ದ.ಕ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ: ಇಂದಿನಿಂದ 3 ದಿನ ಉಜಿರೆಯಲ್ಲಿ ಸಾಹಿತ್ಯ ಸಂಭ್ರಮ

Upayuktha
0


ಉಜಿರೆ : ಉಜಿರೆಯ  ಶ್ರೀಕೃಷ್ಣಾನುಗ್ರಹ ಸಭಾಭವನದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್ ನೆರವೇರಿಸಿದರು.


ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡವನ್ನು  ಉಳಿಸಿ, ಬೆಳೆಸುವ ಅಗತ್ಯವನ್ನು ಮನಗಾಣಿಸಿದರು. ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು  ಪವಿತ್ರ ಮತ್ತು ಪುಣ್ಯಕ್ಷೇತ್ರದ ಬೀಡಾದ ಉಜಿರೆಯಲ್ಲಿ ನಡೆಯುತ್ತಿರುವುದು ಸಂತೋಷಕರ ಎಂದು ಹೇಳಿದರು.


ಕನ್ನಡ ಭಾಷೆ, ಕನ್ನಡ ಸಾಹಿತ್ಯ,ಕನ್ನಡ ನಾಡು-ನುಡಿಗಾಗಿ ದುಡಿದಂತಹ ಹೋರಾಟಗಾರರು, ಚಿಂತಕರು, ಸಾಹಿತಿಗಳು, ಪ್ರಗತಿಶೀಲರು ಸೇರಿದಂತೆ ಹಲವು ಮಹನೀಯರ ಸ್ಮರಣೆ ಅಗತ್ಯ.ಕನ್ನಡ ನಾಡಿನಲ್ಲಿ ಕನ್ನಡವೇ ಶ್ರೇಷ್ಠ ಭಾಷೆ. ಈ ರಾಜ್ಯದ, ಈ ದೇಶದ ಇತಿಹಾಸವನ್ನು  ಭಾಷೆಯ ಮುಖಾಂತರ ನಾವು ತಿಳಿದುಕೊಂಡು ನಮ್ಮ ಕನ್ನಡಕ್ಕಾಗಿ ದುಡಿದ ಮಹನೀಯರನ್ನು ನೆನೆಯುವ ಕಾರ್ಯ ಆಗಬೇಕಾಗಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್,  ಸಮ್ಮೇಳನದ ಧ್ವಜಾರೋಹಣವನ್ನು ಉಜಿರೆ ಗ್ರಾಮ ಪಂಚಾಯತ್‍ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ನೆರವೇರಿಸಿದರು. ಬೆಳ್ತಂಗಡಿ ಶ್ರೀ ಗುರುದೇವ  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಮೂಡಿಬಂತು. 


ಕಾರ್ಯ ಕ್ರಮದಲ್ಲಿ   ಸಮ್ಮೇಳನ ಸಂಯೋಜನೆ  ಸಮಿತಿ ಅಧ್ಯಕ್ಷ ಶರತ್ ಪಡ್ವೆಟ್ನಾಯ, ಸಮ್ಮೇಳನ ಸಂಯೋಜನೆ  ಸಮಿತಿ ಪ್ರಧಾನ ಕಾರ್ಯದರ್ಶಿ  ರಾಮಕೃಷ್ಣ ಭಟ್ ಬೆಳಾಲು, ಕಾರ್‍ಯದರ್ಶಿ ರಮೇಶ್ ಮಯ್ಯ, ಎಸ್.ಡಿ.ಎಂ  ಪ್ರೌಢಶಾಲೆಯ ಎನ್.ಸಿ.ಸಿ. ಆರ್ಮಿ ಮತ್ತು ನೇವಿ ಕೆಡೆಟ್‍ಗಳು,ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್‍ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು   ಬಂಗಾಡಿ ಸರಕಾರಿ ಹಿರಿಯ ಪ್ರಾಥಮಿಕ  ಶಾಲಾ ಶಿಕ್ಷಕ ಅಮಿತಾನಂದ ಹೆಗ್ಡೆ ಮತ್ತು ಮಾಜಿ ಸುಬೇದಾರ್  ಮೇಜರ್ ಜಗನ್ನಾಥ್ ಶೆಟ್ಟಿ ನಿರ್ವಹಿಸಿದರು.


ಚಿತ್ರ ಮತ್ತು ವರದಿ: ಶಶಿಧರ ನಾಯ್ಕ ಎ,

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top