ವಿದ್ಯಾಮಾತಾ ಅಕಾಡೆಮಿ ವತಿಯಿಂದ ಲೇಖಕ ಅನಿಂದಿತ್ ಗೌಡ ಹಾಗೂ ವಿಜಯಕುಮಾರ್ ಅವರಿಗೆ ಸನ್ಮಾನ

Upayuktha
0

ಪುತ್ತೂರು: ಅನೇಕ ಆಕಾಂಕ್ಷಿಗಳಿಗೆ ಬದುಕು ಕಟ್ಟಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಆಸರೆಯಾಗಿ ಹೆಸರುವಾಸಿಯಾಗಿರುವ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ಥಾಪಕಾಧ್ಯಕ್ಷರಾದ ಶ್ರೀ ಭಾಗ್ಯೇಶ್ ರೈ ಅವರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ 'ರಿಕಾಲಿಂಗ್ ಅಮರ ಸುಳ್ಯ' ಪುಸ್ತಕ ಖ್ಯಾತಿಯ ಲೇಖಕರಾದ ಶ್ರೀ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೂವರಿ ತುಳು ಪತ್ರಿಕೆಯ ಶ್ರೀ ವಿಜಯಕುಮಾರ್ ಭಂಡಾರಿ ಅವರನ್ನೂ ಸನ್ಮಾನಿಸಲಾಯಿತು. 

ನಂತರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಅನಿಂದಿತ್ ಗೌಡ ಅವರು ಪುಸ್ತಕ ರಚನೆಯ ಸಂದರ್ಭದ ಕೆಲವೊಂದು ಅನುಭವವನ್ನು ಹಂಚಿಕೊಂಡರು. 

ವಿಜಯಕುಮಾರ್ ಭಂಡಾರಿ ಅವರು ಅಮರ ಸುಳ್ಯ ಕ್ರಾಂತಿಯ ಕುರಿತು ತುಳುವಿನಲ್ಲಿ ಒಂದು ಕವನವನ್ನು ಪ್ರಸ್ತುತಪಡಿಸಿದರು. 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top