ಬೆಂಗಳೂರು: ಕಮ್ಮಗೊಂಡನಹಳ್ಳಿಯಲ್ಲಿರುವ ಶ್ರೀ ವಿಶ್ವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆಬ್ರವರಿ 18 ಶನಿವಾರ ಸಂಜೆ ಏರ್ಪಡಿಸಿದ್ದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಶ್ರೀಮತಿ ರಮ್ಯಾ ಭಾರದ್ವಾಜ್ ಮತ್ತು ಶ್ರೀ ಇಂಚರ ಪ್ರವೀಣ್ ಕುಮಾರ್ ಗಾಯನ ನಡೆಸಿಕೊಟ್ಟರು.
ವಾದ್ಯ ಸಹಕಾರದಲ್ಲಿ ಶ್ರೀ ದುಷ್ಯಂತ್ (ಕೀ-ಬೋಡ್೯), ಶ್ರೀ ಗುರುರಾಜ್ ಹೊಳೆನರಸೀಪುರ (ತಬಲಾ) ಮತ್ತು ಶ್ರೀ ಉಮಾ ಪ್ರಸಾದ್ (ರಿದಂಪ್ಯಾಡ್) ಸಾಥ್ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಪದಾಧಿಕಾರಿಗಳು ಎಲ್ಲಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


