ಎಸ್‌ವಿಪಿ ಕುರಿತ ಅಧ್ಯಯನಕ್ಕೆ ರಾಮಮೂರ್ತಿಗೆ ಡಾಕ್ಟರೇಟ್

Upayuktha
0

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಆರಂಭಪೂರ್ವದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು, ವಿವಿ ಆವರಣಕ್ಕೆ 'ಮಂಗಳಗಂಗೋತ್ರಿ' ಎಂದು ನಾಮಕರಣ ಮಾಡಿದ ಕನ್ನಡ ಹಿರಿಯ ಕವಿ, ಅನುವಾದಕ, ಸಂಘಟಕರಾದ ದಿ.ಎಸ್ ವಿ ಪರಮೇಶ್ವರ ಭಟ್ಟ ಅವರ ಕುರಿತು ಡಾ.ಧನಂಜಯ ಕುಂಬ್ಳೆ ಇವರ ಮಾರ್ಗದರ್ಶನದಲ್ಲಿ ರಾಮಮೂರ್ತಿ ಕೆ.ಎನ್ ಇವರು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ.


ಇವರು 'ನವೋದಯ ಪ್ರತಿಭೆ ಪ್ರೊ.ಎಸ್ ವಿ ಪರಮೇಶ್ವರ ಭಟ್ಟ ಸಾಹಿತ್ಯ ಮಾರ್ಗ' ಎಂಬ ಮಹಾಪ್ರಬಂಧವನ್ನು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ  ಸಲ್ಲಿಸಿದ್ದು ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ.


ರಾಮಮೂರ್ತಿ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವಕ್ವಾಡಿಯವರಾಗಿದ್ದು, ಲೀಲಾ ಮತ್ತು ನಾರಾಯಣ ಕೆ ದಂಪತಿ ಪುತ್ರ. ಪ್ರಸ್ತುತ ಸರಕಾರಿ ಪ್ರೌಢ ಶಾಲೆ ಅಂಬ್ಲಮೊಗರು, ಮಂಗಳೂರು ದಕ್ಷಿಣ ವಲಯ ಇಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top