ಮಡಿಕೇರಿ: ಮೇಕೇರಿಯ ಸ್ವಾಗತ ಯುವಕ ಸಂಘದ ಸಭೆಯು ಈ ದಿನ ಶ್ರೀ ಗೌರಿಶಂಕರ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಇತ್ತೀಚೆಗೆ ಯಶಸ್ವಿ ರಕ್ತದಾನ ಶಿಬಿರ ನಡೆಸಲು ಸಹಕರಿಸಿದ ಸರ್ವರ ಕೊಡುಗೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು.
ಇನ್ನು ಮುಂದಿನ ದಿನಗಳಲ್ಲಿ ವರ್ಷಕ್ಕೆ ಕನಿಷ್ಠ 6 ಕಾರ್ಯಕ್ರಮಗಳನ್ನು ಯೋಜನಾ ಬದ್ಧವಾಗಿ ನಡೆಸಲು ಸಭೆ ತೀರ್ಮಾನಿಸಿತು. ನಂತರ ಸ್ವಾಗತ ಯುವಕ ಸಂಘಕ್ಕೆ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಟಿ.ಎನ್. ಉಮೇಶ್, ಉಪಾಧ್ಯಕ್ಷರಾಗಿ ದೀಪಕ್ ಸಿಂಗ್, ಕಾರ್ಯದರ್ಶಿಯಾಗಿ ಪವನ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಕೆ.ಎಸ್. ರಾಜೇಶ್, ಖಜಾಂಚಿಯಾಗಿ ಭವನ್ ಕುಮಾರ್, ಸಹ ಖಜಾಂಚಿಯಾಗಿ ಅರ್ಪಿತ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ವಿಜು ಹರೀಶ್ ಹಾಗೂ ನಿಕಟಪೂರ್ವ ಖಜಾಂಚಿ ಬಿ.ಎಸ್. ಅಶೋಕ್ ಸೇರಿದಂತೆ ಹಾಜರಿದ್ದ ಯುವಕ ಸಂಘದ ಸರ್ವ ಸದಸ್ಯರುಗಳು ನೂತನ ಪದಾಧಿಕಾರಿಗಳಿಗೆ ಈ ಸಂದರ್ಭ ಶುಭ ಹಾರೈಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ