ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಶಸ್ತಿ ಪ್ರದಾನ

Upayuktha
0

ಮಕ್ಕಳು ಮರಿ ಹಕ್ಕಿಗಳಂತೆ: ಡಾ. ಧನಂಜಯ ಕುಂಬ್ಳೆ



ವಿದ್ಯಾಗಿರಿ (ಮೂಡುಬಿದಿರೆ): ‘ಜೀವನದಲ್ಲಿ ಏಕಾಗ್ರತೆ, ಪ್ರಯತ್ನ ಹಾಗೂ ಧೈರ್ಯ ಇದ್ದರೆ, ಸಮಾಜದಲ್ಲಿ ಬಹಳ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತೀರಿ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಧನಂಜಯ ಕುಂಬ್ಳೆ ಹೇಳಿದರು.


ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಇಂಗ್ಲಿಷ್ ಮಾಧ್ಯಮ ಶಾಲೆಯ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.


ಮಕ್ಕಳು ಮರಿ ಹಕ್ಕಿಗಳಂತೆ. ಹಕ್ಕಿಗಳು ಹುಟ್ಟಿದ ತಕ್ಷಣವೇ ಹಾರುವುದಿಲ್ಲ. ಬೆಳೆಯುತ್ತಾ ಹೋದಂತೆ ರೆಕ್ಕೆಗಳನ್ನು ಬಿಚ್ಚಿ ಹಾರಲು ಕಲಿಯುತ್ತವೆ. ಹಾಗೆಯೇ ಮಕ್ಕಳು ಕಲಿಯುತ್ತಾ ಹೋಗಬೇಕು. ಕಲೆಯಲಿ ಆಸಕ್ತಿ ವಹಿಸಬೇಕು ಎಂದ ಅವರು, ನೀವು ಪ್ರಶಸ್ತಿ- ಪ್ರಶಂಸೆ ಪಡೆಯಬೇಕು. ಇತರರು ಪಡೆಯುವಾಗ ಖುಷಿಯಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸಬೇಕು’ ಎಂದು ಹಿತವಚನ ಹೇಳಿದರು.


ಆಳ್ವಾಸ್ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಮಧುಮಾಲ ಮಾತನಾಡಿ, ಬಾಲ್ಯದಲ್ಲೇ ಸಮಾನವಾಗಿ ಮಕ್ಕಳು ಬೆಳೆದಾಗ, ಭವಿಷ್ಯದಲ್ಲಿ ಅಸಮಾನತೆ ದೂರವಾಗುತ್ತದೆ. ಪ್ರತಿ ಮಗುವೂ ವಿಭಿನ್ನ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಅದನ್ನೆಲ್ಲ ಗುರುತಿಸಬೇಕು. ಪೋಷಕರು ಬೌದ್ಧಿಕ ಶಿಕ್ಷಣದ ಜೊತೆ ದೈಹಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅತಿಯಾದ ಮೊಬೈಲ್ ಬಳಕೆ, ಹೊರಗಿನ ಆಹಾರವನ್ನು ದೂರವಿಡಿ. ಮಕ್ಕಳ ಮಾತನ್ನೂ ಆಲಿಸಿ. ಅವರು ಮನಬಿಚ್ಚಿ ಮಾತನಾಡಲಿ ಎಂದರು.


ಸಮಾರಂಭದಲ್ಲಿ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲ ಆನಂದ್, ಆಳ್ವಾಸ್ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ನಾಯಕ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಪ್ರಶಾಂತ ಬಿ. ಇದ್ದರು. ವಿದ್ಯಾರ್ಥಿ ವಿರಾಟ್ ಕೃಷ್ಣ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top