ನವಭಾರತ ನಿರ್ಮಾಣದ ಅತ್ಯುತ್ತಮ ಬಜೆಟ್‌: ಪ್ರಭಾಕರ ಪ್ರಭು

Upayuktha
0

ಬಂಟ್ವಾಳ: ಕೇಂದ್ರದ 2023-2024ನೇ ಬಜೆಟ್ ನಲ್ಲಿ ಪ್ರಸ್ತಾವಗಳನ್ನು ಬಮಟ್ವಾಳ ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಒತ್ತು, ರೈತರ ಅನುಕೂಲಕ್ಕೆ ವಿನೂತನ ಯೋಜನೆ ಜಾರಿ, ಮಧ್ಯಮ ವರ್ಗದವರಿಗೂ ಹೆಚ್ಚಿನ ಉಪಯೋಗವಾಗುವ ರೀತಿಯಲ್ಲಿ ನೂತನ ಆದಾಯ ತೆರಿಗೆ ನೀತಿ ಜಾರಿ, ದೇಶದ ಸಮಸ್ತ ನಾಗರಿಕರು ಬಳಸುವ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ರಿಯಾಯಿತಿ ಘೋಷಣೆ, ರಕ್ಷಣಾ ವಿಷಯ ದಲ್ಲಿ ಆತ್ಮ ನಿರ್ಭರ ಭಾರತ ಕಲ್ಪನೆ ಅಡಿಯಲ್ಲಿ ಸ್ವದೇಶಿ ತಂತ್ರಜ್ಞಾನ ಬಳಕೆಗೆ ಆದ್ಯತೆ, ಆರೋಗ್ಯ ಸೇವೆಗೆ ಮಹತ್ವ ನೀಡುವ ಉದ್ದೇಶದಿಂದ ದೇಶದಲ್ಲಿ 157 ನರ್ಸಿಂಗ್ ಕಾಲೇಜ್ ಗಳ ಸ್ಥಾಪನೆ, ಶಿಕ್ಷಣದ ಪ್ರಗತಿಗಾಗಿ ಹಲವು ವಿಶ್ವ ವಿದ್ಯಾನಿಲಯಗಳ ಸ್ಥಾಪನೆ, ಕೃಷಿ ಕೈಗಾರಿಕೆ, ಸಹಕಾರ ಕ್ಷೇತ್ರ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ನವ ಭಾರತ ನಿರ್ಮಾಣದ ದೂರದೃಷ್ಟಿವುಳ್ಳ ಕೇಂದ್ರ ಮುಂಗಡ ಪತ್ರ ಇದಾಗಿದ್ದು ಅತ್ಯುತ್ತಮ ಬಜೆಟ್ ಮಂಡನೆಗೆ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top