ಬೆಂಗಳೂರು : ವಿಶಿಷ್ಟ ಗುರುಭಕ್ತಿ ಸ್ಮರಣೋತ್ಸವ

Upayuktha
0

 

ಬೆಂಗಳೂರು : ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ದಂತಿ ಮಹೋತ್ಸವದ ಅಂಗವಾಗಿ ಕೋಣನಕುಂಟೆ ರಾಯರ ಮಠದಲ್ಲಿ ಆಯೋಜಿಸಿದ್ದ ರಾಘವೇಂದ್ರ ಸ್ವಾಮಿಗಳು ಹಾಗು ಹರಿದಾಸ ಸಾಹಿತ್ಯ  ವಿಚಾರ ಗೋಷ್ಠಿಯನ್ನು ಸಂಸ್ಕೃತಿ ಚಿಂತಕ ಡಾ. ಪೋಶೆಟ್ಟಿಹಳ್ಳಿ ಗುರುರಾಜ್ ಅವರು ಉದ್ಘಾಟಿಸಿ ಮಾತನಾಡುತ್ತಾ ವ್ಯಾಸಕೂಟಕ್ಕೆ ಹೇಗೆ ಮಹೋನ್ನತವಾದಂತ ಕೊಡುಗೆ ನೀಡಿದ ರಾಯರು ಹರಿದಾಸರಿಗೂ ಸ್ಪೂರ್ತಿ ಆಶ್ರಯದಾತರಾಗಿದ್ದರು .

 

ಹರಿದಾಸ ಸಾಹಿತ್ಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳು ಕುರಿತು ವಿಚಾರಗೋಷ್ಠಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಹಾಗೂ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಅವರ ಸಹಯೋಗದಲ್ಲಿ ಏರ್ಪಡಿಸುವ ಮೂಲಕ ಗುರುಭಕ್ತಿ ಸ್ಮರಣೋತ್ಸವವನ್ನು ವಿಶಿಷ್ಟವಾಗಿ ಶ್ರೀಮಠದಲ್ಲಿ ಐದು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು  ಅಭಿನಂದನೀಯ ಎಂದು ತಿಳಿಸಿದರು .


ಶಕುಂತಲಾ ದೇವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್ . ಆರ್ ರಾಘವೇಂದ್ರ ಅವರು ವಿಜಯದಾಸರು ಚಿತ್ರಿಸಿದ ರಾಘವೇಂದ್ರ ಸ್ವಾಮಿಗಳು ಎಂಬ ವಿಷಯದ ಬಗ್ಗೆ ವಿಚಾರವನ್ನು ಮಂಡಿಸಿದರು. ನಾಡಿನ ಖ್ಯಾತ ಹರಿದಾಸ ಸಂಶೋಧಕರಾದ ಡಾ. ಅನಂತ ಪದ್ಮನಾಭ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. 


ಗುರು ರಾಘವೇಂದ್ರ ಸೇವಾ ಟ್ರಸ್ಟ್ ಕೋಣನಕುಂಟೆಯ ಕಾರ್ಯದರ್ಶಿಗಳಾದ ಶ್ರೀ ಪಿ.ಎನ್. ಫಣಿ ಕುಮಾರ್ ಸ್ವಾಗತಿಸಿದರು.  ಪರಗಿ ಭಾರತಿರಮಣಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top