ಬೆಂಗಳೂರು: ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ ಫೆಬ್ರವರಿ 5, ಭಾನುವಾರ ಸಂಜೆ 6-00 ಗಂಟೆಗೆ, ಪದ್ಮಿನಿ ರಾವ್ ಪರಂಪರಾ ರಂಗಮಂದಿರದಲ್ಲಿ ನಡೆಯಲಿರುವ 'ಊರ್ಮಿಕಾ ನೃತ್ಯೋತ್ಸವ ಶಿಶಿರ ಋತು'ವಿನಲ್ಲಿ ಕು||ಇಂಚರ (ಭರತನಾಟ್ಯ), ಕು|| ಮೌಪಿಯಾ (ಒಡಿಸ್ಸಿ), ಕು|| ಕೀರ್ತಿ (ಭರತನಾಟ್ಯ) ಹಾಗೂ ಶ್ರೀಮತಿ ಶುಭಾ ರಾಣಿ ಬೋಳಾರ್ ಅವರ ಶಿಷ್ಯವೃಂದದಿಂದ ಸಮೂಹ ನೃತ್ಯ (ಭರತನಾಟ್ಯ) ಪ್ರದರ್ಶನ ಏರ್ಪಡಿಸಲಾಗಿದೆ.
ಆ ಬಳಿಕ, ನಾಟ್ಯ ನಿನಾದ ಅಕಾಡೆಮಿಯ ಹಿರಿಯ ಕಲಾವಿದರಿಂದ ನೃತ್ಯ ನಾಟಕ (ಕೂಚಿಪುಡಿ) ಹಾಗೂ ಶಿಷ್ಯ ವೃಂದದಿಂದ ಸಮೂಹ ಜಾನಪದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಾಟ್ಯ ನಿನಾದ ಅಕಾಡೆಮಿಯ ನಿರ್ದೇಶಕಿ ಶ್ರೀಮತಿ ಧರಣಿ ಟಿ. ಕಶ್ಯಪ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ