ಬೆಳ್ಳಿಯಿಂದ ಪೋಣಿಸಿದ ಅಡಿಕೆ ಹಾರ ಅಮಿತ್‌ ಶಾಗೆ ಉಡುಗೊರೆ, ಮುಳಿಯ ಜ್ಯುವೆಲ್ಸ್‌ನಿಂದ ತಯಾರಿ

Upayuktha
0

ಪುತ್ತೂರು: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಮೊನ್ನೆಯಷ್ಟೇ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲು ಪುತ್ತೂರಿಗೆ ಬಂದಿದ್ದಾಗ ಅವರಿಗೆ ಬೆಳ್ಳಿಯಿಂದ ಪೋಣಿಸಿದ ಅಡಿಕೆ ಮಾಲೆಯನ್ನು ತೊಡಿಸಿ ಗೌರವಿಸಲಾಯಿತು.


ಈ ಮಾಲೆಯನ್ನು ನಾಡಿನ ಹೆಸರಾಂತ ಚಿನ್ನಾಭರಣ ಸಂಸ್ಥೆ ಮುಳಿಯ ಜ್ಯುವೆಲ್ಸ್‌ನಲ್ಲಿ ತಯಾರಿಸಲಾಗಿತ್ತು. ಸ್ಥಳೀಯವಾಗಿ ಬೆಲೆದ ಸಿಂಗಾಪುರ ಅಡಿಕೆಯನ್ನು ಬೆಳ್ಳಿಯ ದಾರದಲ್ಲಿ ಪೋಣಿಸಿ ಅಡಿಕೆಗೆ ಬೆಳ್ಳಿಯ ಕವಚ ಹೊದೆಸಿ  ಈ ಹಾರವನ್ನು ವಿಶೇಷವಾಗಿ ತಯಾರಿಸಲಾಗಿತ್ತು. ಸುಮಾರು 41 ಗ್ರಾಂ ತೂಕದ ಮಾಲೆಯನ್ನು ಸಂಘಟಕರು ಮುಳಿಯ ಜ್ಯುವೆಲ್ಸ್‌ನಿಂದ ಖರೀದಿಸಿದ್ದರು.


ಕಳೆದ ವರ್ಷ ನಡೆದ ಕೃಷಿ ಯಂತ್ರ ಮೇಳದಲ್ಲಿ ಮುಳಿಯ ಜ್ಯುವೆಲ್ಸ್‌ನವರು ಚಿನ್ನದಿಂದ ಪೋಣಿಸಿದ ಅಡಿಕೆ ಹಾರವನ್ನು ಬಿಡುಗಡೆ ಮಾಡಿದ್ದರು. ಪ್ಲಾಸ್ಟಿಕ್‌ ಹಾರದ ಬದಲು ಇಂತಹ ಹಾರಗಳು ಹೆಚ್ಚು ಆಕರ್ಷಕವಾಗಿದ್ದು ಗಮನ ಸೆಳೆಯುತ್ತವೆ.


Post a Comment

0 Comments
Post a Comment (0)
Advt Slider:
To Top