ಉಡುಪಿ: ಪಶುಗಳ ತ್ವರಿತ ಚಿಕಿತ್ಸೆಗಾಗಿ ರಾಜ್ಯ ಸರ್ಕಾರದ ಪಶುಂಗೋಪನಾ ಇಲಾಖೆಯು ಕಳೆದ ಅಕ್ಟೋಬರ್‌ನಲ್ಲಿ ಘೋಷಿಸಿದ್ದ ಪಶುಸಂಜೀವಿನಿ ಪಶು ಚಿಕಿತ್ಸಾ ಅಂಬ್ಯುಲೆನ್ಸ್ ಯೋಜನೆಯನ್ವಯ ಉಡುಪಿ ಜಿಲ್ಲೆಗೆ ಮಂಜೂರಾಗಿದ್ದ 8ರ ಪೈಕಿ 6 ವಾಹನಗಳು ಬಂದಿವೆ; ಉಳಿದ ಎರಡು ವಾಹನಗಳು ಒಂದು ತಿಂಗಳೊಳಗೆ ಬರಲಿವೆ ಎಂದು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ ಶಂಕರ್ ಶೆಟ್ಟಿ ತಿಳಿಸಿದ್ದಾರೆ.
ಇವುಗಳನ್ನು ತಾಲೂಕಿಗೆ ಒಂದರಂತೆ 5 ಮತ್ತು ಉಳಿದ ಮೂರನ್ನು ಜಿಲ್ಲಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುವುದು. ಆದರೂ ಇವುಗಳ ನಿರ್ವಹಣೆಗೆ ಖಾಸಗಿ ಏಜೆನ್ಸಿಗಳನ್ನು ಆಹ್ವಾನಿಸಿದ್ದು ಅವುಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಆ ಬಳಿಕವಷ್ಟೆ ಬಳಕೆಗೆ ಲಭ್ಯವಾಗಲಿವೆ ಎಂದು ಡಾ ಶೆಟ್ಟಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


