ಬೆಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ಗಿರಿನಗರದ ಶ್ರೀರಾಮಚಂದ್ರಾಪುರ ಮಠದ ಪುನರ್ವಸು ಭವನದಲ್ಲಿ ಅಮೃತವರ್ಷಿಣಿ ಸಂಗೀತ ಶಾಲೆಯ ವಿದ್ವಾನ್ ಜಯಲಕ್ಷ್ಮಿ ಎಸ್. ಭಟ್ ಮತ್ತು ಅವರ ಶಿಷ್ಯರಿಂದ ವಿಶೇಷ ಸಂಗೀತ ಕಛೇರಿ ನಡೆಯಲಿದೆ.
ಫೆ.18ರಂದು ಶನಿವಾರ ಸಂಜೆ 4:45ಕ್ಕೆ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದ ಪಕ್ಕದಲ್ಲಿರುವ ಪುನರ್ವಸು ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿದ್ವಾನ್ ಜಯಲಕ್ಷ್ಮಿ ಎಸ್. ಭಟ್ ಮತ್ತು ಅವರ ಶಿಷ್ಯರ ಗಾಯನ ಕಾರ್ಯಕ್ರಮದಲ್ಲಿ ಪಕ್ಕವಾದ್ಯ ಸಹಕಾರವನ್ನು ವಿದ್ವಾನ್ ಸತ್ಯ ಕುಮಾರ್ (ಮೃದಂಗ) ಮತ್ತು ವಿದ್ವಾನ್ ವಾಸುಕಿ (ವಯಲಿನ್) ನೀಡಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


