ಆದಾಯ ತೆರಿಗೆ ವಿನಾಯಿತಿ ಮಿತಿ 2.5.ಲಕ್ಷ ದಿಂದ 3 ಲಕ್ಷಕ್ಕೆ ಹೆಚ್ಚಿಸಿರುವುದು ಮಧ್ಯಮ ವಗ೯ದವರಿಗೆ ಸ್ವಲ್ಪ ಸಂತಸ ತಂದಿದೆ. ಇದೇ 5 ರೀತಿಯಲ್ಲಿ ಸ್ಲ್ಯಾಬ್ ಮಾಡಿರುವುದು, 3 ರಿಂದ 6 ಲಕ್ಷಕ್ಕದವರೆಗೆ 5% ತೆರಿಗೆ, ಹೆಚ್ಚು ನೇೂವಾಗದಂತೆ ತೆರಿಗೆ ವಿಧಿಸಿರುವುದು, ಇದು ಚುನಾವಣಾ ದೃಷ್ಟಿಯಿಂದ ಮಾಡಿರುವ ಬಹು ಯೇೂಜಿತ ತೆರಿಗೆ ವಿಧಾನ.
ಉದ್ಯೋಗ ಸೃಷ್ಟಿಯ ಬಗ್ಗೆ ಬಜೆಟ್ ನಲ್ಲಿ ಒಟ್ಟು ಜಿಡಿಪಿಯ 3.5% ವಿನಿಯೇೂಗಿಸುವ ಬಗ್ಗೆ ಉಲ್ಲೇಖವಿದೆ. ಕೃಷಿ ಉತ್ತೇಜನ ಯೇೂಜನೆಗಳು ಉಲ್ಲೇಖ ಮಾಡಲಾಗಿದೆ. ಆದರೆ ಇದರ ಕಾರ್ಯಯೇೂಜನ ಅನುಷ್ಠಾನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಒಟ್ಟಿನಲ್ಲಿ ಜನ ಸಾಮಾನ್ಯರಿಗೆ ಇದೆಲ್ಲವೂ ಕನಸಿನಲ್ಲಿ ಕಾಣುವ ಗಂಟಾಗಿ ಕಾಣುವುದು ಸಹಜ.ಅಂತೂ 2023 ಮತ್ತು 2024 ಚುನಾವಣಾ ವರುಷವನ್ನೆ ಆಧಾರವಾಗಿಟ್ಟುಕೊಂಡು ಮಾಡಿದ ಬಜೆಟ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಬೆಲೆ ಏರಿಕೆ ನಿಯಂತ್ರಣದ ಬಗ್ಗೆ ಎಲ್ಲಿಯೂ ಉಲ್ಲೇಖ ವಿಲ್ಲದಿರುವುದು ಜನ ಸಾಮಾನ್ಯರನ್ನು ಕಾಡುತ್ತಿರುವುದಂತೂ ಸತ್ಯ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ನಿವೃತ್ತ ಮುಖ್ಯಸ್ಥ ರಾಜ್ಯ ಶಾಸ್ತ್ರ ವಿಭಾಗ
ಎಂಜಿಎಂ ಕಾಲೇಜು ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


