ಹಾಸನ ಶ್ರೀ ಕಾಶೀವಿಶ್ವನಾಥ ದೇವಾಲಯದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮಗಳು

Upayuktha
0




ಹಾಸನ: ಇಲ್ಲಿನ ಹುಣಸಿನಕೆರೆ ಬೀದಿಯಲ್ಲಿರುವ ಶ್ರೀ ಕಾಶೀ ವಿಶ್ವನಾಥ ದೇವಾಲಯ ಜೀರ್ಣೋದ್ದಾರ ಸಮಿತಿ ಹಾಗೂ ಕನ್ನಡ ರತ್ನ ಯುವಕರ ಸಂಘ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಬುಧುವಾರ ದೇವಿಗೆರೆಯಿಂದ ಮುತ್ತೈದೇಯರಿಂದ 101 ಕಳಸ ತಂದು ಮಂಡಲ ಪೂಜೆಯ ಪ್ರಯುಕ್ತ ದೇವಾಲಯದಲ್ಲಿ ಕಲಾಹೋಮ ಏರ್ಪಡಿಸಿ ಪೂರ್ಣಾಹುತಿ, ಮಹಾಮಂಗಲಾರತಿ ನಂತರ ತೀರ್ಥಪ್ರಸಾದ ವಿನಿಯೋಗಿಸಲಾಯಿತು.


ಮಹಾಶಿವರಾತ್ರಿ ಪ್ರಯುಕ್ತ ಶನಿವಾರ 101 ಲೀ. ಹಾಲಿನ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ಮತ್ತು ಭಾನುವಾರ ಮಧ್ಯಾಹ್ನ ಮಹಾ ಪ್ರಸಾದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಹಾಸನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶನಿವಾರ ರಾತ್ರಿ 9.30ಕ್ಕೆ ಹಾಸನಾಂಬ ಸುಗಮ ಸಂಗೀತ ಸಭಾ ಸಂಗಡಿಗರಿಂದ ಹಾಸನ ಬಾಬು ಸಾರಥ್ಯದಲ್ಲಿ ಸುಗಮ ಸಂಗೀತ, ರಾತ್ರಿ 10.30ಕ್ಕೆ ಎಂ.ಎನ್.ತೇಜಸ್ವಿತಿ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ, ರಾತ್ರಿ 11ರಿಂದ ಬೆಳಗಿನ ಜಾವ 6 ಗಂಟೆಯವರಗೆ ಅರಸೀಕೆರೆ ತಾಲ್ಲೂಕಿನ ಬೊಮ್ಮೇನಹಳ್ಳಿ ಬಸವರಾಜ ಮತ್ತು ಸಂಗಡಿಗರಿಂದ ಅಖಂಡ ಭಜನೆ ಏರ್ಪಡಿಸಲಾಗಿದೆ. ಕಾಶಿ ವಿಶ್ವನಾಥ ದೇವಾಲಯದ ಸಂಸ್ಥಾಪಕರಾದ ದಿ. ಮಾವುತನಹಳ್ಳಿ ಸಂಕರಪ್ಪನವರ ವಂಶಸ್ಥರಾದ ಶ್ರೀ ಆರ್.ರಾಮಶಂಕರಬಾಬು ಓರ್ವ ತತ್ವಪದ ಗಾಯಕರಾಗಿದ್ದು ಭಕ್ತಾದಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕೋರಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top