ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ವಿಭಾಗದ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೊ- ಫಿಲಮ್ಸ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದಿರುವ “ನೆನಪಿನ ಮಳೆಹನಿ' ಫೆಬ್ರವರಿ 14 ಪ್ರೇಮಿಗಳ ದಿನದಂದು ಹೆಸರಾಂತ ಸಂಸ್ಥೆ 'ಆನಂದ್ ಆಡಿಯೋ' ಯೂಟ್ಯೂಬ್ ಚಾನೆಲ್‌ನಲ್ಲಿ ತೆರೆಕಾಣಲಿದ್ದು ಭಾರಿ ನಿರೀಕ್ಷೆ ಹುಟ್ಟಿಸಿದೆ.
ಎರಡು ಮನಸುಗಳ ಭಾವನೆಗಳ ಮಾಧುರ್ಯ ಮತ್ತು ಸ್ನೇಹಬಂಧದ ವೈಶಿಷ್ಟö್ಯತೆಯ ಕಥನದೊಂದಿಗಿನ 'ನೆನಪಿನ ಮಳೆಹನಿ' ದೃಶ್ಯಕಾವ್ಯ ಕುತೂಹಲ ಮೂಡಿಸಿದೆ. ಈ ಮ್ಯೂಸಿಕಲ್ ಕಿರುಚಿತ್ರಕ್ಕೆ ಉಜಿರೆ ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ ರಾಮ ಮೋಹನ್ ಭಟ್ ಹೆಚ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ಸ್ನಾತಕೊತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಕೆ. ಪದ್ಮನಾಭ ಅವರ ಸಾಹಿತ್ಯ ಮತ್ತು ಸಂಗೀತವಿದ್ದು, ಎಸ್.ಡಿ.ಎಂ ಕಾಲೇಜಿನ ಬಿವೋಕ್ ವಿದ್ಯಾರ್ಥಿ ಆ್ಯಂಟನಿ ಅವರ ವಾದ್ಯಸಂಯೋಜನೆ, ನಿರ್ವಹಣೆ ಇದೆ. ಸಾಯಿರೂಪ ದಾಲಿಂಬ ಅವರ ಮಧುರವಾದ ಹಿನ್ನೆಲೆ ಗಾಯನವಿದೆ. ದೀಕ್ಷಿತ್ ಧರ್ಮಸ್ಥಳ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಈ ಕಿರುಚಿತ್ರಕ್ಕೆ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋದ ಸಂಕಲನ ನಿರ್ದೇಶಕರಾಗಿರುವ ಎ. ಆರ್. ರಕ್ಷಿತ್ ರೈ ಅವರ ಸುಂದರ ಸಂಕಲನವಿದ್ದು, ನಿಖಿಲ್ ಕಾರ್ಯಪ್ಪ ಅವರು ಕಲರಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇನ್ನು ಈ ಕಿರುಚಿತ್ರದಲ್ಲಿ ನಾಯಕ ನಟನಾಗಿ ಹರಿನಾಥ್ ಅಭಿನಯಿಸಿದ್ದು, ನಾಯಕ ನಟಿಯಾಗಿ ದೀಪ್ತಿ ಆನಂದ್ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಹರ್ಷಿತಾ ಹೆಬ್ಬಾರ್, ಸಹ ನಿರ್ದೇಶನ ತಂಡದಲ್ಲಿ ಸುತನ್ ಕೇವಳ ಮತ್ತು ಅರ್ಪಿತ್ ಕ್ರಿಯೇಟಿವ್ ತಂಡದಲ್ಲಿ ರಾಮ್ ಕಿಶನ್ ಮತ್ತು ಸಂಪತ್ ಕುಮಾರ್ ರೈ ಸಹಕರಿಸಿದ್ದಾರೆ. ಈ ಕಿರುಚಿತ್ರವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಸಹಕಾರದೊಂದಿಗೆ ಕ್ರೌಡ್ ಫಂಡಿAಗ್ ಮೂಲಕ ನಿರ್ಮಾಣವಾಗಿದೆ ಎನ್ನುವುದು ವಿಶೇಷ.
ವರದಿ- ರಂಜಿತ್ ಕೆ ಎಸ್
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ
ಮತ್ತು ಸಮೂಹ ಸಂವಹನ ವಿಭಾಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ