12ನೇ ವಿಶ್ವ ಹಿಂದಿ ಸಮ್ಮೇಳನ: ವಿವೇಕಾನಂದ ಕಾಲೇಜಿನ ಡಾ. ದುರ್ಗಾರತ್ನ ಆಯ್ಕೆ

Upayuktha
0



ಪುತ್ತೂರು: ಫೆಬ್ರವರಿ 15 ರಿಂದ 17 ರವರೆಗೆ ಫಿಜಿ ದೇಶದ ನಾಂದಿಯಲ್ಲಿ ನಡೆಯಲಿರುವ 12ನೇ ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾಗವಹಿಸಲು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ ಇವರು ಆಯ್ಕೆಯಾಗಿರುತ್ತಾರೆ.


ಭಾರತ ಸರಕಾರದ ವಿದೇಶ ಮಂತ್ರಾಲಯದಿಂದ ಆಯ್ಕೆ ಆಗಿರುವ ಇವರು "ದೇಶ್ ಔರ್ ವಿದೇಶ್ ಮೇ ಹಿಂದಿ ಶಿಕ್ಷಣ್: ಚುನೌತಿಯಾಂ ಔರ್ ಸಮಾಧಾನ್" ಎಂಬ ವಿಷಯದ ಬಗ್ಗೆ ತಮ್ಮ ಪ್ರಬಂಧವನ್ನು ಮಂಡಿಸಲಿದ್ದಾರೆ. ದೇಶ ವಿದೇಶಗಳಿಂದ ಹಲವಾರು ಮಂದಿ ಭಾಗವಹಿಸಲಿರುವ ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ದುರ್ಗಾರತ್ನ ಇವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರು  ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ಪ್ರಗತಿಪರ ಕೃಷಿಕ ರವಿಶಂಕರ್ ಅವರ ಪತ್ನಿ.


ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ ಶುಭಾಶಯಗಳನ್ನು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top