ಮಂಗಳೂರು: ಮಂಗಳೂರಿನ ಪ್ರಪ್ರಥಮ ಆಹಾರೋತ್ಸವ ಫುಡ್ ಫಿಯೆಸ್ಟಾ ಇಂದು ರಾತ್ರಿ 8 ಗಂಟೆಗೆ (ಗುರುವಾರ ಮಾರ್ಚ್ 23) ಅದ್ದೂರಿಯಾಗಿ ಉದ್ಘಾಟನೆಗೊಳ್ಳುತ್ತಿದೆ..
ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರವಿಕುಮಾರ್, ಮೇಯರ್ ಜಯಾನಂದ ಅಂಚನ್, ಪಾಲಿಕೆ ಕಮೀಷನರ್ ಚನ್ನಬಸಪ್ಪ, ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್, ಮೂಡಾ ಕಮೀಷನರ್ ದಿನೇಶ್ ಕುಮಾರ್, ಮೆಸ್ಕಾಂ ಎಂಡಿ ಮಂಜಪ್ಪ ಹಾಗೂ ಗಣ್ಯರು ಭಾಗವಹಿಸುತ್ತಿದ್ದಾರೆ.
ಫುಡ್ ಫೆಸ್ಟಾ ಸಾಂಕೇತಿಕವಾಗಿ ಮಾರ್ಚ್ 22 ಬುಧವಾರದಂದು ಆರಂಭಗೊಂಡಿದ್ದು, ಮೊದಲ ದಿನವೇ ಸಾವಿರಾರು ಜನ ಭಾಗವಹಿಸಿ, ತುಳುನಾಡಿನ, ರಾಜ್ಯ, ದೇಶದ ತರಹೇವಾರಿ ಆಹಾರಗಳನ್ನು ಸವಿದು ಖುಷಿಪಟ್ಟರು. ಚಿಣ್ಣರಿಗಾಗಿ ಕಿಡ್ಸ್ ಝೋನ್, ಸಂಗೀತ ಪ್ರಿಯರಿಗಾಗಿ ಆರ್ಕೆಸ್ಟ್ರಾ, ನೃತ್ಯ ಸಹಿತ ವಿವಿಧ ಪ್ರತಿಭಾ ಅನಾವರಣಕ್ಕೆ ಮಂಗಳೂರಿನ ಫುಡ್ ಫೆಸ್ಟಾ ಸಾಕ್ಷಿಯಾಗುತ್ತಿದೆ. ಮಾರ್ಚ್ 26 ರಾತ್ರಿ ಸಮಾರೋಪಗೊಳ್ಳಲಿರುವ ಈ ಆಹಾರೋತ್ಸವ ಒಟ್ಟು 5 ದಿನ ಭರ್ಜರಿಯಾಗಿ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ