ಮುಡಿಪು: ಕವಿ, ತುಳು- ಕನ್ನಡ ಬರಹಗಾರ್ತಿ, ಸಂಶೋಧಕಿ ವಿಜಯಲಕ್ಷ್ಮಿ ರೈ ಕಲ್ಲಿಮಾರ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷರಾಗಿ ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ನೇಮಕ ಮಾಡಿದ್ದಾರೆ ಎಂದು ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಪ್ರಕಟಿಸಿದ್ದಾರೆ.
ವಿಜಯಲಕ್ಷ್ಮಿ ರೈ ಇವರು ಸಾಮಾಜಿಕ ಸಂಘಟನೆ, ತುಳು- ಕನ್ನಡ ಸಂಶೋಧನೆಯಲ್ಲಿ ತೊಡಗಿಕೊಂಡಿ ದ್ದಾರೆ. ತುಳು ಎಂ ಎ ಪದವೀಧರರೂ ಆಗಿರುವ ಇವರ ಹಲವು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೊಣಾಜೆ ಬಂಟರ ಸಂಘ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಇದರ ಸಕ್ರಿಯ ಸದಸ್ಯೆ. ಅಬ್ಬಕ್ಕ ಪ್ರಶಸ್ತಿ, ಲಯನ್ ಇಂಟರ್ ನ್ಯಾಶನಲ್ ಮಲ್ಟಿಪಲ್ ಅವಾರ್ಡ್ ಮೊದಲಾದ ಗೌರವಗಳು ಇವರಿಗೆ ಸಂದಿವೆ. ಇವರು ಸಾಮಾಜಿಕ ಮುಖಂಡ ಪ್ರಸಾದ್ ರೈ ಕಲ್ಲಿಮಾರ್ ಇವರ ಪತ್ನಿ. ಉಳ್ಳಾಲ ತಾಲೂಕು ಕಸಾಪ ಘಟಕ ಇವರಿಗೆ ಅಭಿನಂದನೆ ಸಲ್ಲಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


