ಪುತ್ತೂರು: ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇರಬೇಕು. ಹಾರ್ಡ್‍ವರ್ಕ್‍ಗಿಂತ ಸ್ಮಾರ್ಟ್‍ವರ್ಕ್ ಮುಖ್ಯ. ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಮಾತಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಹಾಗೂ ಛಲವಿರಬೇಕು ಎಂದು ಬೆಂಗಳೂರು ಎಸ್ ಕೆ ಎಫ್ ನ ಫೈನಾನ್ಸ್ ಆ್ಯಂಡ್ ಕಾಸ್ಟ್ ಕಂಟ್ರೋಲಿಂಗ್ ಸಂಸ್ಥೆಯ ಅಸೋಸಿಯೇಟ್ ರಶ್ಮಿ ಬಿ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ಆಯೋಜಿಸಲಾದ ಪಯಣ 'ಹಳೆ ವಿದ್ಯಾರ್ಥಿಗಳ ಜೊತೆ ಸಂವಾದ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಯಾವುದೇ ಪರೀಕ್ಷೆ ಎದುರಿಸಲು ಅಥವಾ ಕೆಲಸ ನಿರ್ವಹಿಸಲು ಪೂರ್ವ ತಯಾರಿ ಇರಬೇಕು. ಮಾಡುವ ಕೆಲಸದಲ್ಲಿ ತಪ್ಪುಗಳು ಇರಬಾರದು ದಕ್ಷತೆ ಇರಬೇಕು. ವಿದ್ಯಾರ್ಥಿಗಳು ತ್ಯಾಗ, ಜವಾಬ್ದಾರಿ ಹಾಗೂ ಬದ್ಧತೆಗಳನ್ನು ಅಳವಡಿಸಿಕೊಳ್ಳಬೇಕು. ಅಂತೆಯೇ ಕಾರ್ಪೊರೇಟ್ ಜಗತ್ತಿನಲ್ಲಿ ಸಿಗುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ ಮಾತನಾಡಿ, ಎಲ್ಲಿ ಸವಾಲುಗಳಿವೆಯೋ ಅಲ್ಲಿ ಸಾಧ್ಯತೆಗಳಿವೆ. ಬಂದ ಸವಾಲುಗಳನ್ನು ಅವಕಾಶಗಳನ್ನಾಗಿ ಸೃಷ್ಟಿಸಿಕೊಂಡು ಯಶಸ್ವಿಯಾಗಬೇಕು. ಸವಾಲುಗಳಿಲ್ಲದಿದ್ದರೆ ಬೆಳೆಯಲು ಅವಕಾಶವಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸೇತುವೆಯಾಗಿ ಸಹಾಯ ಮಾಡುವವರು ಹಳೆ ವಿದ್ಯಾರ್ಥಿಗಳು ಎಂದು ನುಡಿದರು.
ವೇದಿಕೆಯಲ್ಲಿ ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ, ಉಪನ್ಯಾಸಕಿ ಲಕ್ಷ್ಮಿ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಶಾ ಲಕ್ಷ್ಮಿ ಸ್ವಾಗತಿಸಿ ಆಶಾ ಭಟ್ ವಂದಿಸಿದರು ಲತಾ ಪ್ರಾರ್ಥಿಸಿ ರಮ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

