ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಆಯುರಾರೋಗ್ಯ ಪ್ರಾರ್ಥಿಸಿ ವಿದ್ಯಾಪೀಠದಲ್ಲಿ ವಿಶೇಷ ಪೂಜೆ, ಹವನ

Upayuktha
0

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರಿಗೆ ಉತ್ತಮ ಆರೋಗ್ಯ ಮತ್ತು  ಆಯುಷ್ಯ ಪ್ರಾರ್ಥಿಸಿ ಅವರ ಕುಟುಂಬ ಸದಸ್ಯರಿಂದ ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು.


ಋತ್ವಿಜರಾದ ಕೃಷ್ಣಮೂರ್ತಿ ಉಪಾಧ್ಯಾಯ ಮತ್ತು ಕೆ.ಎಸ್‌ ರಾಘವೇಂದ್ರ ಭಟ್‌ ಇವರ ನೇತೃತ್ವದಲ್ಲಿ  ಮಹಾ ಧನ್ವಂತರಿ ಹೋಮ ಮತ್ತು ಮೃತ್ಯುಂಜಯ ಹೋಮಗಳೆಂಬ ಎರಡು ಮಹಾಯಾಗಗಳನ್ನು ನೆರವೇರಿಸಲಾಯಿತು.  ಬಳಿಕ ದೇವೇಗೌಡ ದಂಪತಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. 


ಕಳೆದ ನಾಲ್ಕು ದಿನಗಳಿಂದ ಈ ಸಂಬಂಧ ವಿದ್ಯಾಪೀಠದ ಆವರಣದಲ್ಲಿ ವಿಶೇಷ ಜಪ- ಪಾರಾಯಣಗಳು ನಡೆದಿದ್ದವು ಎಂದು ಮೂಲಗಳು ತಿಳಿಸಿವೆ.  ಸಮಾರಂಭದಲ್ಲಿ ದೇವೇಗೌಡರ ಪುತ್ರ ಎಚ್‌.ಡಿ ರೇವಣ್ಣ ದಂಪತಿಗಳು ಭಾಗವಹಿಸಿದ್ದರು.


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top