ಕುಂಬಳೆ: ಇಂದು ವಸಂತ ಕಾವ್ಯೋತ್ಸವ

Upayuktha
0

ಸಿರಿಗನ್ನಡ ವೇದಿಕೆ ಕಾಸರಗೋಡು ಆಯೋಜನೆ


ಕಾಸರಗೋಡು: ಸಿರಿಗನ್ನಡ ವೇದಿಕೆ ಬೆಂಗಳೂರು- ಇದರ ಕೇರಳ ಗಡಿನಾಡ ಘಟಕದ ವಿಂಶತ್ಯುತ್ಸವದ ಅಂಗವಾಗಿ ವಸಂತ ಕಾವ್ಯೋತ್ಸವ 2023 ಮಾ.19ರಂದು ಭಾನುವಾರ ಕುಂಬಳೆ ಸಮೀಪದ ನಾರಾಯಣಮಂಗಲದ 'ಶ್ರೀನಿಧಿ' ಮನೆಯಲ್ಲಿ ನಡೆಯಲಿದೆ.


ಅಪರಾಹ್ನ 2:30 ಗಂಟೆಗೆ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ವಿ.ಬಿ. ಕುಳಮರ್ವ ಅವರ ನಿವಾಸದಲ್ಲಿ ಶ್ರೀಮತಿ ಲಲಿತಾಲಕ್ಷ್ಮೀ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ಹಿರಿಯ ಗಮಕಿಗಳಾದ ಶಂಕರನಾರಾಯಣ ಭಟ್ ತೆಕ್ಕೇಕೆರೆ, ಸಾಹಿತಿ ವಾಮನರಾವ್ ಬೇಕಲ್, ರಾಧಾಕೃಷ್ಣ ಉಳಿಯತ್ತಡ್ಕ ಅವರು ಶುಭಾಶಂಸನೆ ನೆರವೇರಿಸಲಿದ್ದಾರೆ.

ಅನುಷಾ ಎಸ್ ಪ್ರಾರ್ಥನೆ ಗೀತೆ ಹಾಡಲಿದ್ದಾರೆ. ಬಳಿಕ ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ ಗಾಯನ, ಗಮಕ ವಾಚನ- ವ್ಯಾಖ್ಯಾನವಿದೆ. ಇದಕ್ಕೆ ಮುನ್ನ ಟಿ.ಕೆವಿ ಭಟ್ ವಿರಚಿತ 'ಮುಕ್ತಕ ಸುಮ ' ಹಾಗೂ ಶ್ರೀಮತಿ ಲಕ್ಷ್ಮೀ ವಿ. ಭಟ್, ಮಂಜೇಶ್ವರ ಅವರ ಜನಮಾನ್ಯ ಮುಕ್ತಕಗಳು ಕೃತಿ ಬಿಡುಗಡೆಯಾಗಲಿವೆ. ಈ ಕೃತಿಗಳನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟ ಮತ್ತು ವಿ.ಬಿ. ಕುಳಮರ್ವ ಅವರು ಲೋಕಾರ್ಪಣೆ ಮಾಡಲಿದ್ದಾರೆ.


ಬಳಿಕ ಟಿ.ಎ.ಎನ್ ಖಂಡಿಗೆ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ಸುಮಾರು 26 ಮಂದಿ ಕವಿಗಳು- ಕವಯಿತ್ರಿಯರು ಭಾಗವಹಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top