|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆರ್ಟಿಕಲ್-19: ಮಣಿಪಾಲದಲ್ಲಿ ಎರಡು ದಿನಗಳ ಮಾಧ್ಯಮ ಕಾರ್ಯಾಗಾರ ಮಾ.24-25ಕ್ಕೆ

ಆರ್ಟಿಕಲ್-19: ಮಣಿಪಾಲದಲ್ಲಿ ಎರಡು ದಿನಗಳ ಮಾಧ್ಯಮ ಕಾರ್ಯಾಗಾರ ಮಾ.24-25ಕ್ಕೆ


ಮಣಿಪಾಲ: ಭಾರತದ ಮೊದಲ ಮತ್ತು ಅತಿ ದೊಡ್ಡ ಮಾಧ್ಯಮ ಮತ್ತು ಸಂವಹನ ಉತ್ಸವಗಳಲ್ಲಿ ಒಂದಾದ 'ಆರ್ಟಿಕಲ್-19' ಈ ವರ್ಷ ಪುನರಾರಂಭಗೊಂಡಿದ್ದು,  ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಲ್ಲಿ ಮಾರ್ಚ್ 24 ಮತ್ತು 25 ರಂದು ನಡೆಯಲಿದೆ.


ಈ ಎರಡು ದಿನಗಳ ಈವೆಂಟ್‌ ಭಾರತೀಯ ಸಂವಿಧಾನದ ಪ್ರಮುಖ ವಿಷಯವಾದ ವಾಕ್ ಸ್ವಾತಂತ್ರ್ಯದ ಹಿಂದಿನ ತತ್ವವನ್ನು ಪ್ರಚಾರ ಮಾಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮಾಧ್ಯಮಗಳು ಪ್ರಸ್ತುತಪಡಿಸುವ ವಿಚಾರಗಳಲ್ಲಿ ಕಲ್ಪನೆಗಳು, ಆಸಕ್ತಿಗಳು ಮತ್ತು ಭಾವೋದ್ರೇಕಗಳೇ ಅತಿರೇಕವಾಗಿರುವ ಸಂದರ್ಭದಲ್ಲಿ ನಿಜವಾದ ಅಭಿವ್ಯಕ್ತಿಯ ಚೈತನ್ಯವನ್ನು ಪ್ರೇರೇಪಿಸುವ ಮತ್ತು ಆವಾಹನೆ ಮಾಡುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಮಾಧ್ಯಮ ಮತ್ತು ಸಂವಹನವನ್ನು ಪ್ರತಿನಿಧಿಸುವ ಒಂದು ಉತ್ಸವ ಇದಾಗಿದೆ. 


ಡೆಮಾಕ್ರಸಿ ನ್ಯೂಸ್ ಲೈವ್‌ನ ಪ್ರಧಾನ ಸಂಪಾದಕ, ವರ್ಲ್ಡ್ ಈಸ್ ಒನ್ ನ್ಯೂಸ್ (WION) ಸಂಸ್ಥಾಪಕ ಮತ್ತು ಮಾಜಿ ಸಂಪಾದಕ-ಮುಖ್ಯಸ್ಥರಾಗಿರುವ ರೋಹಿತ್ ಗಾಂಧಿ, 1997 ರಲ್ಲಿ MIC ಯ ಮೊದಲ ಪದವೀಧರ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಹಾಗೂ Network18 ನಂತಹ ಮಾಧ್ಯಮ ಸಂಸ್ಥೆಗಳಲ್ಲಿ  ಪ್ರಮುಖ ಭಾರತೀಯ ಮತ್ತು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳಿಗಾಗಿ ಕೆಲವು ಅಪ್ರತಿಮ ಈವೆಂಟ್‌ಗಳ ಸಹ-ಸೃಷ್ಟಿಕರ್ತರೂ ಆಗಿರುವ ವಿಶ್ವನಾಥ್ ವೆಂಕಟರಾಮನ್; ಇಂಡಿಯಾ ಟುಡೆಯಲ್ಲಿ ಪತ್ರಕರ್ತ, ಲೇಖಕ, ಸಂಪಾದಕ ಮತ್ತು ನಿರೂಪಕ ಮತ್ತು ಕಾಶ್ಮೀರ, ಶ್ರೀಲಂಕಾ ಮತ್ತು ಲಿಬಿಯಾದಂತಹ ಸಂಘರ್ಷದ ವಲಯಗಳಿಂದ ವರದಿ ಮಾಡಿದ ಪ್ರಸಿದ್ಧ ರಕ್ಷಣಾ ವರದಿಗಾರರಾಗಿರುವ ಶಿವ ಆರೂರ್ ಅವರು ಪ್ರಧಾನ ಉಪನ್ಯಾಸರಾಗಿದ್ದಾರೆ.


"ನಾವು MIC ಯಲ್ಲಿ ನೈತಿಕ ಮಾಧ್ಯಮದ ಶಕ್ತಿ, ವಿದ್ಯಾರ್ಥಿಗಳ ಶಕ್ತಿ ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯನ್ನು ಪೋಷಿಸಲು ಮತ್ತು ಬಳಸಿಕೊಳ್ಳುವ ಉದಾತ್ತ ಗುರಿಯೊಂದಿಗೆ ಆರ್ಟಿಕಲ್ -19 ಅನ್ನು ಪ್ರಾರಂಭಿಸಿದ್ದೇವೆ. ಈ ವರೆಗೆ 20ಕ್ಕೂ ಹೆಚ್ಚು ಯಶಸ್ವಿ ಉತ್ಸವಗಳನ್ನು ಆಯೋಜಿಸಲಾಗಿದ್ದು,  ಅದೇ ಉತ್ಸಾಹವನ್ನು ಜೀವಂತವಾಗಿ ಇರಿಸಿಕೊಳ್ಳಲು  ನಾವು ಶ್ರಮಿಸುತ್ತೇವೆ ಮತ್ತು ಪ್ರತಿ ವರ್ಷವೂ ದೊಡ್ಡ ಮಟ್ಟದಲ್ಲಿ ಉತ್ತಮ ಪರಿಣಾಮ ಬೀರಲು ನಾವು ಆಶಿಸುತ್ತೇವೆ'' ಎಂದು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ನಿರ್ದೇಶಕಿ ಡಾ. ಪದ್ಮರಾಣಿ ಹೇಳುತ್ತಾರೆ.


ಆರ್ಟಿಕಲ್ - 19 ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಂದಲೇ ರಚಿಸಲ್ಪಟ್ಟ ವೇದಿಕೆಯಾಗಿದೆ. ಈ ವರ್ಷದ ಸಂಘಟನಾ ಸಮಿತಿಯನ್ನು ಅಧ್ಯಾಪಕ ಸಂಯೋಜಕರಾದ ಶ್ರೀಮತಿ ಶ್ರುತಿ ವಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ. ಪತ್ರಿಕೋದ್ಯಮ, ಜಾಹೀರಾತು, ಚಲನಚಿತ್ರ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಹರಡಿರುವ ಸೃಜನಶೀಲ ಮಾಧ್ಯಮ- ಆಧಾರಿತ ಘಟನೆಗಳು, ಆಟಗಳು ಮತ್ತು ಕಲಿಕೆಯ ಅನುಭವಗಳ ಸಮನ್ವಯವನ್ನು ಇಲ್ಲಿ ಗಮನಿಸಬಹುದು. 


ಈ ಕಾರ್ಯಾಗಾರವನ್ನು "ಪಿಚ್ ಪರ್ಫೆಕ್ಟ್" ಎಂಬ ಅತ್ಯಂತ ಒಳನೋಟವುಳ್ಳ ಕಾರ್ಯಾಗಾರವೆಂದು  ಬೆಂಗಳೂರಿನ, ಟಾಕಿಂಗ್ ಟ್ರೀ ಮೀಡಿಯಾ ಸಂಸ್ಥೆಯ ಸಂಸ್ಥಾಪಕ ಮತ್ತು ಸೃಜನಾತ್ಮಕ ನಿರ್ದೇಶಕಿ ಶ್ರೀಮತಿ ಆನ್ ಕುರಿಯನ್ ಬಣ್ಣಿಸಿದ್ದಾರೆ.


ಈ ವರ್ಷದ ಆಯ್ಕೆಯ ವಿಷಯವೆಂದರೆ, 'MIC ಮೂಲಕ ಮೆಟಾವರ್ಸ್.' ಮೆಟಾವರ್ಸ್ ಮಾಧ್ಯಮ ಮತ್ತು ಇಂಟರ್ನೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ದೊಡ್ಡ ಕ್ರಾಂತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಈ ವರ್ಷದ ಆರ್ಟಿಕಲ್-19 ಅನ್ನು ಅದರ ಸುತ್ತ ನಾಜೂಕಾಗಿ ಹೆಣೆಯಲಾಗಿದೆ.


ಮಣಿಪಾಲದ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ಸಂವಹನದ ಮಿತಿಯನ್ನು ವಿದ್ಯಾರ್ಥಿಗಳ TEDx ಟಾಕ್ಸ್ ಮತ್ತು ಮ್ಯಾಡ್ ಜಾಹೀರಾತುಗಳಂತಹ ವಿವಿಧ ಸ್ಪರ್ಧೆಗಳ ಮೂಲಕ ಪರೀಕ್ಷಿಸುತ್ತಾರೆ. 2-ದಿನದ ಈ ಸಮ್ಮೇಳನವು ಪ್ರಶಸ್ತಿ ಸಮಾರಂಭ ಮತ್ತು ಮೋಜಿನ ಮೇಳದೊಂದಿಗೆ ಮುಕ್ತಾಯಗೊಳ್ಳಲಿದೆ, ಇದು ಶಿಕ್ಷಣ ಮತ್ತು ಮನರಂಜನೆಯ ಪರಿಪೂರ್ಣ ಮಿಶ್ರಣವಾಗಿದೆ.


ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಅನ್ನು MAHE ಯಿಂದ 1997 ರಲ್ಲಿ ಸ್ಥಾಪಿಸಲಾಯಿತು, ಇದು ಬೆಳೆಯುತ್ತಿರುವ ಮಾಧ್ಯಮ ಉದ್ಯಮದಲ್ಲಿ ಸಮಗ್ರ ಶಿಕ್ಷಣದ ಮಾನದಂಡವಾಗಿದೆ. ಕಳೆದ 20 ವರ್ಷಗಳಿಂದ  MIC ಆರ್ಟಿಕಲ್ -19 ಅನ್ನು ನಡೆಸುತ್ತಿದೆ, ಇದು ಭಾರತದ ಮೊದಲ ಮಾಧ್ಯಮ ಉತ್ಸವಗಳಲ್ಲಿ ಒಂದಾಗಿದೆ. ಇದು ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪ್ರತಿನಿಧಿಸುತ್ತದೆ ಮತ್ತು ಪ್ರತಿ ವರ್ಷ ಅದನ್ನು ನವೀನ ಮತ್ತು ಶೈಕ್ಷಣಿಕ ರೀತಿಯಲ್ಲಿ ಪ್ರದರ್ಶಿಸುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post