ಮಡಿಕೇರಿ: ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮದ ಶ್ರೀ ಗೌರೀಶಂಕರ ದೇವಾಲಯದಲ್ಲಿ ಶನಿವಾರ ಶಿವರಾತ್ರಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಶನಿವಾರ ಬೆಳಗ್ಗೆ ಗ್ರಾಮದ ಸುಭಾಶ್ ನಗರ, ಕಾವೇರಿ ಬಡಾವಣೆ, ಶಕ್ತಿನಗರ, ಬಿಳಿಗೇರಿ ಜಂಕ್ಷನ್ ಹೀಗೆ ನಾಲ್ಲು ದಿಕ್ಕುಗಳಿಂದ ಚಂಡೆ, ವಾದ್ಯ, ಶಂಖನಾದದೊಂದಿಗೆ ಏಕಕಾಲಕ್ಕೆ ಹೊರೆಕಾಣಿಕೆಯನ್ನು ದೇವಾಲಯಕ್ಕೆ ತಂದು ಶಿವಾರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಉಷಃಪೂಜೆ, ಮಹಾ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಮಹಾಪೂಜೆ ನಡೆದು ಮಧ್ಯಾಹ್ನ ಅನ್ಮ ಸಂತರ್ಪಣೆ ನಡೆಯಿತು. ಶನಿವಾರ ರಾತ್ರಿ ಶಾಸಕ ಕೆ.ಜಿ.ಬೋಪಯ್ಯ ಅವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮ: ಶಿವರಾತ್ರಿ ಪ್ರಯುಕ್ತ ಶ್ರೀ ಗೌರೀಶಂಕರ ಕಲಾ ವೇದಿಕೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮಕ್ಕಳಿಂದ ಮತ್ತು ಮೂರ್ನಾಡಿನ ಭಾರತೀಯ ನೃತ್ಯಶಾಲೆಯ ತಂಡದ ನೃತ್ಯಗಳು ಸಭಿಕರ ಮನಸೂರೆಗೊಂಡವು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿತಿನ್ ನಿರೂಪಿಸಿದರು.
ನಂತರ ರಾತ್ರಿ ಶಿವರಾತ್ರಿ ಜಾಗರಣೆಗಾಗಿ ಸುಳ್ಯದ ಯುವಕ ಯಕ್ಷಗಾನ ಕಲಾರಂಗದಿಂದ ಯಕ್ಷ-ಗಾನ-ನಾಟ್ಯ-ವೈಭವ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


