ಗೋವಾದಲ್ಲಿ ಮಧುರ ಮಧುರವೀ ಮಂಜುಳ ಗಾನ 16ನೇ ಸಂಚಿಕೆ

Upayuktha
0


ಪಣಜಿ: ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ಮೂಲಕ ಗೋವಾದಲ್ಲಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವಂತಹ ಉತ್ತಮ ಕಾರ್ಯ ಕೈಗೊಳ್ಳುವಂತಾಗಿದೆ. ಪುಟ್ಟ ಪುಟ್ಟ ಮಕ್ಕಳಲ್ಲಿಯೂ ಸಂಗೀತಾಸಕ್ತಿ ಮೂಡುತ್ತಿರುವುದು ಸಂತಸದ ವಿಷಯವಾಗಿದೆ. ಮಧುರ ಮಧುರವೀ ಮಂಜುಳಗಾನ ಈ ಕಾರ್ಯಕ್ರಮ ಇಂದು 16 ನೇಯ ಎಪಿಸೋಡ್ ಪೂರ್ಣಗೊಳಿಸಿದೆ. ಪ್ರತಿ ವಾರವೂ ಈ ಕಾರ್ಯಕ್ರಮದಲ್ಲಿ ಹೊಸತನವನ್ನು ಕಾಣುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಅಧ್ಯಕ್ಷ ಹಾಗೂ ಅಖಿಲ ಗೋವಾ ಕನ್ನಡ ಮಹಾಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ನುಡಿದರು.


ಪಣಜಿ ಸಮೀಪದ ಪರ್ವರಿಯ ಘಾಟಗೆ ಮಹಾರಾಜ ಸಭಾಗೃಹದಲ್ಲಿ ಸೂರ್ಯೋದಯ ಕನ್ನಡ ಸಂಘ ಪರ್ವರಿ ಇವರ ಆಶ್ರಯದಲ್ಲಿ ಆಯೋಜಿಸಿದ್ಧ ಮಧುರ ಮಧುರವಿ ಮಂಜುಳಗಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು,


ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮೀತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ-ಇಂದಿನ ಕಾರ್ಯಕ್ರಮ ನೋಡಿದರೆ ನಾವು ಬೆಳಗಾವಿಯಲ್ಲಿದ್ದೇವೊ ಅಥವಾ ಬೆಂಗಳೂರಿನಲ್ಲಿದ್ದೇವೊ ಎಂಬುದು ಗೊತ್ತಾಗುತ್ತಿಲ್ಲ, ಗೋವಾದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಕನ್ನಡಿಗರು ಸೇರಿಸುವುದು ಹೆಮ್ಮೆಯ ವಿಷಯ. ಗೋವಾದಲ್ಲಿ 4 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಿಂದ ಗೋವಾಕ್ಕೆ ಬಂದು ಇಲ್ಲಿ ಬದುಕು ಕಟ್ಟಿಕೊಂಡು ಇಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯ ಎಂದರು.


ಈ ಸಂದರ್ಭಸದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ  ವಿಜಯಪುರ ವಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾದ ಡಾ.ಕಲ್ಮೇಶ ಹಾವೇರಪೇಟ, ಪತ್ರಕರ್ತ ಪ್ರಕಾಶ್ ಭಟ್, ಸೂರ್ಯೋದಯ ಕನ್ನಡ ಸಂಘದ ಅಧ್ಯಕ್ಷ ಗಂಗಯ್ಯ ಹಿರೇಮಠ, ಕಾರ್ಯದರ್ಶಿ ಬಾಬು ಬಾಗೇವಾಡಿ, ಕಲಾ ಸಂಗಮ ಸಂಸ್ಥೆಯ ಧಾರವಾಡದ ಅಧ್ಯಕ್ಷ ಪ್ರಭು ಹಂಚಿನಾಳ, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಕಸಾಪ ಪಣಜಿ ತಾಲೂಕಾ ಘಟಕದ ಅಧ್ಯಕ್ಷ ಹನುಮಂತ ಗೊರವರ್, ಕಸಾಪ ಉತ್ತರ ಗೋವಾ ಜಿಲ್ಲಾ ಘಟಕದ ಗೌರವ ಕೋಶಾಧ್ಯಕ್ಷ ನಾಗರಾಜ ಶಾನಭಾಗ್, ಕಸಾಪ ಗೋವಾ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಬಸವರಾಜ ಮೇಟಿ ಮತ್ತಿತರರು ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ನಂತರ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲಿ ಗೋವಾದ ಯುವ ಕಲಾವಿದರು ಹಾಡಿದ ಹಾಗೂ ಹಾಗೂ ಜೂ.ಉಪೇಂದ್ರ ನಡೆಸಿಕೊಟ್ಟ ಕಾರ್ಯಕ್ರಮ ಪ್ರೇಕ್ಷಕರ ಮನ ಗೆದ್ದಿತು. ಗೋವಾದ ವಿವಿಧ ಭಾಗಗಳಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top