ಜಯನಗರ: ಜಹಗೀರ್ದಾರ್ ಸಹೋದರಿಯರು ಎಂದೇ ಖ್ಯಾತರಾದ ಕು. ದ್ಯುತಿ ಮತ್ತು ಕು. ಸ್ನಿಗ್ಧ ಇವರಿಂದ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 2, ಗುರುವಾರ ಸಂಜೆ "ಹರಿನಾಮ ಸಂಕೀರ್ತನೆ" ಗಾಯನ ಸೇವಾ ಕಾರ್ಯಕ್ರಮ ನಡೆಯಿತು. ಮೊದಲಿಗೆ "ಶರಣು ಸಿದ್ಧಿವಿನಾಯಕ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, "ನಮಿಸಿ ಬೇಡುವೆ", "ತುಂಗಾ ತೀರದಿ", "ಕುಣಿಯುತ ನಲಿಯುತ ಬಾ ಶಂಕರ", "ಹನುಮಾನ್ ಕೀ ಜೈ", "ಕಮಲೆ ಕಮಲಾಲಯೆ", "ನಾನೇನ ಮಾಡಿದೆನೋ", "ಚಂದವೇನೇ ಗೋಪಿ", "ರಾಮ ರಾಮ ಎಂಬೆರಡಕ್ಷರ", "ಆಡ ಪೋಗೋಣ ಬಾರೋ ರಂಗ", "ಬಾ ಬಾ ಭಕುತರ ಪ್ರಿಯಾ" ಕೃತಿಗಳನ್ನು ಹಾಡಿ, "ತಂಬೂರಿ ಮೀಟಿದವ" ಎಂಬ ಹಾಡಿನೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ವಾದ್ಯ ಸಹಕಾರದಲ್ಲಿ, ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ, ಶ್ರೀ ಶ್ರೀನಿವಾಸ ಕಾಖಂಡಕಿ ತಬಲಾ ವಾದನದಲ್ಲಿ ಸಾಥ್ ನೀಡಿದರು. ಶ್ರೀ ನಂದಕಿಶೋರ್ ಆಚಾರ್ ಅವರು ವಂದನಾರ್ಪಣೆ ಮಾಡಿ ನಂತರ ಗುರುಗಳ ಪ್ರಸಾದ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ