ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯೊಂದಿಗಿದ್ದು, 2007ರಲ್ಲಿ ಪ್ರತ್ಯೇಕಗೊಂಡು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಾಗಿರುತ್ತದೆ. 2017ರಲ್ಲಿ ಪ್ರತ್ಯೇಕಗೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಅಕಾಡೆಮಿಯ ಸಂಕ್ಷಿಪ್ತ ಪರಿಚಯ:
ಪ್ರಾರಂಭದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಾಗಿರುತ್ತದೆ. 2007ರಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಾಗಿರುತ್ತದೆ. ದಿನಾಂಕ:06.06.2017ರಲ್ಲಿ ಬಯಲಾಟ ಅಕಾಡೆಮಿ ಪ್ರತ್ಯೇಕವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಾಗಿದೆ. ಈ ಅಕಾಡೆಮಿಯ ಪ್ರಪ್ರಥಮ ಅಧ್ಯಕ್ಷರು ಪ್ರೊ. ಎಂ.ಎ. ಹೆಗಡೆಯವರು. ನಂತರ ಹೊಸ ಸರ್ಕಾರ ಬಂದಾಗ ಮತ್ತೆ 2ನೇ ಬಾರಿಗೆ ಪ್ರೊ. ಎಂ.ಎ. ಹೆಗಡೆಯವರು ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಅವರು ನಿಧನ ಹೊಂದಿರುತ್ತಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯಲ್ಲಿ ಎರಡು ಪ್ರಕಾರಗಳಾದ ಪಡುವಲಪಾಯ ಮತ್ತು ಮೂಡಲಪಾಯ. ಕರಾವಳಿಯ ಪಡುವಲಪಾಯ ಯಕ್ಷಗಾನ, ತೆಂಕು, ಬಡಗು, ಬಡಾಬಡಗು ಯಕ್ಷಗಾನ, ಗೊಂಬೆಯಾಟ, ತಾಳಮದ್ದಲೆ ಇರುತ್ತದೆ. ಮೂಡಲಪಾಯದಲ್ಲಿ ಮೂಡಲಪಾಯ, ಘಟ್ಟದಕೋರೆ, ಕೇಳಿಕೆ ಪ್ರಕಾರಗಳು ಇರುತ್ತವೆ. ಅಕಾಡೆಮಿಕ್ ಆಗಿ ಕಲೆಯನ್ನು ಬೆಳೆಸುವುದು, ಪ್ರೋತ್ಸಾಹಿಸುವುದು, ಪುನರ್ ಜೀವನಗೊಳಿಸುವುದು, ಸಹಕಾರ ನೀಡುವುದು ಈ ಅಕಾಡೆಮಿಯ ಉದ್ದೇಶವಾಗಿದೆ.
1. ತರಬೇತಿ ನೀಡುವ ಮೂಲಕ ಕಲೆಯನ್ನು ಬೆಳೆಸುವುದು.
2. ಮೂಡಲಪಾಯ ಯಕ್ಷಗಾನ ನಶಿಸಿ ಹೋಗುತ್ತಿದ್ದು ಅದನ್ನು ಪುನರ್ ಜೀವನಗೊಳಿಸುವುದು.
3. ಯಕ್ಷಗಾನ ಕಾರ್ಯಕ್ರಮ ನೀಡುವುದು, ವಿದ್ವಾಂಸರಿಗೆ ಗೋಷ್ಠಿಯಲ್ಲಿ ಅವಕಾಶ ನೀಡುವುದು, ಪುಸ್ತಕ ಪ್ರಕಟಣೆ, ಮಾಸಾಶನದ ಸಂದರ್ಶನ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡುವುದರ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುವುದು.
4. ಯಕ್ಷಗಾನ ಸಾಹಿತ್ಯ ಉಳಿಯುವುದಕ್ಕೆ ಪುಸ್ತಕ ಪ್ರಕಟಣೆಯನ್ನು ಮಾಡುವುದು.
5. ಹೆಸರಾಂತ ಹಿರಿಯ ಕಲಾವಿದರುಗಳ ಸಂಕ್ಷಿಪ್ತ ವಿವರಗಳೊಂದಿಗೆ ಅರ್ಧ ಗಂಟೆಯ ಆಡಿಯೋ ಮತ್ತು ವಿಡಿಯೋವುಳ್ಳ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವುದು.
6. ಯಕ್ಷಗಾನ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳನ್ನು ಪ್ರತಿವರ್ಷ ನೀಡುವುದು.
7. ಅಕಾಡೆಮಿಯು ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯವಾದ ಎಲ್ಲಾ ವಿಷಯಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವುದು.
8. ಕರ್ನಾಟಕ ಯಕ್ಷಗಾನ ಅಕಾಡೆಮಿಯಾದ ಮೇಲೆ ಇಲ್ಲಿಯವರೆಗೆ 2017 ರಿಂದ ಪಾರ್ತಿಸುಬ್ಬ ಪ್ರಶಸ್ತಿ-3, ಗೌರವ ಪ್ರಶಸ್ತಿ-15, ಯಕ್ಷಸಿರಿ ಪ್ರಶಸ್ತಿ-30, ಪುಸ್ತಕ ಬಹುಮಾನ-8 ಜನರಿಗೆ ನೀಡಲಾಗಿದೆ. 2020ನೇ ಸಾಲಿಗೆ ಈಗಾಗಲೇ ಪಾರ್ತಿಸುಬ್ಬ-1, ಗೌರವ ಪ್ರಶಸ್ತಿ-5, ಯಕ್ಷಸಿರಿ ಪ್ರಶಸ್ತಿ-10 ಕಲಾವಿದರನ್ನು ಆಯ್ಕೆ ಮಾಡಿ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ.
9. ಪಾರ್ತಿಸುಬ್ಬ ಪ್ರಶಸ್ತಿ 1 ಲಕ್ಷ ನಗದು, ಗೌರವ ಪ್ರಶಸ್ತಿ ತಲಾ ರೂ.50,000/-ಗಳು, ಯಕ್ಷಸಿರಿ ತಲಾ ರೂ.25,000/-ಗಳು, ಪುಸ್ತಕ ಬಹುಮಾನ ರೂ.25,000/-ಗಳ ನಗದು ಪ್ರಶಸ್ತಿಗಳು, ಪೇಟ, ಶಾಲು, ಹಾರ, ಸ್ಮರಣಿಕೆ, ಹಣ್ಣು-ಹಂಪಲು, ಪ್ರಶಸ್ತಿ ಸ್ಮರಣೆಯನ್ನು ನೀಡಿ ಗೌರವಿಸಲಾಗುವುದು.
10. ಯಕ್ಷಗಾನ ನಡೆಸುವ ಸಂಘ-ಸಂಸ್ಥೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಅಕಾಡೆಮಿ ಮತ್ತು ಯಕ್ಷಸಿರಿ ಸಂಸ್ಥೆಯ ಒಡಂಬಡಿಕೆಯಿಂದ ಗ್ರಂಥಗಳನ್ನು ತಯಾರಿಸಿ ಅದನ್ನು ಡಿಜಿಟಲೀಕರಣಗೊಳಿಸಿ, ವೆಬ್‍ಸೈಟ್ ಮೂಲಕ ಸಂಘ-ಸಂಸ್ಥೆಗಳು ಮತ್ತು ಕಲಾವಿದರು ಉಚಿತವಾಗಿ ಪಡೆಯಲು ಮಾನ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವರ ಮೂಲಕ ಲೋಕಾರ್ಪಣೆಗೊಳಿಸಿ ಚಾಲನೆ ನೀಡಲಾಯಿತು. ಈಗಾಗಲೇ ಅಕಾಡೆಮಿಯ ವೆಬ್‍ಸೈಟ್: ತಿತಿತಿ.ಞಚಿಡಿಟಿಚಿಣಚಿಞಚಿ ಥಿಚಿಞshಚಿgಚಿಟಿಚಿ ಚಿಛಿಚಿಜemಥಿ.ಛಿom ನಲ್ಲಿ 89 ಪ್ರಸಂಗಗಳು ಲಭ್ಯವಿರುತ್ತವೆ.
11. 2022ನೇ ಸಾಲಿನಿಂದ ದತ್ತಿನಿಧಿ ಪ್ರಶಸ್ತಿಯನ್ನು ‘ಹಿರಿಯ ಪರಮಯ್ಯ ಹಾಸ್ಯಗಾರ’ ಇವರ ಹೆಸರಿನಲ್ಲಿ ಪ್ರತಿ ವರ್ಷ ನೀಡಲಾಗುತ್ತಿದೆ.
12. ಯಕ್ಷಗಾನ ಕಲಾತಂಡಗಳು-388, ಕಲಾವಿದರು ಸುಮಾರು 10,000 ಮಂದಿ ಕಲಾವಿದರಿದ್ದಾರೆ. ಮೂಡಲಪಾಯದಲ್ಲಿ-150 ಕಲಾತಂಡಗಳು, ಕಲಾವಿದರು ಸುಮಾರು 4,000 ಕಲಾವಿದರಿದ್ದಾರೆ.
13. ಅಕಾಡೆಮಿಯು ಈಗಾಗಲೇ 30 ಪುಸ್ತಕಗಳನ್ನು ಪ್ರಕಟಿಸಿದೆ. ಹಾಗೂ ಸಮ್ಮೇಳನದಲ್ಲಿ 18 ಪುಸ್ತಕಗಳು ಬಿಡುಗಡೆಯಾಗಲಿದೆ. ಅಲ್ಲದೆ, 18 ಜನ ಹಿರಿಯ ಯಕ್ಷಗಾನ ಕಲಾವಿದರ ಸಾಕ್ಷ್ಯಚಿತ್ರಗಳು ನಿರ್ಮಾಣವಾಗಿರುತ್ತದೆ.
14. 2017 ರಿಂದ ಯಕ್ಷಗಾನ ಅಕಾಡೆಮಿ ಪ್ರತ್ಯೇಕವಾದ ಮೇಲೆ ಸುಮಾರು 200 ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ವ್ಯಾಪ್ತಿಗೆ ಬರುವ ಕಲಾಪ್ರಕಾರಗಳು
1. ತೆಂಕುತಿಟ್ಟು ಯಕ್ಷಗಾನ
2. ಬಡಗುತಿಟ್ಟು ಯಕ್ಷಗಾನ
3. ಬಡಾಬಡಗುತಿಟ್ಟು ಯಕ್ಷಗಾನ
4. ತಾಳಮದ್ದಲೆ
5. ಮೂಡಲಪಾಯ ಯಕ್ಷಗಾನ
6. ಕೇಳಿಕೆ
7. ಘಟ್ಟದಕೋರೆ
8. ಯಕ್ಷಗಾನೀಯ ಗೊಂಬೆಯಾಟ
ಯಕ್ಷಗಾನ
ಕರ್ನಾಟಕ ಕಲೆಗಳ ತವರೂರು. ಯಕ್ಷಗಾನ ಕರ್ನಾಟಕದ ಪ್ರಾತಿನಿಧಿಕ ಕಲೆ ಎಂದೇ ಹೇಳಬಹುದಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡದಿಂದ ಬೆಳೆದು ಬಂದ ಈ ಕಲೆ ರಾಷ್ಟ್ರವ್ಯಾಪಿಯಾಗಿ, ವಿಶ್ವವ್ಯಾಪಿಯಾಗಿ ಜನಪ್ರಿಯತೆ ಗಳಿಸಿದೆ.
ನರ್ತನ, ಗಾಯನ, ವಾದನ, ಅಭಿನಯ, ಸಂಭಾಷಣೆಯಿಂದ ಸಂಪನ್ನಗೊಂಡ ಪೂರ್ಣ ಕಲೆಯಾಗಿದೆ. ಪಾತ್ರಕ್ಕೆ ತಕ್ಕಂತ ಮುಖವರ್ಣಿಕೆ ಹಾಗೂ ವೇಷಭೂಷಣ ಹೊಂದಿದೆ. ಮರದಿಂದ ಕೆತ್ತಿ ಚಿನ್ನದ ಬಣ್ಣದ ಜೀಗಡೆ ಹಚ್ಚಿ ಮಾಡಿದ ಕಿರೀಟ ಹಾಗೂ ಆಭರಣಗಳು ಈ ಕಲೆಗೆ ವಿಶಿಷ್ಟತೆಯನ್ನು ನೀಡಿದೆ. ರಾಜಕುಮಾರ, ರಾಜ, ಖಳನಾಯಕ, ರಾಕ್ಷಸ ರಾಣಿ, ಸೇವಕಿ, ದೂತ, ಸೇವಕ, ರಾಕ್ಷಸಿ ಅಲ್ಲದೆ ವಿವಿಧ ಪ್ರಾಣಿ ಪಕ್ಷಿಗಳ ಪಾತ್ರವನ್ನೂ ಯಕ್ಷಗಾನದಲ್ಲಿ ಬಳಸುತ್ತಾರೆ.
11ನೇ ಶತಮಾನದಲ್ಲಿ ಪ್ರಾರಂಭವಾದ ವೈಷ್ಣವ ಭಕ್ತಿ ಪಂಥದಿಂದ ಯಕ್ಷಗಾನ ಪ್ರಭಾವಿತವಾಗಿದೆ ಎಂದು ಸಂಶೋಧಕರ ಅಭಿಮತ. ಕಲಾವಿದರ ತಂಡ (ಮೇಳ) ಯಾವುದಾದರೂ ದೇವಸ್ಥಾನದ ಆಶ್ರಯದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಯಕ್ಷಗಾನದ ಪ್ರದರ್ಶನವನ್ನು ರಾತ್ರಿ ಇಡೀ ನೀಡುತ್ತಿದ್ದರು. ರಾಮಾಯಣ, ಮಹಾಭಾರತ, ಭಾಗವತ ಹಾಗೂ ದೇವಿ ಪುರಾಣದ ಪ್ರಸಂಗಗಳನ್ನು ಪ್ರದರ್ಶಿಸುತ್ತಿದ್ದರು. ಈಗ ಅನೇಕ ಹವ್ಯಾಸಿ ತಂಡಗಳು ಕಾಲ ಮಿತಿಯ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ. ಇದು ಕೇವಲ ಮನರಂಜನೆ ಮಾತ್ರ ಆಗಿರದೆ ಮಾನವೀಯ ಮೌಲ್ಯವನ್ನು ಬಳಸುವಲ್ಲಿ ಸಫಲವಾಗಿದೆ.
ನಾಲ್ಕು ಬಿದಿರನ ಬೊಂಬು ಅಥವಾ ಮರದಿಂದ ವೇದಿಕೆ(ರಂಗಸ್ಥಳ) ನಿರ್ಮಾಣ ಮಾಡಿ ಪ್ರದರ್ಶನ ನಿಡುವುದು ವಾಡಿಕೆ. ಈಗ ಯಕ್ಷಗಾನ ಸುಸಜ್ಜಿತ ಸಭಾಂಗಣದಲ್ಲೂ ನಡೆಯುತ್ತದೆ. ರಂಗಸ್ಥಳದ ಮೂರು ಭಾಗದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಲು ಅವಕಾಶವಿದ್ದು, ಹಿಂದಿನ ಸ್ಥಳದಲ್ಲಿ ಭಾಗವತ (ಹಾಡುಗಾರ) ಮೃದಂಗ ಚಂಡೆವಾದಕರು ಕುಳಿತು ಕೊಳ್ಳುವುದು ವಾಡಿಕೆ.
ಚೌಕಿ (ಮುಖವರ್ಣಿಕೆ ಮಾಡಿಕೊಳ್ಳುವ ಸ್ಥಳ) ಯಿಂದ ಗಣಪತಿ ಪೂಜೆ ಮಾಡಿ ರಂಗಕ್ಕೆ ಹೋಗುವುದು ವಾಡಿಕೆ. ರಂಗದಲ್ಲಿ ಯಕ್ಷಗಾನ ಪ್ರಾರಂಭವಾಗುವ ಮೊದಲು ಕೋಡಂಗಿ ಕುಣಿತ, ಬಾಲಗೋಪಾಲ ಕುಣಿತ, ಪೀಠಿಕಾ ಸ್ತ್ರೀವೇಷ ಹಾಗೂ ಒಡ್ಡೋಲಗ ಕುಣಿತದಂತಹ ಪೂರ್ವರಂಗ ಪ್ರದರ್ಶನ ನಡೆಯಲಿದ್ದು, ಆಮೇಲೆ ಪ್ರಸಂಗ ಪ್ರಾರಂಭವಾಗುತ್ತದೆ.
ಅನೇಕ ಹೆಸರಾಂತ ಕಲಾವಿದರು ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಡಾ.ಕೆ.ಶಿವರಾಮ ಕಾರಂತರು ಯಕ್ಷಗಾನವನ್ನು ಭಾರತದ ಉದ್ದಗಲಕ್ಕೂ, ವಿದೇಶಗಳಿಗೂ ಹರಡುವಂತೆ ಮಾಡಿದರು. ಅವರು ನಿರ್ದೇಶಿಸಿದ ಯಕ್ಷಗಾನ ಖ್ಯಾತಿ ಕನ್ನಡೇತರರಿಗೂ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿತು.
ಯಕ್ಷಗಾನದಲ್ಲಿ ತೆಂಕು ಮತ್ತು ಬಡಗು ಎಂಬ ಎರಡು ಪ್ರಭೇದಗಳಿವೆ. ತೆಂಕಿನಲ್ಲಿ ಗಿರ್ಕಿ ಪ್ರಸಿದ್ಧವಾದರೆ ಬಡಗಿನಲ್ಲಿ ಮಂಡಿ ಹಾಕುವುದು ವಿಶಿಷ್ಟ. ಯಕ್ಷಗಾನ ಕೇವಲ ಜಾನಪದ ಪ್ರಕಾರ ಆಗಿರದೆ ಶಾಸ್ತ್ರೀಯತೆಯನ್ನೂ ಒಳಗೊಂಡಿದೆ. ಈ ಬಗ್ಗೆ ಗುರುಗಳಿಂದ ಸತತ ಅಭ್ಯಾಸ ಅಗತ್ಯ.
ಯಕ್ಷಗಾನದ ಹಿನ್ನೆಲೆ:
ಕರ್ನಾಟಕ ಯಕ್ಷಗಾನ ಅಕಾಡೆಮಿಯಲ್ಲಿ ಎರಡು ಪ್ರಕಾರಗಳಾದ ಪಡುವಲಪಾಯ ಮತ್ತು ಮೂಡಲಪಾಯ. ಕರಾವಳಿಯ ಪಡುವಲಪಾಯ ಯಕ್ಷಗಾನ, ತೆಂಕು, ಬಡಗು, ಬಡಾಬಡಗು ಯಕ್ಷಗಾನ, ಗೊಂಬೆಯಾಟ, ತಾಳಮದ್ದಲೆ ಇರುತ್ತದೆ. ಮೂಡಲಪಾಯದಲ್ಲಿ ಮೂಡಲಪಾಯ, ಘಟ್ಟದಕೋರೆ, ಕೇಳಿಕೆ ಪ್ರಕಾರಗಳು ಇರುತ್ತವೆ. ಅಕಾಡೆಮಿಕ್ ಆಗಿ ಕಲೆಯನ್ನು ಬೆಳೆಸುವುದು, ಪ್ರೋತ್ಸಾಹಿಸುವುದು, ಪುನರ್ ಜೀವನಗೊಳಿಸುವುದು, ಸಹಕಾರ ನೀಡುವುದು.
ಮೂಡಲಪಾಯವು ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ನಗರ, ತುಮಕೂರು, ರಾಮನಗರ, ಹಾಸನ, ಚಾಮರಾಜನಗರ ಮತ್ತು ಕೋಲಾರ ಮುಂತಾದ ಜಿಲ್ಲೆಗಳಲ್ಲಿರುತ್ತದೆ.
ಕೇಳಿಕೆಯು ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಂಡು ಬರುತ್ತದೆ. ಘಟ್ಟದಕೋರೆ, ಚಾಮರಾಜನಗರ, ಮೈಸೂರು, ಬಳ್ಳಾರಿ, ಹಾವೇರಿ, ಮಂಡ್ಯ ಜಿಲ್ಲೆಯಲ್ಲಿ ಕಂಡುಬರುತ್ತದೆ. ಈ ಎಲ್ಲಾ ಪ್ರಸಂಗಗಳು ರಾಮಾಯಣ, ಮಹಾಭಾರತ ಹಾಗೂ ಐತಿಹಾಸಿಕ ಕಥೆಗಳನ್ನಾಧರಿತ ಯಕ್ಷಗಾನವು ಬೆಳೆದಿದೆ. ಈ ಕ್ಷೇತ್ರದಲ್ಲಿ ಐವತ್ತು ಸಾವಿರ ಕಲಾವಿದರು ಇದ್ದಾರೆ. 280 ತಂಡಗಳು ಇವೆ.
ಪಡುವಲಪಾಯ (ಕರಾವಳಿಯ) ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ದಕ್ಷಿಣಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮೈಸೂರು, ಹೊರನಾಡುಗಳಾದ ಬಾಂಬೆ, ದೆಹಲಿ, ಪುಣೆ, ಗೋವಾ, ಕಾಸರಗೋಡು (ಕೇರಳ) ಮುಂತಾದ ಜಿಲ್ಲೆಗಳಲ್ಲಿ ಕರಾವಳಿ ಯಕ್ಷಗಾನವು ಇರುತ್ತದೆ. ಈ ಕ್ಷೇತ್ರದಲ್ಲಿ ಒಂದು ಲಕ್ಷ ಕಲಾವಿದರಿದ್ದಾರೆ. ಒಟ್ಟು ನೂರು ಮೇಳಗಳು ಇವೆ.
ಕರ್ನಾಟಕ ಯಕ್ಷಗಾನವು ಸಮಗ್ರ ಕರ್ನಾಟಕದಲ್ಲಿ ಯಕ್ಷಗಾನ ಇರುತ್ತದೆ. ಈ ಕಲೆಯು ಪುರಾತನ ಕಾಲದಿಂದ ಬೆಳೆದು ಬಂದಿದೆ ರಾಮಾಯಣ, ಮಹಾಭಾರತದ ಐತಿಹಾಸಿಕ ಕಥೆಗಳನ್ನಾಧಾರಿಸಿ ಪ್ರಸಂಗಗಳನ್ನು ನೀಡುತ್ತಾ ಬರಲಾಗುತ್ತಿದೆ. ಅದರ ಜೊತೆಗೆ ಐತಿಹಾಸಿಕ ಸ್ಥಳೀಯ ಪ್ರಸಂಗಗಳು, ತಾಳಮದ್ದಳೆಗಳು, ಯಕ್ಷಗಾನ ಗೊಂಬೆಯಾಟಗಳು, ತೆಂಕು, ಬಡಗು, ಬಡಾಬಡಗು ಪ್ರಕಾರಗಳಲ್ಲಿ ಈ ಯಕ್ಷಗಾನ ಬೆಳೆದಿದೆ.
ಕರಾವಳಿ ಯಕ್ಷಗಾನ ಹಾಗೂ ಮೂಡಲಪಾಯ ಯಕ್ಷಗಾನದ ಭಾಗವತಿಕೆಗಳು ಒಂದೇ ರೂಪವಾಗಿರುತ್ತದೆ. ಆದರೆ ಅದರ ವೇಷ-ಭೂಷಣಗಳು, ಕುಣಿತಗಳು ವಿಭಿನ್ನವಾಗಿರುತ್ತದೆ. ಇವುಗಳನ್ನು ನೋಡಿದರೆ ಈ ಕಲೆಯು ಪುರಾತನ ಕಲೆಯಾಗಿರುತ್ತದೆ.
ಈ ಕಲೆಯ ಕುರಿತು 50ಕ್ಕೂ ಹೆಚ್ಚು ಪಿ.ಹೆಚ್.ಡಿ ಅಧ್ಯಯನ ನಡೆದಿದೆ. ಅದೇ ಪ್ರಮಾಣದಲ್ಲಿ ಎಂ.ಫಿಲ್ ಅಧ್ಯಯನ ನಡೆದಿದೆ. ವಿದೇಶಗಳಲ್ಲಿ ಕೂಡ ಯಕ್ಷಗಾನ ಮೇಳಗಳು ಮತ್ತು ಕಲಾವಿದರು ಹುಟ್ಟಿಕೊಂಡಿದ್ದಾರೆ. ಆಶೂಕಾವ್ಯವನ್ನು ಪ್ರತಿನಿತ್ಯವೂ ನೂರಾರು ತಾಳಮದ್ದಲೆ ಬಗೆದು ಆಶೂಕಾವ್ಯಗಳನ್ನು ನಿರ್ಮಿಸುತ್ತವೆ.
ಒಂದೇ ಒಂದು ಆಂಗ್ಲ ಪದವನ್ನು ಬಳಸದೇ ಇಡೀ ರಾತ್ರಿ ಕನ್ನಡದಲ್ಲಿ ಪಾತ್ರಗಳ ಮುಖಾಮುಖಿ ಚರ್ಚೆ ನಡೆದು ವ್ಯಾವಹಾರಿಕ, ಶಾಸ್ತ್ರಾರ್ಥಗಳ ಚಿಂತನೆ, ವೇದಾಂತ ಚಿಂತನೆ, ಪುರಾಣಗಳ ಚರ್ಚೆ, ಮಹಾಭಾರತ, ರಾಮಾಯಣಗಳ ಹೊಸ-ಹೊಸ ವ್ಯಾಖ್ಯಾನಗಳು ನಡೆದು ಕನ್ನಡದ ಶ್ರೀಮಂತಿಕೆಗೆ ಇದೊಂದು ಭವ್ಯ-ದಿವ್ಯ ಆಶೂ ವೇದಿಕೆಯಾಗಿದೆ ಸಮಗ್ರ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಕನ್ನಡದ ಜನತೆಯ ಆಶ್ರಯದೊಂದಿಗೆ ದೇಶೀ ಕಲೆಯಾಗಿ ಉಳಿದು ಬಂದಿದೆ. ಅದನ್ನು ಬೆಳೆಸುವುದು, ಉಳಿಸುವುದು ಅದಕ್ಕಾಗಿ ಕರ್ನಾಟಕ ರಾಜ್ಯ ಯಕ್ಷಗಾನ ಸಮ್ಮೇಳನವನ್ನು ನಡೆಸುವುದು ಅನಿವಾರ್ಯವಾಗಿದೆ. ಯಕ್ಷಗಾನ ಉಳಿವು ಅದು ಕನ್ನಡದ ಉಳಿವು ಕನ್ನಡ ಮತ್ತು ಸಂಸ್ಕೃತಿಯ ಉಳಿವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ