ವಿದ್ಯಾರ್ಥಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಆರ್ಕಿಡ್ಸ್ 'ಜೂನಿಯರ್ ಐನ್‌ಸ್ಟೀನ್' ಸ್ಪರ್ಧೆ

Upayuktha
0

ಆರ್ಕಿಡ್ಸ್ ಇಂಟರ್ ನ್ಯಾಷನಲ್‌ ಸ್ಕೂಲ್‌ನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ಯಾನ್- ಇಂಡಿಯಾ ಕಾರ್ಯಕ್ರಮ




ಬೆಂಗಳೂರು: ಭಾರತದ ಪ್ರಮುಖ K12 ಶಾಲಾ ಸರಪಳಿಯಾಗಿರುವ ಆರ್ಕಿಡ್ಸ್‌  ಇಂಟರ್ನ್ಯಾಷನಲ್‌ ಸ್ಕೂಲ್‌ ಅಪ್ಲಿಕೇಶನ್‌  ಆಧಾರಿತ ಕಲಿಕೆಯನ್ನು ಉತ್ತೇಜಿಸುವ ಮತ್ತು ದೇಶದ ತನ್ನೆಲ್ಲ ಶಾಖೆಗಳಲ್ಲಿ ಉದಯೋನ್ಮುಖ ವಿಜ್ಞಾನಿಗಳನ್ನು ಉತ್ತೇಜಿಸುವ ಗುರಿಯೊಂದಿಗೆ `ಜೂನಿಯರ್ ಐನ್‌ಸ್ಟೀನ್‌' ಸ್ಪರ್ಧೆಯನ್ನು ಇತ್ತೀಚೆಗೆ ಆಯೋಜಿಸಿತ್ತು. ದೇಶದೆಲ್ಲೆಡೆ ಹಬ್ಬಿರುವ ಆರ್ಕಿಡ್‌ ಶಾಖೆಗಳನ್ನು ಪ್ರತಿನಿಧಿಸುವ ಸುಮಾರು 200 ತಂಡಗಳು ಭಾಗವಹಿಸಿದ್ದವು. ಪ್ರತಿ ತಂಡದಲ್ಲೂ 2ರಿಂದ 5 ವಿದ್ಯಾರ್ಥಿಗಳಿದ್ದರು.


ಜೂನಿಯರ್ ಐನ್‌ಸ್ಟೀನ್ ಸ್ಪರ್ಧೆಯನ್ನು  ಸವಾಲುಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಿದ್ದ ಮೂರು ಸುತ್ತುಗಳಲ್ಲಿ ನಡೆಸಲಾಯಿತು. ಹಂತ 1ರಲ್ಲಿ, ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಮಾದರಿಯನ್ನು ಪ್ರಸ್ತುತಪಡಿಸಿದರು. 2ನೇ ಹಂತದಲ್ಲಿ ಸೂಚಿಸಲಾದ ಮಾರ್ಪಾಡುಗಳ ಆಧಾರದ ಮೇಲೆ ತಮ್ಮ ಮಾದರಿಗಳನ್ನು ಮರು ವಿನ್ಯಾಸಗೊಳಿಸಿ ಪ್ರದರ್ಶಿಸಿದರು. ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಮಾದರಿಗಳ ಮೂಲಕ ಪರಿಹರಿಸಬೇಕಾದ ಸಮಸ್ಯೆಗಳನ್ನು ತೀರ್ಪುಗಾರರು ನೀಡಿದರು.



ಆರ್ಕಿಡ್ಸ್ STEM ಶಿಕ್ಷಣ ಮತ್ತು ರೊಬೊಟಿಕ್ಸ್, DIY, ವಿಜ್ಞಾನ ಮತ್ತು ಗಣಿತವನ್ನು ಒಳಗೊಂಡಿರುವ ಅಪ್ಲಿಕೇಶನ್-ಆಧಾರಿತ ಪಠ್ಯಕ್ರಮಕ್ಕೆ ಸಂವಾದಿಯಾಗಿ ಈ ರಚನಾತ್ಮಕ ಸ್ಪರ್ಧೆಯನ್ನು ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ನಾವೀನ್ಯ ಮತ್ತು ಕೌಶಲವನ್ನು ಪ್ರದರ್ಶಿಸಿದರು.


ಸ್ಪರ್ಧೆಯು ಯುವ ಮನಸ್ಸುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಉತ್ಸಾಹವನ್ನು ತುಂಬಿತು. ಪುಣೆಯ ನಿಗದಿ ಶಾಖೆಯು ಪ್ರದರ್ಶಿಸಿದ ಪೋರ್ಟಬಲ್‌ ಸೋಲಾರ್ ವಾಟರ್ ಡಿಸಾಲಿನೇಟೆಡ್ ಮಾದರಿ ಮತ್ತು ಮಹಾರಾಷ್ಟ್ರದ ಔರಂಗಾಬಾದ್‌ನ ಕಳೆ ಕತ್ತರಿಸುವ ಯಂತ್ರದ ಮಾದರಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವು.


ಆರ್ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್‌ನ  ಶೈಕ್ಷಣಿಕ ವಿಷಯಗಳ ಅನುಷ್ಠಾನ ವಿಭಾಗದ ಮುಖ್ಯಸ್ಥರಾದ ಜಿಮ್ಮಿ ಅಹುಜಾ ಪ್ರತಿಕ್ರಿಯಿಸಿ, “ಅಪ್ಲಿಕೇಶನ್ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಮತ್ತು ನಮ್ಮ ಶಾಲೆಗಳ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಆಯೋಜಿಸಿದ್ದ ಜೂನಿಯರ್ ಐನ್‌ಸ್ಟೀನ್‌ ಸ್ಪರ್ಧೆಯು ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಪ್ರದರ್ಶಿಸಿದ ಸೃಜನಶೀಲತೆ ಮತ್ತು ನಾವೀನ್ಯದ ಮಟ್ಟವು ಅದ್ಭುತವಾಗಿತ್ತು.


ಯುವ ಮನಸ್ಸುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾಗಿ ಇರುವ ಉತ್ಸಾಹ ಚೇತೋಹಾರಿ ಯಾಗಿದೆ. ಪಠ್ಯಪುಸ್ತಕಗಳನ್ನು ಮೀರಿ ಯೋಚಿಸಲು, ಹೊಸ ವಿಷಯಗಳನ್ನು ಅನ್ವೇಷಿಸಿ ಮತ್ತು ಸಾಮರ್ಥ್ಯ ಸಾಬೀತುಪಡಿಸಲು ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯು ಉತ್ತೇಜನ ನೀಡಿದೆ" ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top