ವಿಷು ವಿಶೇಷ ಸ್ಪರ್ಧೆ 2023– ಪ್ರಬಂಧ, ಕಥೆ, ಕವಿತೆ, ನಗೆ ಬರಹಗಳಿಗೆ ಆಹ್ವಾನ

Upayuktha
0


ಸುಳ್ಯ: “ಹವ್ಯಕ” ಎಂಬುದು ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತ ಪಂಗಡ. ಹವ್ಯಕರ ಆಡುಭಾಷೆ “ಹವ್ಯಕಭಾಷೆ” ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ- ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ (oppanna.com) ಎಂಬ ಹವ್ಯಕ ವೆಬ್‌ಸೈಟ್‌ ಕಳೆದ 12 ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. ಸಾಹಿತಿ-ಚಿಂತಕ-ಬರಹಗಾರರ Oppanna.com ಬಳಗದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)” ಸಂಸ್ಥೆಯು ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ಕೊಡುಗೆ ಮತ್ತು ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ವರ್ಷಂಪ್ರತಿ ಸೌರ ಯುಗಾದಿಗೆ ಸಂಪೂರ್ಣ ಹವಿಗನ್ನಡದ ಆಯೋಜನೆಯ “ವಿಷು ವಿಶೇಷ ಸ್ಪರ್ಧೆ” ಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ.


ಈ ವರ್ಷ ಪ್ರತಿಷ್ಠಾನವು ಸೌರ ಯುಗಾದಿಯ ಪರ್ವ ಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ “ವಿಷು ವಿಶೇಷ ಸ್ಪರ್ಧೆ- 2023” ಆಯೋಜನೆಗೊಳಿಸಿದೆ. ಬನ್ನಿ, ಭಾಗವಹಿಸಿ, ನಿಮ್ಮ ಮಿತ್ರರಿಗೂ ತಿಳಿಸಿ.


ವಿಷು ವಿಶೇಷ ಸ್ಪರ್ಧೆ–2023 ವಿವರಗಳು:


1. ಪ್ರಬಂಧ:

ವಿಷಯ: ಯುವಜನರಲ್ಲಿನ ಕೃಷಿ ಆಸಕ್ತಿ

750 ಶಬ್ದಕ್ಕೆ ಸೀಮಿತಗೊಳಿಸಿ


2. ಕಥೆ:

ವ್ಯಾಪ್ತಿ: ಹವ್ಯಕರ ಜನಜೀವನ

(ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)

1000 ಶಬ್ದಕ್ಕೆ ಸೀಮಿತಗೊಳುಸಿ


3. ಕವಿತೆ:

ವಿಷಯ: ಊರಿನ ಜಾತ್ರೆ

30 ಸಾಲುಗಳಿಗೆ ಮಿತಿಗೊಳಿಸಿ.

ಛಂದೋಬದ್ಧವಾದ ಕವಿತೆಗೆ ಹೆಚ್ಚಿನ ಆದ್ಯತೆ.


4. ನಗೆಬರಹ:

ಸದಭಿರುಚಿಯ ಲಘು ಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ)

500 ಶಬ್ದಗಳಿಗೆ ಮಿತಿಗೊಳಿಸಿ.


ನಿಯಮಗಳು:

1. ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಯಲ್ಲಿಇರಬೇಕು.

2. ಹವ್ಯಕ ಪರಂಪರೆ- ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.

3. ಸ್ಪರ್ಧೆಗೆ ಬರುವ ಯಾವುದೇ ಬರಹ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.

4. ಸ್ಪರ್ಧೆಗೆ ಬಂದ ಎಲ್ಲಾ ಬರಹಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ)ದ್ದೇ ಆಗಿರುತ್ತದೆ.

5. ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.

6. ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳು ಇರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು.

7. ಹಿಂದೆ ವಿಷು ವಿಶೇಷ ಸ್ಪರ್ಧೆ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು ಈ ಬಾರಿ ಸ್ಪರ್ಧೆಯ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ.

8. ಬಹುಮಾನ ವಿಜೇತರ ವಿವರಗಳನ್ನು oppanna.com ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

9. ಭಾಗವಹಿಸಲು ಕೊನೆಯ ದಿನಾಂಕ 10-4-2022


ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು ಕಡ್ಡಾಯವಾಗಿ ಬರೆದು ನಿಮ್ಮ ಬರಹದ ಜೊತೆಗೆ ಈ ವಿಳಾಸಕ್ಕೆ ಕಳುಹಿಸಿಕೊಡಿ: oppanna.editor@gmail.com


ಹೆಚ್ಚಿನ ವಿವರ ಅಂತರ್ಜಾಲ ಪುಟದಲ್ಲಿ ಲಭ್ಯ: https://oppanna.com/lekhana/vvs/vishu-spardhe-2023-invitation


ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),

C/o: ತೆಕ್ಕುಂಜ, ಧರ್ಮಾರಣ್ಯ ರಸ್ತೆ, 

ಅಂಚೆ: ಅರಂಬೂರು

ಸುಳ್ಯ ತಾಲೂಕು ದ.ಕ 574314

WhatsApp: +918762921359

Web: http://oppanna.com


ವಿಷು ವಿಶೇಷ ಸ್ಪರ್ಧೆ2023 - ಸಂಚಾಲಕರು:

08547245304

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top