ಅಡ್ವೈಸರ್‌ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

Upayuktha
0

ಮಂಡ್ಯ: ಮಂಡ್ಯದ ಅಡ್ವೈಸರ್‌ ಪತ್ರಿಕೆಯು 2022ನೇ ಸಾಲಿನ ರಾಜ್ಯಮಟ್ಟದ ಹದಿನಾರನೆಯ ವರ್ಷದ ʻಅಡ್ವೈಸರ್‌ ಸಾಹಿತ್ಯ ಪ್ರಶಸ್ತಿʼಗಾಗಿ ಕೃತಿಗಳನ್ನು ಆಹ್ವಾನಿಸಿದೆ.

ಸ್ಪರ್ಧೆಯು ಎಂಟು ವಿಭಾಗಗಳಲ್ಲಿ ನಡೆಯಲಿದ್ದು ಒಟ್ಟು ಹತ್ತು ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರತಿ ಪ್ರಶಸ್ತಿಯು ಮೂರು ಸಾವಿರ ರೂ. ನಗದು ಮತ್ತು ಅಭಿನಂದನಾ ಪತ್ರವನ್ನು ಹೊಂದಿರುತ್ತದೆ. 

ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ವಚನ-ಶರಣ ಸಾಹಿತ್ಯ, ಮಹಿಳಾ ಸಾಹಿತ್ಯ, ಪುಸ್ತಕ ಪ್ರಶಸ್ತಿ, ಮಕ್ಕಳ ಸಾಹಿತ್ಯ, ಆಧ್ಯಾತ್ಮಿಕ ವಿಭಾಗಗಳಿಗೆ ಕೃತಿಗಳನ್ನು ಕಳುಹಿಸಬಹುದು.


  • ಕವನ ಸಂಕಲನಕ್ಕೆ ಇರುವ ಎರಡು ಪ್ರಶಸ್ತಿಗಳಲ್ಲಿ ಒಂದು ಮಹಿಳಾ ಕವಿಗೆ ಮೀಸಲಾಗಿರುತ್ತದೆ. 
  • ವಚನ-ಶರಣ ಸಾಹಿತ್ಯಕ್ಕೆ ಸಂಬಂಧ ಪಟ್ಟ ಎಲ್ಲಾ ಪ್ರಕಾರಗಳನ್ನು ವಚನ-ಶರಣ ಸಾಹಿತ್ಯ ಪ್ರಶಸ್ತಿ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.
  • ಮಹಿಳಾ ಪ್ರಶಸ್ತಿಗೆ ಸಂಬಂಧಪಟ್ಟಂತೆ ಮಹಿಳೆಯರು ರಚಿಸಿರುವ ಯಾವುದೇ ಪ್ರಕಾರಗಳಿಗೂ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ.
  • ಪುಸ್ತಕ ಪ್ರಶಸ್ತಿಯ ಪುಸ್ತಕದ ಯಾವುದೇ ಪ್ರಕಾರವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. (ಪುಸ್ತಕದ ಅಂದ-ಚಂದ ಗಮನದಲ್ಲಿರುತ್ತದೆ)
  • ಮಕ್ಕಳ ಸಾಹಿತ್ಯಕ್ಕೆ ಮಕ್ಕಳಿಗಾಗಿ ರಚಿಸಿರುವ ಯಾವುದೇ ಪ್ರಕಾರದ ಕೃತಿಗಳಿಗೂ ಅವಕಾಶ ಮಾಡಿಕೊಡಲಾಗಿದೆ.
  • ಆಧ್ಯಾತ್ಮಿಕ ಪ್ರಶಸ್ತಿಗೆ ಸಂಬಂಧಪಟ್ಟಂತೆ ಯಾವುದೇ ಪ್ರಕಾರಗಳಿಗೂ ಸ್ಪರ್ಧೆಗೆ ಅವಕಾಶವಿರುತ್ತದೆ.


ಆಸಕ್ತ ಲೇಖಕರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ವಪರಿಚಯ, ಮೊಬೈಲ್‌ ಸಂಖ್ಯೆಗಳೊಂದಿಗೆ ಪತ್ರಿಕೆಯ ಸಂಪಾದಕರ ವಿಳಾಸಕ್ಕೆ ಕಳುಹಿಸಿಕೊಡಲು ತಿಳಿಸಲಾಗಿದೆ. ಕೃತಿಯನ್ನು ಕಳುಹಿಸಲು ಮಾರ್ಚ್ 30 ಅಂತಿಮ ದಿನವಾಗಿರುತ್ತದೆ. ಆಯ್ಕೆಗೊಂಡ ಕೃತಿ ವಿಜೇತರಿಗೆ ನಗದು ಹಾಗೂ ಪ್ರಶಸ್ತಿಗಳನ್ನು ಅಂಚೆಯ ಮೂಲಕ ಕಳುಹಿಸಲಾಗುವುದು.


ಕೃತಿಯನ್ನು ಕಳುಹಿಸಬೇಕಾದ ವಿಳಾಸ: 

ಸಿ. ಬಸವರಾಜು, ಸಂಪಾದಕರು

ಅಡ್ವೈಸರ್‌ ಮಾಸ ಪತ್ರಿಕೆ, 1455 ಚಂದ್ರಗಿರಿ, ಡಾ.ರಾಜ್‌ಕುಮಾರ್‌ ಬಡಾವಣೆ, ಮಂಡ್ಯ- 571402

ಹೆಚ್ಚಿನ ಮಾಹಿತಿಗೆ: 7892688670


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top