೊಯ್ಸಳನಗರ ಕ್ಷೇಮಾಭಿವೃದ್ಧಿ ಸಂಘದವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷ ನಿಂಗೇಗೌಡರು, ಉಪಾಧ್ಯಕ್ಷ ಗೌಡೇಗೌಡ, ಕಾರ್ಯದರ್ಶಿ ಕರೇ ಗೌಡ, ಉಪ ಕಾರ್ಯದರ್ಶಿ ಕೆ.ಟಿ ಮೋಹನ್, ಸತ್ಯ ಮಂಗಲ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮಂಜು ಹಾಸನ, ನಗರದ ಪ್ರಸಿದ್ಧ ಸಾಹಿತಿ, ಶಿಕ್ಷಕಿ, ಸಮಾಜ ಸೇವಕಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ಮತ್ತು ಹಲವಾರು ಸಾರ್ವಜನಿಕರು, ಪುಟಾಣಿ ಮಕ್ಕಳು, ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ಪುಟ್ಟ ಮಕ್ಕಳಿಗೂ, ಬಂದಂತಹ ಸಾರ್ವಜನಿಕರೆಲ್ಲರಿಗೂ ಲಘು ಉಪಹಾರವನ್ನು ವಿತರಿಸಲಾಯಿತು.
ಸಾರ್ವಜನಿಕರಿಗೆ ಹೊಯ್ಸಳ ನಗರದ ಪ್ರತಿಯೊಬ್ಬರು ಈ ಪಾರ್ಕ್‌ನ ಸದುಪಯೋಗ ಪಡೆದುಕೊಳ್ಳುತ್ತಿದ್ದು ಎಲ್ಲರಿಗೂ ಒಳಿತಾಗಲಿ ಎಂದು ಹೊಯ್ಸಳ ನಗರ ಕ್ಷೇಮ ಅಭಿವೃದ್ದಿ ಸಂಘದವರು ತಿಳಿಸಿದರು.
ವರದಿ: ಎಚ್.ಎಸ್. ಪ್ರತಿಮಾ ಹಾಸನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ