ಎಲ್ಲರೂ ಹೇಳುವ ಹಾಗೆ ಬಾಲ್ಯ ಜೀವನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂಬುದು ನಿಜ ಆದರೆ ಬಾಲ್ಯಾವಸ್ಥೆಯಲ್ಲಿ ಇದ್ದಾಗ ದೊಡ್ಡವರಾದ ಮೇಲೆ ವಿದ್ಯಾಭ್ಯಾಸ ಮಾಡಲು ಇರುವುದಿಲ್ಲವೆಂದು ಖುಷಿ ಪಡುತ್ತಿದ್ದ ದಿನಗಳು. ಬಾಲ್ಯ ಜೀವನದಲ್ಲಿ ಇರುವಾಗ ಜಗಳವಡಿದ ಸ್ನೇಹ ಸಂಬಂಧಗಳು, ತರಗತಿಯಲ್ಲಿ ಮಾತನಾಡಿದಕ್ಕೆ ಶಿಕ್ಷಕರು ಕೈ ಕಿತ್ತಾಪಟ್ಟುಗಳು, ಪರೀಕ್ಷೆಯಲ್ಲಿ ಉತ್ತರವನ್ನು ಕೇಳಿದ ಸನ್ನಿವೇಶಗಳು, ತಪ್ಪು ಮಾಡಿದಾಗ ಹೆಡ್ ಮಾಸ್ಟರ್ ಗೆ ಹೇಳುತ್ತೇನೆ ಎಂದ ಸ್ನೇಹಿತರು ಇವೆಲ್ಲ ಬಾಲ್ಯ ಜೀವನದಲ್ಲಿ ಕಳೆದ ಕ್ಷಣಗಳು ನೆನಪಾಗುತ್ತದೆ. ಚಿಕ್ಕವರಿದ್ದಾಗ ತರಗತಿಯಲ್ಲಿ ಶಿಕ್ಷಕರಿಗೆ ಯಾರೋ ನೀಡಿದ ಎರಡು ಚಾಕಲೇಟ್‌ಗಳನ್ನು ಇಡೀ ತರಗತಿಗೆ ಸಣ್ಣ ಸಣ್ಣ ತುಂಡುಗಳಾಗಿ ಹಂಚಿದ ಕ್ಷಣಗಳನ್ನು ನೆನೆದರೆ ಇದು ಬಾಲ್ಯ ಜೀವನಕ್ಕೆ ಹೋಗಿ ಬಂದಂತೆ ಆಗುತ್ತದೆ. ಸ್ನೇಹಿತರ ಯಾವುದೋ ಒಬ್ಬ ಸಹಪಾಠಿಯು ನನ್ನ ಪೆನ್ಸಿಲ್ ಯಾರೋ ಕದ್ದಿದ್ದಾರೆ ಮಿಸ್ ಎಂದು ಶಿಕ್ಷಕರಿಗೆ ತಿಳಿಸುವುದು, ಶಿಕ್ಷಕರು ತರಗತಿಯಲ್ಲಿ ಎಲ್ಲರ ಬ್ಯಾಗ್ ತಪಾಸಣೆ ಮಾಡಿದಾಗ ಕಳೆದುಕೊಂಡು ಹೋದವನ ಹತ್ತಿರ ಕುಳಿತುಕೊಂಡ ಸಹಪಾಠಿನಲ್ಲಿ ಬ್ಯಾಗ್‌ನಲ್ಲಿ ಪೆನ್ಸಿಲ್ ಸಿಕ್ಕಿದಾಗ ತಪ್ಪಿ ಬಂದಿರಬಹುದು ಎಂದು ಶಿಕ್ಷಕರು ಹೇಳುತ್ತಿದ್ದರು. ಒಂದು ವೇಳೆ ಬೇರೆ ಅವರ ಬ್ಯಾಗ್‌ನಲ್ಲಿ ಸಿಕ್ಕಾಗ ಸರಿಯಾಗಿ ಪೆಟ್ಟು ತಿನ್ನುತ್ತಿದ್ದೆವು.
ಏಪ್ರಿಲ್ ನ ಮೊದಲ ದಿನ ಪೂಲ್ ಆದಾಗ ಸ್ನೇಹಿತರು ಏಪ್ರಿಲ್ ಫೂಲ್ ಎಂದು ಕೇಕೆ ಹಾಕಿ ತಮಾಷೆ ಮಾಡಿದ ದಿನಗಳನ್ನು ನೆನೆದಾಗ ಮತ್ತೊಮ್ಮೆ ಆ ದಿನಗಳು ಬರಬಾರದೆಂದು ಎಣಿಸುತ್ತದೆ. ಆದರೆ ಸಮಯ ಉರುಳಿದ ಹಾಗೆ ಬಾಲ್ಯ ಜೀವನ ನಮ್ಮ ಕಣ್ಣಿನ ಎದುರಿನಿಂದ ಮಾಯವಾಯಿತು ಎಂಬ ಈಗ ಭಾವನೆ ಮೂಡುತ್ತದೆ.
-ದೇವಿಶ್ರೀ ಶಂಕರಪುರ
ಆಳ್ವಾಸ್ ಕಾಲೇಜು ಮೂಡುಬಿದರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


