ಕಾಂತಾವರ ಕನ್ನಡ ಸಂಘದ ದತ್ತಿ ಪ್ರಶಸ್ತಿ ಘೋಷಣೆ

Upayuktha
0

ಉಡುಪಿ: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು, ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರ ಹೆಸರಿನ ಗಮಕ ಕಲಾ ಪ್ರವಚನ ಪ್ರಶಸ್ತಿಗೆ ಪ್ರಸಿದ್ಧ ಗಮಕ ವಾಚನಕಾರರಾದ ಡಾ.ರಾಘವೇಂದ್ರ ರಾವ್ ಪಡುಬಿದ್ರಿ, ಪ್ರಸಿದ್ಧ ಗಮಕಿ ಉಡುಪಿಯ ಶ್ರೀಮತಿ ಯಾಮಿನಿ ಭಟ್ ಅವರು ಸ್ಥಾಪಿಸಿದ ಗಮಕ ಕಲಾ ವಾಚನ ಪ್ರಶಸ್ತಿಗೆ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಮತ್ತು ಭಾರತ ಸರಕಾರದ ‘ಶಿಲ್ಪಗುರು’ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಅವರ ಹೆಸರಿನ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಗೆ ಶಿಲ್ಪಿ ಶ್ರೀ ಬಿ.ಎಸ್.ಭಾಸ್ಕರ ಆಚಾರ್ಯ ಕಾರ್ಕಳ ಅವರು ಆಯ್ಕೆಯಾಗಿದ್ದಾರೆ. 


ಈ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿ ನಗದು, ತಾಮ್ರ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಇದೇ ಫೆಬ್ರವರಿ 26ರಂದು ಕಾಂತಾವರದಲ್ಲಿ ನಡೆಯುವ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನದ ಜೊತೆ ಮೂರು ದತ್ತಿ ಪ್ರಶಸ್ತಿಗಳ ಪ್ರದಾನ ನಡೆಸಲಾಗುವುದೆಂದು ಕಾಂತಾವರ ಕನ್ನಡ ಸಂಘದ ಪ್ರಕಟಣೆಯು ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top