ಮಂಗಳೂರು: ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ಕ್ಷೇತ್ರಪಾಲ ಶ್ರೀ ಗುಳಿಗೇಶ್ವರ ದೈವಸ್ಥಾನದ ವರ್ಧಂತಿ ಉತ್ಸವದ ಅಂಗವಾಗಿ ಪರಮಪೂಜ್ಯ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ದೇವಸ್ಥಾನದ ಅರ್ಚಕರಾದ ಕಾರ್ತಿಕ್ ಭಟ್ ನೇತೃತ್ವದಲ್ಲಿ ನವಕ ಕಲಾಭಿಷೇಕ ಜರುಗಿತು.
ಈ ಸಂದರ್ಭದಲ್ಲಿ ನೂತನ ಮೇಲ್ಛಾವಣಿಯನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಥಳೀಯ ಕಾರ್ಪೊರೇಟರ್ ಸುಮಿತ್ರಾ, ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರಾದ ರಾಜೇಶ್ ಬೈಕಂಪಾಡಿ, ಬೂತ್ ಅಧ್ಯಕ್ಷರಾದ ಸುನಿತ್ ಚಿತ್ರಾಪುರ, ರಾಜೇಶ್ ಕರ್ಕೇರಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೇಶವ ಸಾಲ್ಯಾನ್, ಉಮೇಶ್ ಟಿ ಕರ್ಕೇರಾ, ಲೋಕೇಶ್ ಕರ್ಕೇರಾ, ಗಿರೀಶ್ ಕರ್ಕೇರಾ, ಗುರು ಪ್ರಸಾದ್, ಪ್ರಕಾಶ್ ಭಟ್, ಸಂದೀಪ್ ದೇವಾಡಿಗ, ದಿನೇಶ್ ಬಂಗೇರಾ, ವೀನೋದ, ಸಂತೋಷ್, ಪುಷ್ಪದೇವಾಡಿಗ, ಸುರೇಶ್ ದೇವಾಡಿಗ, ಮಹೇಶ್, ಹೇಮಾವತಿ ದೇವಾಡಿಗ, ಸ್ಥಳೀಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ