ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ 25ನೆಯ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ರವಿವಾರ ಮಧ್ಯಾಹ್ನ ನಡೆದ ಯಕ್ಷ ‘ಗಾನ’ ವೈಭವ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಯಕ್ಷಗಾನ ಪ್ರಿಯರ ಚಪ್ಪಾಳೆಯ ಮೆಚ್ಚುಗೆ ಗಳಿಸಿದರು.
ತಂಡದ ನಿರ್ದೇಶಕ (ಪುತ್ತೂರು ವಿವೇಕಾನಂದ ಕಾಲೇಜಿನ ಸಹ ಪ್ರಾಧ್ಯಾಪಕರು) ರಾದ ವರ್ಷಿತ್ ಕಿಜಕ್ಕಾರ್ ಅವರ ಚೆಂಡೆಯ ನಾದ ಹಾಗೂ ಕಿಶನ್ ರಾವ್ ಅವರ ಚಕ್ರತಾಳ ದನಿಯೊಂದಿಗೆ ವಿದ್ಯಾರ್ಥಿನಿಯರಾದ ಹೇಮಾ, ಶ್ರೇಯಾ, ಅಮೃತಾ ಮತ್ತು ಪ್ರಜ್ಞಾ ಭಾಗವತರಾಗಿ ಯಕ್ಷಗಾನ ಪದ್ಯಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿ ಯತಿನ್ ಮದ್ದಳೆ ವಾದಕರಾಗಿದ್ದರು.
ಸುಮಾರು 45 ನಿಮಿಷಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಂವಾದ ಶೈಲಿಯಲ್ಲಿ ಪ್ರಮೀಳಾರ್ಜುನ ಪ್ರಸಂಗದ ಪದ್ಯಗಳು ಪ್ರೇಕ್ಷಕರ ಗಮನ ಸೆಳೆದವು. ಕೊನೆಯಲ್ಲಿ ಹಾಡಿದ ನಾಲ್ಕು ಏರುಪದ್ಯಗಳು ಯಕ್ಷ ‘ಗಾನ’ ಪ್ರಿಯರನ್ನು ರಂಜಿಸಿದವು. ಜೋರಾದ ಕರತಾಡನದ ಮೂಲಕ ಪ್ರೇಕ್ಷಕರು ಪ್ರೋತ್ಸಾಹ ನೀಡಿದರು.
ವಿದ್ಯಾರ್ಥಿ ನವೀನ್ ಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ಎಚ್.ಜೆ. ಶ್ರೀಧರ್ ಅವರು ಕಲಾವಿದರನ್ನು ಗೌರವಿಸಿದರು.
ವರದಿ: ಪೂಜಾ ವಿ. ಹಂದ್ರಾಳ, ವಿಜಯ್ ವಿ. ಚಿತ್ರ: ವಿಜಯ್ ವಿ.
ಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


