ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಮಾಲೋಚನಾ ಸಭೆ

Upayuktha
0

ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಪ್ರೇಮಾನಂದ ಕುಲಾಲ್ ಆಯ್ಕೆ


ಮಂಗಳೂರು: ಇತಿಹಾಸ ಪ್ರಸಿದ್ದ ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಮಗ್ರ ಜೀರ್ಣೋದ್ಧಾರಗೊಂಡು ಮೇ 14ರಿಂದ 24ರ ವರೆಗೆ ನಡೆಯಲಿರುವ  ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ ಕ್ಷೇತ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.


ಸಭೆಯಲ್ಲಿ ಬ್ರಹ್ಮ ಕಲಶೋತ್ಸವದ ಅಧ್ಯಕ್ಷರಾಗಿ ಪ್ರೇಮಾನಂದ  ಕುಲಾಲ್ ಆಯ್ಕೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ  ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ದೇವಸ್ಥಾನ ಜೀರ್ಣೋದ್ಧಾರಗೊಂಡಾಗ ಗ್ರಾಮ ಅಭಿವೃದ್ಧಿಯಾಗುತ್ತದೆ. ಸಮಾಜ ಬಲಿಷ್ಠಗೊಳ್ಳುತ್ತದೆ. ದೇವಸ್ಥಾನ ಧಾರ್ಮಿಕ ಕೇಂದ್ರವಾಗದೆ ಸಾಮಾಜಿಕ ಶೈಕ್ಷಣಿಕ ಸೇವಾಕಾರ್ಯಗಳ ಕೇಂದ್ರವಾಗಲಿದೆ ವೀರನಾರಾಯಣ ಕ್ಷೇತ್ರ ಹಿಂದು ಸಮಾಜದ ಪವಿತ್ರ ಕ್ಷೇತ್ರವಾಗಲಿದೆ ಎಂದು ನುಡಿದರು.


ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಪಾವಿ ಜೀರ್ಣೋದ್ಧಾರದ ಪ್ರಕ್ರಿಯೆಗೆಗಳ ಬಗ್ಗೆ ಮತ್ತು ಸಮಿತಿಯ ಪದಾಧಿಕಾರಿಗಳ ಸದಸ್ಯರ ಯಾದಿಯನ್ನು ವಾಚಿಸಿದರು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ದಾಮೋದರ್ ಪ್ರಾಸ್ತಾವಿಕ ಮಾತುಗಳಾಡಿದರು. ವೇದಿಕೆಯಲ್ಲಿ ದೇವಸ್ಥಾನದ ಮಹಿಳಾ ವಿಭಾಗದ ಅಧ್ಯಕ್ಷ ಗೀತಾ ಮನೋಜ್,ಮುಂಬಯಿ ಸಮಿತಿಯ ಅಧ್ಯಕ್ಷ ಬಿ ದಿನೇಶ್ ಕುಲಾಲ್ ಬೆಂಗಳೂರು ಸಮಿತಿಯ ಅಧ್ಯಕ್ಷ ಮಾದವ ಕುಲಾಲ್ ಉಪಸ್ಥತರಿದ್ದರು.


ಪ್ರೇಮಾನಂದ ಕುಲಾಲ್ ಮಾತನಾಡುತ್ತಾ ಭಕ್ತಾಭಿಮಾನಿಗಳ ಸಹಕಾರದಿಂದ ದೇವಸ್ಥಾನದ ಜೀರ್ಣೋದಾರದ ಕಾರ್ಯ ವೇಗದಲ್ಲಿ ಸಾಗುತ್ತಿದೆ ಮುಂದೆ ನಡೆಯಲಿರುವ ಬ್ರಹ್ಮ ಕಲಶ ಅಭೂತಪೂರ್ವಾಗಿ ನಡೆಯುವುದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ನುಡಿದರು.


ಕಾರ್ಯಕ್ರಮವನ್ನು ನ್ಯಾಯವಾದಿ ರವೀಂದ್ರ ಮುನ್ನಿಪಾಡಿ, ನಿರೂಪಿಸಿದರು, ಸದಾಶಿವ ಕುಲಾಲ್ ಧನ್ಯವಾದ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top