ಸುಳ್ಯ: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಫೆ.18 ರಂದು ಶನಿವಾರ ಮಹಾ ಶಿವರಾತ್ರಿಯ ದಿನ ಶಿವರಾತ್ರಿ ಗಾನವೈಭವ ಕಾರ್ಯಕ್ರಮವು ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮ, ಶಿವರಾತ್ರಿ ಗಾನ ವೈಭವ ನಡೆಯಲಿದೆ. ಭಕ್ತಿಯ ಹಾಡು ಹಾಡಲು ಆಸಕ್ತ ಇರುವ ಹಿರಿಯ ಮತ್ತು ಕಿರಿಯ ಗಾಯಕರು ತಮ್ಮ ಹೆಸರನ್ನು 9845309239 ಈ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕೇವಲ 20 ಜನರಿಗೆ ಮಾತ್ರ ಅವಕಾಶ. ಭಾಗವಹಿಸುವ ಎಲ್ಲಾ ಗಾಯಕರಿಗೆ ಚೆಂದದ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವದು. ಕಡ್ಡಾಯವಾಗಿ ಯಾವುದೇ ಭಾಷೆಯ ಭಕ್ತಿಗೀತೆಗಳನ್ನು ಮಾತ್ರ ಹಾಡಬೇಕು. ಆಸಕ್ತ ಗಾಯಕರು ಬೇಗ ಹೆಸರು ನೀಡಿರಿ ಎಂದು ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ, ಸಾಹಿತಿ ಹಾಗೂ ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ