ಬೆಂಗಳೂರು: ತ್ಯಾಗರಾಜನಗರದಲ್ಲಿರುವ ಪುರಾತನ ದೇವಸ್ಥಾನವಾದ 'ಶ್ರೀ ವಜ್ರಕ್ಷೇತ್ರ' ಶ್ರೀ ಅಭಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಸಂಜೆ 'ರಥೋತ್ಸವ' ನಡೆಯುತ್ತದೆ. ರಥೋತ್ಸವಕ್ಕೂ ಮೊದಲು 6-30 ರಿಂದ 7-30ರ ವರೆಗೆ ಅಪರೋಕ್ಷ ಜ್ಞಾನಿಗಳಾದ ಹರಿದಾಸರುಗಳು ರಚಿಸಿರುವ ಕೃತಿಗಳ "ಗಾಯನ ಸೇವೆ"ಗೆ ಅವಕಾಶವಿದ್ದು, (ಇದರಲ್ಲಿ ಯಾವುದೇ ರೀತಿಯ ಸಂಭಾವನೆ ಇರುವುದಿಲ್ಲ, 'ಶ್ರುತಿ ಪೆಟ್ಟಿಗೆ'ಯೊಂದಿಗೆ ಹಾಡಿದರೆ ಸಾಕು. ಧ್ವನಿ ವರ್ಧಕ ವ್ಯವಸ್ಥೆ ಇರುತ್ತದೆ. ಪಕ್ಕವಾದ್ಯದೊಂದಿಗೆ ಹಾಡಲು ಇಚ್ಛೆ ಇರುವವರು ಪಕ್ಕವಾದ್ಯದವರ ಸಂಭಾವನೆಯ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ.) ಬಾಲಪ್ರತಿಭೆಗಳು ಮತ್ತು ಯುವ ಪ್ರತಿಭೆಗಳಿಗೆ ಇದೊಂದು ಸದಾವಕಾಶ. ಸೇವೆ ಮಾಡಲು ಆಸಕ್ತಿ ಇರುವವರು ತಮ್ಮ ಹೆಸರು, ವಯಸ್ಸು, ತಮ್ಮ ಸಂಗೀತ ಗುರುಗಳ ಹೆಸರು ಹಾಗೂ ನೀವು ಹಾಡಿರುವ ಯಾವುದಾದರೂ ಒಂದು ದಾಸರ ಪದವನ್ನು ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಮಾಡಲು ವಿನಂತಿ.
ಮೊಬೈಲ್: 9980400535, 7019475877
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ