ಬೆಂಗಳೂರು: ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರ. ಸಮಾಜ ಸೇವಾ ಮತ್ತು ಅಭಿವೃದ್ಧಿ ಇಲಾಖೆ ಕರ್ನಾಟಕವು ಗ್ರಾಮಾಂತರ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ 13 ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುತ್ತಿರುವ "ಇಂಗ್ಲಿಷ್ ಕರ್ಸಿವ್ ಬರವಣಿಗೆ ಸ್ಪರ್ಧೆ"ಯನ್ನು ("English cursive handwriting competition") ಶುಕ್ರವಾರ (ಫೆ.24) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚೀಮಾಸಂದ್ರ ಹೊಸಕೋಟೆ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಮಗೋವಿಂದಪುರ ಹೊಸಕೋಟೆ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೇ ಊರು ಹೊಸಕೋಟೆ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೂರು ಶಾಲೆಗಳಲ್ಲಿ "ಇಂಗ್ಲಿಷ್ ಕರ್ಸಿವ್ ಬರವಣಿಗೆ ಸ್ಪರ್ಧೆ"ಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರ. ಸಮಾಜ ಸೇವಾ ಮತ್ತು ಅಭಿವೃದ್ಧಿ ಇಲಾಖೆ ಕರ್ನಾಟಕವು ಗ್ರಾಮಾಂತರ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಇಂಗ್ಲಿಷ್ ಬರವಣಿಗೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ 08/09/2022 ರಂದು ಚಿಕ್ಕಬಳ್ಳಾಪುರ ಜಿಲ್ಲೆ, ದೇವನಹಳ್ಳಿ ತಾಲೂಕು, ಶಿಡ್ಲಘಟ್ಟ ತಾಲೂಕು ಮತ್ತು ಹೊಸಕೋಟೆ ತಾಲೂಕಿನಾದ್ಯಂತ ಒಟ್ಟು 13 ಸರ್ಕಾರಿ ಶಾಲೆಗಳಲ್ಲಿ ಜೀನಿಯಸ್ ಕರ್ಸಿವ್ ಕಾಪಿ ಬರವಣಿಗೆ ಪುಸ್ತಕಗಳನ್ನು(Genius cursive English copy writing books) ನೀಡಲಾಗಿತ್ತು. ಜೊತೆಗೆ ಬರವಣಿಗೆ ಸ್ಪರ್ಧೆಯನ್ನು ಮಾಡಲಾಗುವುದೆಂದು ಘೋಷಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ