ಚಿಣ್ಣರ ಕಲಾ ಉತ್ಸವ: ಸೃಜನಶೀಲತೆ ಪ್ರದರ್ಶಿಸಿದ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು

Upayuktha
0

ಅಂತರ್-ಶಾಲಾ ಸ್ಪರ್ಧೆಯಲ್ಲಿ ಬೆಂಗಳೂರಿನ ಸುಮಾರು 15000 ವಿದ್ಯಾರ್ಥಿಗಳು, ಪೋಷಕರು ಭಾಗಿ




ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಇಲ್ಲಿನ ವೈಟ್‍ಫೀಲ್ಡ್ ನಲ್ಲಿರುವ ಕರ್ನಾಟಕ ಟ್ರೇಡ್ ಪ್ರಮೋಷನ್‌ ಆರ್ಗನೈಜೇಶನ್ ಆವರಣದಲ್ಲಿ ಫೆಬ್ರವರಿ 17, 18 ಹಾಗೂ 19ರಂದು ಚಿಣ್ಣರ ಕಲಾ ಉತ್ಸವವನ್ನು (Children's Art Festival) ಅದ್ಧೂರಿಯಾಗಿ ನಡೆಸಿತು.


ಈ ಬೃಹತ್ ಕಾರ್ಯಕ್ರಮವು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದಲ್ಲಿ ಕಲಿತ ನೃತ್ಯ, ಸಂಗೀತ, ನಾಟಕ ಮತ ್ತುದೃಶ್ಯ ಕಲೆಗಳು ಸೇರಿದಂತೆಎಲ್ಲ ಕಲಾ ಸ್ವರೂಪಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅದ್ಭುತ ವೇದಿಕೆಯಾಗಿತ್ತು. ಸುಮಾರು 15000 ವಿದ್ಯಾರ್ಥಿಗಳು ಮತ್ತು ಪಷಕರು ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.


ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಆ ಮೂಲಕ ಅವರ ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ವೃದ್ಧಿಸಲು ದೊಡ್ಡ ಮಟ್ಟದ ವೇದಿಕೆಯನ್ನು ಕಲ್ಪಿಸುವುದು ಈ ಉತ್ಸವದ ಉದ್ದೇಶವಾಗಿತ್ತು. ಅತ್ಯುತ್ತಮವಾಗಿ ನಿರ್ದೇಶಿಸಿದ್ದ ನೃತ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನಾಟ್ಯ ಕೌಶಲವು ಆಕರ್ಷಕವಾಗಿತ್ತು. ಸಾಮಾಜಿಕವಾಗಿ ಸೂಕ್ಷ್ಮ ವಿಷಯಗಳ ಮೇಲೆ ಬೆಳಕು ಚೆಲ್ಲಿದ ಬೀದಿ ನಾಟಕವೂ ಅದ್ಭುತವಾಗಿತ್ತು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಕಲಾ ರೂಪಗಳ ಎಲ್ಲ ಪರಿಕಲ್ಪನೆಗಳನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಈ ಪ್ರದರ್ಶನಗಳು ಪ್ರಚುರಪಡಿಸಿದವು.


ಗಾಯನ ಮತ್ತು ವಾದನಗಳ ಮಾಧುರ್ಯದ ಅಮೋಘ ಸಂಗಮವಾಗಿ ಸಂಗೀತ ಕಾರ್ಯಕ್ರಮಗಳು ಮನ ಸೆಳೆದವು. ವಿದ್ಯಾರ್ಥಿಗಳೇ ನಡೆಸಿದ ಡಿಐವೈ ಕಾರ್ಯಸ್ಥಳವು ಒಳಗೊಂಡಿದ್ದ ಮರದಕೆತ್ತನೆ, ಸಾಬೂನು, ಕ್ಯಾಂಡಲ್ ತಯಾರಿಕೆ, ಕ್ಲೇ ಮಾಡೆಲಿಂಗ್ ಇತ್ಯಾದಿಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ದೃಶ್ಯಕಲೆಯ ಪ್ರದರ್ಶನವನ್ನೂ ವಿದ್ಯಾರ್ಥಿಗಳೇ ಸಂಯೋಜಿಸಿದ್ದರು. ಅಲ್ಲಿ ಸುಂದರವಾದ ಟೆಕ್ಸ್ಚರ್ ಪೇಂಟಿಂಗ್, ಕಾಫಿ ಆರ್ಟ್, ಗೊಂಧ್ ಕಲೆ, ಲೈವ್ ಪೇಂಟಿಂಗ್ ಮುಂತಾದವುಗಳಿದ್ದವು.


ಪ್ರತಿ ವಿದ್ಯಾರ್ಥಿಯೂ ಎರಡು ಕಲಾ ಪ್ರಕಾರಗಳಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿ, ಒಂದು ಹಂತದಿಂದ ಮತ್ತೊಂದು ಹಂತಕ್ಕೆ ನಿರಾಯಾಸವಾಗಿ ಮುಂದುವರಿದರು. ಆಯೋಜಕರು ಎಷ್ಟು ಅಚ್ಚುಕಟ್ಟಾಗಿ ಈ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರೆಂಬುದಕ್ಕೆ ಇದು ಸಾಕ್ಷಿಯಾಯಿತು. ಪ್ರತಿಭಾವಂತ ಶಿಕ್ಷಕರು ಮತ್ತು ಆರ್ಕಿಡ್ಸ್ ದಿ ಇಂಟರ್‍ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯವರ ತಂಡ ಪ್ರಯತ್ನವಾಗಿ ಸಂಘಟಿಸಿದ್ದ ಈ ಪ್ರದರ್ಶನವು ಶ್ಲಾಘನೆಗೆ ಪಾತ್ರವಾಯಿತು.


ಕಾರ್ಯಕ್ರಮದ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಆರ್ಕಿಡ್ಸ್ ದಿ ಇಂಟರ್‍ನ್ಯಾಷನಲ್ ಸ್ಕೂಲ್ ಅಕಾಡೆಮಿಕ್ಸ್ ವಿಭಾಗದ ಉಪಾಧ್ಯಕ್ಷರಾದ ಡಾ. ಮಾಧುರಿ ಸಗಳೆ ಮಾತನಾಡಿ, ''ಆರ್ಕಿಡ್ಸ್ ಶಾಲೆಯಲ್ಲಿ, ವಿದ್ಯಾರ್ಥಿಯ ಸೃಜನಶೀಲತೆಯನ್ನು ಪೋಷಿಸುವಲ್ಲಿ ಕಲೆಯು ಮಹತ್ವದ ಪಾತ್ರ ವಹಿಸುವುದು ಎಂಬ ವಿಷಯದಲ್ಲಿ ನಾವು ಅಚಲವಾದ ನಂಬಿಕೆಯನ್ನು ಇರಿಸಿದ್ದೇವೆ. ನಾವು ವರ್ಷವಿಡೀ ವಿವಿಧ ಕಲಾ-ಆಧಾರಿತ ಕಾರ್ಯಕ್ರಮಗಳು ಮತ್ತು ಪಠ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳ ಕಲಾಸಕ್ತಿಯನ್ನು ಅನ್ವೇಷಿಸಲು ಪ್ರೋತ್ಸಾಹ ನೀಡುತ್ತಿದ್ದೇವೆ. ನೃತ್ಯ, ಬೀದಿ ನಾಟಕ, ಸ್ಕಿಟ್‍ಗಳು, ಸಂಗೀತ ಅಭ್ಯಾಸ, ದೃಶ್ಯ ಕಲೆ, ಡಿಐವೈ ಪ್ರದರ್ಶನಗಳು ಮತ್ತು ಲೈವ್ ಕಾರ್ಯಾಗಾರವನ್ನು ಒಳಗೊಂಡ ಕಲಾ ಉತ್ಸವವು ವಿದ್ಯಾರ್ಥಿಗಳಿಗೆ ಮುಕ್ತ ವೇದಿಕೆಯಾಗಿತ್ತು. ವಿದ್ಯಾರ್ಥಿಗಳ ಪೋಷಕರೂ ತಮ್ಮ ಮಕ್ಕಳ ಸೃಜನಶೀಲತೆಯನ್ನು ವೀಕ್ಷಿಸುವ ಜೊತೆಗೆ, ಅವರಿಗೆ ಸ್ಮರಣೀಯಅನುಭವ ನೀಡುವಂತಿರಬೇಕೆಂದು ನಾವು ಬಯಸಿದ್ದೆವು. ಅಂತಹ ಒಂದ ುಅನುಭವವು ವಿದ್ಯಾರ್ಥಿಗಳು ಮತ್ತುಅವರ ಪೋಷಕರಿಗೆ ಏಕರೂಪದ ಆನಂದವನ್ನು ನೀಡುವುದೆಂದು ನಾವು ನಂಬಿದ್ದೇವೆ'' ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top