ಕನಸು: ಮಲ್ಲಿಗೆ ಎಸಳು ಮರಿ ಹಾಕಿತೇ?

Upayuktha
0

ಪ್ರಜ್ಞಾ ಅಕ್ಕನ ತಂಗಿ ಪಂಚಮಿ ನೋಡಲು ತುಂಬಾ ಲಕ್ಷಣ, ನಾನು ಮತ್ತು ಅವಳು ಪ್ರೈಮರಿ ಶಾಲೆಯಿಂದ ಒಟ್ಟಿಗೆ ಕಲಿತವರು, ಕೆಲವರ ಜೀವನದಲ್ಲಿ ಆದ ಅನುಭವ ನನಗೂ ಆಗಿತ್ತು. ಅವಳು ಒಂದು ನವಿಲು ಗರಿ ನನಗೆ ಕೊಟ್ಟಿದ್ಲು. ನಾನು ಅದನ್ನು ಜೋಪಾನವಾಗಿ ಪುಸ್ತಕದಲ್ಲಿ ಇಟ್ಟಿದ್ದೆ. ಡಿಗ್ರಿಯಲ್ಲಿ ನಾವು ಬೇರೆ ಬೇರೆ ಕಾಲೇಜಿಗೆ ಹೋದೆವು, ಅಷ್ಟರ ತನಕ ನಮ್ಮ ನಡುವೆ ಬರೀ ಗೆಳೆತನ ಇತ್ತು, ಬಳಿಕ ನನಿಗೆ ಅದು ಒನ್ ಸೈಡ್ ಲವ್ ಆಗಿ ಪರಿವರ್ತನೆಗೊಂಡಿತ್ತು. ಇನ್ನು ಫ್ರೆಂಡ್‌ಶಿಪ್ ಹಾಳಾಗುವುದು ಬೇಡ ಎಂದು ನಾನು ಅವಳ ಬಳಿ ಏನು ಹೇಳಲಿಲ್ಲ.


ಅವಳಿಗೆ ಬೆಂಗಳೂರು ಅಲ್ಲಿ ಪ್ಲೇಸ್ಮೆಂಟ್ ಆಯ್ತು ಜಾಬ್ ಅಂತ ಬೆಂಗಳೂರಿಗೆ ಹೋದ್ಲು ನನ್ನ ಅಣ್ಣ ಮೊದಲೇ ಫಾರಿನ್ ಅಲ್ಲಿ ಇದ್ದ ಹಾಗಾಗಿ ನನ್ನನು ಊರಿನಲ್ಲೇ ಕೆಲಸ ಮಾಡಲು ನನ್ನ ತಂದೆ ಸೂಚಿಸಿದ್ರೂ, ನಾನು ಹಾಗೆ ಮಾಡಿದೆ. ಅದು ಪ್ರಜ್ಞಾ ಅಕ್ಕನ ಮದುವೆಯ ಸಂಭ್ರಮ, ಮನೆಯ ಸುತ್ತಮುತ್ತ ಲೈಟಿಂಗ್ ಡೆಕೋರೇಷನ್‌ನ ಅಲಂಕಾರ, ಮನೆಯ ಒಳಗೆ ಗೋಡೆಗೆ ಬಡಿದ ಪೈಂಟ್ ನ ಪರಿಮಳ ಮೂಗಿಗೆ ಹೊಡೀತಾ ಇತ್ತು. ಪಂಚಮಿ ಊರಿಗೆ ಬಂದಿದ್ಲು. ನನ್ನ ಹತ್ರ ಅವಳೇ ಬಂದು ಮಾತು ಆರಂಭಿಸಿದ್ಲು, ನಾನು ಅವಳ ಯೋಗ ಕ್ಷೇಮ ವಿಚಾರಿಸಿದೆ, ಅವರ ಅಪ್ಪ ಕೇಶವ್ ಅಣ್ಣ ನನಗೆ ಮದುವೆ ಕಾರ್ ಮತ್ತು ಅದರ ಡೆಕೋರೇಷನ್ ಕೆಲಸ ವಹಿಸಿದ್ರು ಮತ್ತು ಮದುವೆ ಹೆಣ್ಣಿನ ಕಾರ್ ನಾನು ಡ್ರೈವ್ ಮಾಡ್ತೇನೆ ಎಂದು ನಿಶ್ಚಯಿಸಿದೆ. ನಾನು ಬೆಳಿಗ್ಗೆ ಮದುವೆ  ಕಾರ್ ಡೆಕೋರೇಷನ್ ಮಾಡ್ತಾ ಇದ್ದೆ, ಮನೆಯ ಹಿರಿಯರಾದ ಸುಂದರ್ ಅಣ್ಣ ತಿಂಡಿಗೆ ಕರೆದ್ರು ಪ್ಲೇಟ್ ಅಲ್ಲಿ ಸಜ್ಜಿಗೆ ಬಜಿಲ್ ಹಿಡಿದು ಮುಂದೆ ಬರುವಾಗ ಪಂಚಮಿ ಹೊರಗೆ ಬಂದ್ಲು, ಮದುವೆ ಹೆಣ್ಣು ಪ್ರಜ್ಞಾಕ್ಕಿಂತ ಇವಳೇ ಒಳ್ಳೆ ಅಪ್ಸರೆ ತರ ಕಾಣ್ತಾ ಇದ್ಲು. ಮಲ್ಲಿಗೆಯ ಜಡೆ, ಜುಮ್ಕಿ, ಮೈ ತುಂಬಾ ರೋಡ್ ಗೋಲ್ಡ್ ಆಭರಣ ನೋಡಿ ನಾನು ದಂಗಾಗಿ ಹೋದೆ,ಸ್ವಲ್ಪ ಹೊತ್ತು ನೋಡುವಾಗ ಪಂಚಮಿ ತುಟಿಗೆ ಹಚ್ಚಿದ lipstick ಹೋಗಬಾರದು ಎಂದು ಮೆಲ್ಲನೇ ತಿಂಡಿ ತಿಂದ್ಲು, ನಾನು ಚೆನ್ನಾಗಿ ರೆಡಿ ಆಗಿ ಬಂದು ಕಾರ್ ರೆಡಿ ಮಾಡಿದೆ, ಮದುವೆ ದಿಬ್ಬಣ ಹೊರಟಿತು. ಮದುವೆ ಮಂಟಪದಲ್ಲಿ ನನ್ನ ಗಮನ ಇವಳ ಕಡೆಗೇ ಇತ್ತು.


ಮದುವೆ ಮುಗಿದ ತಕ್ಷಣ "ಪೊಣ್ಣು ಒಚ್ಚಿದ್ ಕೊರ್ಪುನು" ಎಂಬ ತುಳುನಾಡಿನ ಸಂಪ್ರದಾಯ ಆಗುವಾಗ ಪ್ರಜ್ಞಾ ಅಕ್ಕನಿಗೆ ದುಃಖ ಬಂತು. ಇದನ್ನು ನೋಡಿದ ಪಂಚಮಿಯ ಕಣ್ಣಂಚು ಒದ್ದೆಯಾಯಿತು. ಬೆಳಗ್ಗೆ ಹಾಕಿದ ಮಲ್ಲಿಗೆಯ ಜಡೆ ಬಾಡಿ ಹೋಗಿತ್ತು. ಇದನ್ನು ನೋಡಿ ನಂಗೂ ಒಂದು ಕಡೆ ಬೇಸರ ಆದರೂ ಸುಮ್ಮನಾದೆ. ಪಂಚಮಿಯ ಮುಖ ನೋಡಿ ಒಬ್ರು ಹಿರಿಯರು ಹೇಳಿದ್ರು ಅಕ್ಕನ ಆಂಡ್ ನನದ ಮದಿಮಾಲ್ ಇಯೇ ಎಂಬ ಮಾತು ಅಲ್ಲಿ ಬಂತು. ಅಷ್ಟರಲ್ಲಿ ಒಂದು ಅಧಿಕ ಪ್ರಸಂಗಿ ಹೆಂಗಸು ಹೇಳಿತು. ಅಲೆಗ್ ಯಾನ್ ಒಂಜಿ ಆನ್ ನಾರ್ದ್ ದಿತೇ ಎಂದು "ಅವಾಗ್ಲೇ ನಾನು ಪಂದ್ಯದಲ್ಲಿ ಸೆಮಿ ಪ್ರವೇಶಿಸದೆ ಲೀಗ್ ಹಂತದಲ್ಲೇ ಹೊರ ಬಿದ್ದ ಅನುಭವ, ನನ್ನ ಮನಸು ಕಲ್ಲು ಆಯ್ತು, ಅಷ್ಟು ಹೊತ್ತಿಗೆ ನನ್ನ ಗೆಳೆಯ ನೀರ್ ನೀರ್ ಐಸ್ ಕ್ರೀಮ್ ತಗೊಂಡು ಬಂದು ಹೇಳಿದ "ಈ ಐಸ್ ಕ್ರೀಮ್ ತಿನ್ನು ನಿನ್ನ ಕಲ್ಲ್ ಹೃದಯ ಸರಿ ಆಗಬೋದು' ಎಂದ. ನಾನು ಏನೂ ಮಾತನಾಡದೆ ಸುಮ್ಮನಾದೆ. ನಂತರ ಪಂಚಮಿ, ಅವಳ ತಂದೆ-ತಾಯಿ, ಸೋದರ ಮಾವ ನನ್ನ ಕಾರಲ್ಲಿ ಬಂದ್ರು…


ಪಂಚಮಿ ಕಾರ್ ನಿಂದ ಇಳಿವಾಗ ಹೇಳಿದ್ಲು ನೆಕ್ಸ್ಟ್ ನಿನ್ನ ಬರೀಟ್ ಯಾನೆ ಕುಲ್ಲುವೆ, ಅವಳು ಮದುವೆ ಮಂಟಪದಲ್ಲಿ ನನ್ನ ಪಕ್ಕ ಕುತ್ಕೊಳ್ತಾಳ ಅಥವಾ ಪುನಃ ಅವಳ ಮದುವೆಗೆ ನಾನೆ ಡ್ರೈವರ್ ಆಗಿ ಬರ್ತೇನ" ಅವಳು ಯಾವ ಅರ್ಥದಲ್ಲಿ ಹೇಳಿದ್ದು ಅಂತ ಗೊತ್ತೆ ಆಗ್ಲಿಲ್ಲ…. ಆದ್ರೂ ಅವಳು ಜಡೆಗೆ ಹಾಕಿದ ಮಲ್ಲಿಗೆಯ ಎಸಳು ನನ್ನ ಕಾರ್ ಸೀಟ್ ಅಲ್ಲಿ ಹಾಗೇ ಇತ್ತು. ಅವಳು ಪ್ರೈಮರಿಯಲ್ಲಿ ಕೊಟ್ಟ ನವಿಲು ಗರಿ ಮರಿ ಹಾಕ್ಲಿಲ್ಲ. ಈವಾಗ ಅವಳು ಬಿಟ್ಟು ಹೋದ ಮಲ್ಲಿಗೆ ಎಸಳು ಮರಿ ಹಾಕುತ್ತಾ ನೋಡಬೇಕು….!

-ವೈಶಾಖ್ ಮಿಜಾರ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top