ಮಂಗಳೂರು: ಹೆಸರಾಂತ ಕಥೆಗಾರ, ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಬರೆದ 'ಹಸ್ತಿನಾವತಿ'- ಇದು ಭಾರತದ ಕಥೆ- ಕಾದಂಬರಿಯ ಕುರಿತು ಸಂವಾದ ಕಾರ್ಯಕ್ರಮವೊಂದನ್ನು ನಾಳೆ (ಮಾ.25) ಮಂಗಳೂರಿನ ಬಿಜೈ ಸಮೀಪದ ದಿವ್ಯಾ ಪ್ಯಾರಡೈಸ್ ನಲ್ಲಿ ಸಂಜೆ 5:30ಕ್ಕೆ ಆಯೋಜಿಸಲಾಗಿದೆ.
ಹಸ್ತಿನಾವತಿಯ ಕುರಿತು ಹಿರಿಯರಾದ ವಿವೇಕ್ ರೈ ಮಾತಾಡುತ್ತಾರೆ. ಜತೆಗೆ ನಾ. ದಾಮೋದರ ಶೆಟ್ಟಿ, ಫಾತಿಮಾ ರಲಿಯಾ, ಪ್ರಶಾಂತ್ ಭಟ್ ಮತ್ತು ಆರ್, ನರಸಿಂಹಮೂರ್ತಿಯವರು ಇರುತ್ತಾರೆ. ಪಿ ಬಿ ಹರೀಶ್ ರೈ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಗೆಳೆಯರಾದ ಶ್ರೀನಿವಾಸ ದೇಶಪಾಂಡೆ ಮತ್ತು ಕುಂಟಿನಿ ಗೋಪಾಲಕೃಷ್ಣ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಸ್ವತಃ ಕಾದಂಬರಿಯ ಲೇಖಕರಾದ ಜೋಗಿ ಅವರು ತಮ್ಮ ಪ್ರೀತಿಪಾತ್ರರು, ಸಾಹಿತ್ಯಾಭಿಮಾನಿಗಳನ್ನು ಆಹ್ವಾನಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ