ಹಾವೇರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ 'ನಮ್ಮೂರು ನಮ್ಮಕೆರೆ' ಹಾಗೂ ಕೇಂದ್ರ ಸರಕಾರದ ಮನೇರೆಗಾ ಕಾರ್ಯಕ್ರಮದಡಿ ಪುನಃಶ್ಚೇತನಗೊಳಿಸಲಾದ ಹಾವೇರಿ ಕಬ್ಬೂರು ಕೆರೆಗೆ ಧರ್ಮಾಧಿಕಾರಿ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಾಗಿನ ಅರ್ಪಿಸುವುದರ ಮೂಲಕ ಊರಿನ ಜನತೆಗೆ ಹಸ್ತಾಂತರಿಸಿದರು.
ಈ ಸಂರ್ದಭ ಪ್ರಗತಿ ಬಂಧು/ ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. ಪೂಜ್ಯರ ಆಶ್ರಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಕಲ ಸಜೀವ ಸಂಕುಲಕ್ಕೆ ಜೀವಜಲ ಒದಗಿಸುವ ಅಂರ್ತಜಲ ವೃದ್ಧಿಸುವ ನೆಲೆಯಲ್ಲಿ ಈವರೆಗೆ 488 ಪಾರಂಪರಿಕ ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ. ಕಬ್ಬೂರು ಕೆರೆಗೆ ಬಾಗಿನ ಅರ್ಪಿಸುವುದರ ಮೂಲಕ ಊರಿನ ಜನತೆಗೆ ಕೆರೆ ಲೋಕಾರ್ಪಣೆ ಮಾಡಲಾಯಿತು.
ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮ ಉದ್ಗಾಟಿಸಿ ಕಬ್ಬೂರು ಗ್ರಾಮದಲ್ಲಿರುವ ಸ್ವ-ಸಹಾಯ ಗುಂಪುಗಳ ಒಕ್ಕೂಟ್ಟಕ್ಕೆ ದಾಖಲಾತಿ ಹಸ್ತಾಂತರ ಮಾಡಿದರು. ನಂತರ ಮಾತನಾಡುತ್ತ ಸ್ವಸಹಾಯ ಸಂಘ ಅಂದರೆ ನಮಗೆ ನಾವೇ ಸಹಾಯ ಮಾಡಿಕೊಳ್ಳುವುದು ಎಂದು ತಿಳಿಸುತ್ತ, ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ತಮ್ಮ ಸರ್ವಾಂಗೀಣ ಅಭಿವೃದ್ಧಿ ಆಗಿರುತ್ತಾರೆ. ಪ್ರತಿ ವಾರ 10 ರೂಪಾಯಿ ಉಳಿತಾಯ ಮಾಡುವ ಮೂಲಕ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆರೂ. 68.11 ಕೋಟಿ ಉಳಿತಾಯ ಮಾಡಿರುವ ಬಗ್ಗೆ ಉಲ್ಲೇಖಿಸಿದರು. ಉರಿನಲ್ಲಿರುವ ಕೆರೆಗಳು ನನ್ನ ಕೆರೆ ಅಲ್ಲ, ನಮ್ಮ ಕೆರೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಇದರಿಂದ ಊರಿನ ಜನರೆಲ್ಲ ಕೆರೆಯ ನೀರನ್ನು ಸಮಾನವಾಗಿ ಹಂಚಿಕೊಂಡಾಗ ಪ್ರೀತಿ ವಿಶ್ವಾಸ ವೃದ್ಧಿಸುವುದಾಗಿ ತಿಳಿಸಿದರು.
ನಂತರ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳ ವಿತರಿಸಲಾಯಿತು ಹಾಗೂ ವಿವಿಧ ದೇವಸ್ಥಾನಕ್ಕೆ ಬಂದಿರುವ ಅನುದಾನವನ್ನು ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಚ. ಉದಾಸಿ, ಬಳ್ಳಾರಿ ಶಾಸಕ ವಿರೂಪಾಕ್ಷ, ಹಾವೇರಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ, ಕಬ್ಬೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮಾಳವ್ವ ಗುಡ್ಡಪ್ಪ ಕರಿಗಾರ, ಬ್ಯಾಡಗಿಯ ಮಾಜಿ ಶಾಸಕ ಬಸವರಾಜನೀ. ಶಿವಣ್ಣನವರ, ಹಾವೇರಿ ಹಾಲು ಓಕ್ಕೂಟ ಅಧ್ಯಕ್ಷ ಬಸವರಾಜ ಅರಬಗೊಂಡ, ಗ್ರಾ.ಪಂ. ಉಪಾಧ್ಯಕ್ಷ ಪುಟ್ಟಪ್ಪ ಶೇಖಪ್ಪ ಗಿರಿಗೌಡ್ರು ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಕರಿಬಸಪ್ಪ ದ್ಯಾ. ಹೊಸಳ್ಳಿ, ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ, ಹಾವೇರಿ ಜಿಲ್ಲೆ ನಿರ್ದೇಶಕ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ