ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ 'ಆರೋಗ್ಯ ಅರಿವು' ಜಾನಪದ ಬೀದಿನಾಟಕ ಪ್ರದರ್ಶನ

Upayuktha
0

ಅಡ್ಯನಡ್ಕ: ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ 'ಸಂಸಾರ' ಕಲಾ ತಂಡ ಜೋಡುಮಾರ್ಗ ಬಂಟ್ವಾಳ ಇವರು 'ಆರೋಗ್ಯ ಅರಿವು' ಜಾನಪದ ಬೀದಿನಾಟಕ, ಆರೋಗ್ಯ ಮುನ್ನೆಚ್ಚರಿಕೆ ಕುರಿತು ರೂಪಕ ಹಾಗೂ ರಂಗಗೀತೆಯನ್ನು ಫೆಬ್ರವರಿ 13ರಂದು ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಪ್ರಸ್ತುತಪಡಿಸಿದರು.


ಸಂಸಾರ ನಾಟಕ ತಂಡದಲ್ಲಿ ಪತ್ರಕರ್ತ, ರಂಗಕರ್ಮಿ ಹಾಗೂ ನಾಟಕ ನಿರ್ದೇಶಕರಾದ ಮೌನೇಶ್ ವಿಶ್ವಕರ್ಮ, ಪತ್ರಕರ್ತ ವಿಷ್ಣುಗುಪ್ತ ಪುಣಚ, ಸಹಕಲಾವಿದರಾದ ಪೃಥ್ವಿರಾಜ್, ಭವಾನಿ, ಧನ್ಯಶ್ರೀ, ಚಂದ್ರಮೌಳಿ ಇದ್ದರು.


ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಜನತಾ ಪ್ರೌಢಶಾಲೆಯ ಸಹಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕರಾದ ಶಿವಕುಮಾರ್ ಸಾಯ ವಂದಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top