ಮಂಗಳೂರು: ಮಂಗಳೂರಿನ ಸುರತ್ಕಲ್ ಶ್ರೀನಿವಾಸ್ ಆಸ್ಪತ್ರೆಯಲ್ಲಿ 40 ವರ್ಷದ ಮಹಿಳೆಯೊಬ್ಬರಿಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ನುರಿತ ವೈದ್ಯರ ತಂಡ ಮಹತ್ವದ ಸಾಧನೆ ಮಾಡಿದೆ.
ವಿವರ ಇಂತಿದೆ:
40 ವರ್ಷದ ಮಹಿಳೆಯೊಬ್ಬರು ಸುರತ್ಕಲ್ ಶ್ರೀನಿವಾಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಒಳ ರೋಗಿಯಾಗಿ ದಾಖಲಾಗಿದ್ದರು. ಅವರಿಗೆ ವಾಹನ ಅಪಘಾತವಾಗಿ ಹೊಟ್ಟೆಗೆ ತಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರಾದ ಹೃದಯ ಶಸ್ತ್ರಚಿಕಿತ್ಸಾ ತಜ್ಞರು ಅವರ ಪರಿಧಿ ಹರಿದಿದೆ. ಜಠರ ಮತ್ತು ಕರಳು ಪರಿಧಿಯ ಮೂಲಕ ಎದೆ ಭಾಗಕ್ಕೆ ನುಸುಳಿದೆ. ಅದೇ ರೀತಿ ಅವರ ಹೊಟ್ಟೆಯ ಸಿಟಿ ಸ್ಕ್ಯಾನ್‌ನಲ್ಲಿ ಕಿಬ್ಬೊಟ್ಟೆಯ ಬಲಭಾಗದಲ್ಲಿ ಇನ್ನೊಂದು ಹರ್ನಿಯಾವನ್ನು ಪತ್ತೆ ಹಚ್ಚಿದರು. ಅವರ ಪ್ರಸ್ತುತ ಸ್ಥಿತಿಯನ್ನು ಹೊಂದಿಕೊಂಡು ಅವರಿಗೆ ಅರಿವಳಿಕೆ ತಜ್ಞ ತಂಡದ ಸಹಾಯದಿಂದ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರು.
ಶಸ್ತ್ರ ಚಿಕಿತ್ಸೆಯಲ್ಲಿ ಪರಿಧಿಯ (ಡಯಾಫ್ರಂ) ಎದುರು ಭಾಗದ ಮೂಲಕ ಅನ್ನ ಕೋಶ, ಸಣ್ಣ ಕರಳು, ಎದೆಯ ಒಳಗೆ ನುಸುಳಿತು. ಅಲ್ಲದೆ ಹಿಂದೆ ಸರಿಯದೆ ಅಡಚಣೆಯಲ್ಲಿತ್ತು. ಇದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಸರಿಪಡಿಸಲಾಯಿತು. ಈ ಹರ್ನಿಯನ್ನು ಮೋರ್ರ್ಗಾಗ್ನಿ ಹರ್ನಿಯಾ ಎಂದು ಕರೆಯುತ್ತಾರೆ. ಈ ಹರ್ನಿಯಾ ಕೇವಲ ಶೇ 1ರಷ್ಟು ಜನರಲ್ಲಿ ಮಾತ್ರ ಕಂಡು ಬರುತ್ತದೆ. ಈ ರೀತಿ ಅಡಚಣೆ ಆಗುವುದು ತೀರಾ ಅಪರೂಪ (0.2%). ತದನಂತರ ಇದೇ ರೋಗಿಗೆ ಹೊಟ್ಟೆ ನೋವು ಪುನಃ ಕಾಣಿಸಿಕೊಂಡಿತು. ಪುನಃ ಸಿ. ಟಿ. ಸ್ಕ್ಯಾನ್ ಮಾಡಿದಾಗ ಕಿಬ್ಬೊಟ್ಟೆಯ ಬಲಭಾಗದಲ್ಲಿ ಇನ್ನೊಂದು ಹರ್ನಿಯಾ ಕಂಡುಬಂತು. ಈಗಿನ ನೋವಿಗೆ ಇದೇ ಕಾರಣವಾಗಿದ್ದು, ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ಅದು ತುಂಬಾ ಅಪರೂಪದಲ್ಲಿ ಅಪರೂಪದ ಬಲಬದಿಯ ಸಬ್ ಕೋಸ್ಟಲ್ ಹರ್ನಿಯಾ.
ಈ ಹರ್ನಿಯಾದಲ್ಲಿ ದೊಡ್ಡ ಕರಳು, ಯಕೃತ್ತು, ಅನ್ನಕೋಶ, ಸಣ್ಣ ಕರಳು ಹೊಟ್ಟೆಯಿಂದ ಹೊರಗೆ ನುಸುಳುತ್ತಿತ್ತು. ಇದು ದೊಡ್ಡ ಗಾತ್ರದಲ್ಲಿ ಅಡಚಣೆಯಲ್ಲಿತ್ತು. ಇದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. ಈ ಎರಡು ಹರ್ನಿಯಾಗಳು ಹುಟ್ಟಿನಿಂದಲೇ ಇರುತ್ತವೆ.
ಈ ಶಸ್ತ್ರ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತದ ಯೋಜನೆ ಅಡಿಯಲ್ಲಿ ಮಾಡಲಾಗಿದ್ದು ರೋಗಿಗೆ ಯಾವುದೇ ವೆಚ್ಚ ತಗುಲಲಿಲ್ಲ. ರೋಗಿ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ಶ್ರೀನಿವಾಸ ಆಸ್ಪತ್ರೆಯ ಹಾಗೂ ಆಸ್ಪತ್ರೆ ಸಿಬ್ಬಂದಿಗಳಾದ ಡಾ. ಅಮಿತ್ ಕಿರಣ್, ಡಾ. ಪ್ರಶಾಂತ್, ಡಾ. ಡೇವಿಡ್ ಹಾಗೂ ಫ್ರೀಡಾ ತಂಡದ ಅಪರೂಪದ ಸಾಧನೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


