ಮಂಗಳೂರು: ಅಡ್ಡೂರು ಉಳಿಯ ಧರ್ಮಚಾವಡಿಯಲ್ಲಿ ಶ್ರೀ ನಾಗದೇವತಾ, ಶ್ರೀ ಗಾಣಗೇಶ್ವರೀ, ಶ್ರೀ ಮಹಮ್ಮಾಯಿ, ಶ್ರೀ ಸತ್ಯದೇವತಾ, ಶ್ರೀ ಮಂತ್ರದೇವತಾ, ಶ್ರೀ ಕಲ್ಲುರ್ಟಿ ಪಂಜುರ್ಲಿ, ಶ್ರೀ ಗುಳಿಗ, ಶ್ರೀ ಮಹಿಷಂತಾಯ, ಶ್ರೀ ಅಣ್ಣಪ್ಪ ಸ್ವಾಮಿ, ಶ್ರೀ ಮಲರಾಯ ಬಂಟ, ಶ್ರೀ ಧೂಮಾವತಿ ಬಂಟ ಧರ್ಮ ದೈವಗಳ ನವೀಕರಣ ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ನೇಮೋತ್ಸವ ಹಾಗೂ ಕೋಲ ಬಲಿ ಉತ್ಸವಗಳು ಫೆ.28ರಿಂದ ಮಾರ್ಚ್ 3ರ ವರೆಗೆ ನಡೆಯಲಿವೆ.
ಕ್ಷೇತ್ರದ ತಂತ್ರಿ ವರ್ಯರಾದ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಪೊಳಲಿ ಮಾಧವ ಮಯ್ಯ ಹಾಗೂ ಶ್ರೀ ವಾಸುದೇವ ಮಯ್ಯರ ನೇತೃತ್ವದಲ್ಲಿ ಈ ಪುಣ್ಯ ಕಾರ್ಯಗಳು ನಡೆಯಲಿವೆ ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ತಿಳಿಸಿದರು.
ಆಡಳಿತ ಮಂಡಳಿ ಅಧ್ಯಕ್ಷರಾದ ಮಾಧವ ಮಾವೆ, ಗೌರವಾಧ್ಯಕ್ಷ ರುಕ್ಮಯ ಸಪಲಿಗ ಉಳಿಯ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮಗಳ ವಿವರ ಹೀಗಿದೆ:
ಫೆ.28ರಂದು ಮಂಗಳವಾರ ಬೆಳಗ್ಗೆ 7 ಗಂಟೆಗೆ ಶ್ರೀ ಮಹಾಗಣಪತಿ ಯಾಗ, ಶ್ರೀ ಅನ್ನಪೂರ್ಣ ಪಾಕಶಾಲೆ ಮತ್ತು ಭೋಜನಶಾಲೆ ಉದ್ಘಾಟನೆ, ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ, ಕಲಶಾಭಿಷೇಕ, ತನು ತಂಬಿಲಾರಾಧನೆ, ವಾರ್ಷಿಕ ಆಶ್ಲೇಷಾ ಬಲಿ ಸೇವೆ ನೆರವೇರಲಿದೆ.
ಬೆಳಿಗ್ಗೆ 10 ಗಂಟೆಗೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ, 10:30ರಿಂದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಸ್ವರ್ಣ ಭಾಂಡಾರಾಧನೆ (ಮುಡಿಪು ಸೇವೆ), ಮನೆಯ ದೈವಗಳಿಗೆ ಕಲಶಾಭಿಷೇಕ, ಪನಿವಾರ ಆರಾಧನೆ;
ಮಧ್ಯಾಹ್ನ 12:00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5ಕ್ಕೆ ಶಿಲ್ಪಿಗಳಿಂದ ಆರೂಢ ಪರಿಗ್ರಹ, ಬಿಂಬ ಪರಿಗ್ರಹ, 5:30ರಿಂದ ತಂತ್ರಿಗಳಿಗೆ ಸ್ವಾಗತ, ಆಚಾರ್ಯಾದಿ ಋತ್ವಿಗ್ವರಣೆ, 6:30ರಿಂದ ಪೂರ್ಣಫಲನ್ಯಾಸ, ಪುಣ್ಯಾಹವಾಚನ, ಮಹಾಸಂಕಲ್ಪ, ಪ್ರಾಸಾದ ಶುದ್ಧಿ, ಸಪ್ತಶುದ್ಧಿ, ಬಿಂಬಾಧಿವಾಸ, ವಾಸ್ತುಹೋಮ, ರಕ್ಷೋಘ್ನ ಹೋಮ, ಸುದರ್ಶನ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂರ್ಪಣೆ ನಡೆಯಲಿದೆ.
ದಿನಾಂಕ 01-03-2023ನೇ ಬುಧವಾರ
ಬೆಳಗ್ಗೆ ಗಂಟೆ 6.00ಕ್ಕೆ ಶ್ರೀ ಮಹಾಗಣಪತಿ ಯಾಗ
ಬೆಳಗ್ಗೆ ಗಂಟೆ 7.00ರಿಂದ ಪ್ರತಿಷ್ಠಾ ಕಲಶ ಸ್ಥಾಪನೆ, ಕಲಶ ಹೋಮ
7.54ರ ವಿೂನ ಲಗ್ನದಲ್ಲಿ ದೈವ ದರ್ಶನದೊಂದಿಗೆ ದೈವ ಪ್ರತಿಷ್ಠಾಪನೆ, ಪ್ರತಿಷ್ಠಾ ಕಲಶಾಭಿಷೇಕ
ಬೆಳಗ್ಗೆ ಗಂಟೆ 8.30ರಿಂದ ಪ್ರಧಾನ ಕಲಶ ಸ್ಥಾಪನೆ, ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪರ್ವಾರಾಧನೆ
ಬೆಳಗ್ಗೆ ಗಂಟೆ 8.30ಕ್ಕೆ ಶ್ರೀ ಮಲರಾಯಿ ಬಂಟ, ಶ್ರೀ ಧೂಮಾವತಿ ಬಂಟ ದೈವಗಳ ಭಂಡಾರ ಏರುವುದು
ನಂತರ ಶ್ರೀ ಮಲರಾಯಿ ಬಂಟ ದೈವಗಳ ನೇಮೋತ್ಸವಕ್ಕೆ ಎಣ್ಣೆ ಬೂಲ್ಯ ಕೊಡುವುದು
ಬೆಳಗ್ಗೆ ಗಂಟೆ 10.00ಕ್ಕೆ ಶ್ರೀ ಮಲರಾಯಿ ಬಂಟ ದೈವದ ನೇಮೋತ್ಸವ ಪ್ರಾರಂಭ
ಮಧ್ಯಾಹ್ನ ಗಂಟೆ 12.00ಕ್ಕೆ ಓಲಸರಿ, ತೂಟೆದಾರ, ದಳಿ ದೀಪಾರಾಧನೆ, ಶ್ರೀ ಮಹಮ್ಮಾಯಿ ಭೇಟಿ, ಕಟ್ಟೆ ದೀಪೆÇೀತ್ಸವ, ಕಟ್ಟೆ ಸೇವೆ, ಬೂಲ್ಯ ಪ್ರಸಾದ ವಿತರಣೆ,
ಪಲ್ಲ ಪೂಜೆ, ಅನ್ನಸಂತರ್ಪಣೆ
ಸಂಜೆ ಗಂಟೆ 4.30ಕ್ಕೆ ಶ್ರೀ ಮಹಿಷಂತಾಯ ದೈವಕ್ಕೆ ಎಣ್ಣೆ ಬೂಲ್ಯ ಕೊಡುವುದು, ಶ್ರೀ ಅಣ್ಣಪ್ಪ ದೈವದ ಆವೇಶ, ಎಣ್ಣೆ ಬೂಲ್ಯ, ಶ್ರೀ ಧೂಮಾವತಿ ಬಂಟ ದೈವಕ್ಕೆ ಎಣ್ಣೆ ಬೂಲ್ಯ ಕೊಡುವುದು
ನಂತರ ಶ್ರೀ ಮಹಿಷಂತಾಯ ದೈವದ ನೇಮೋತ್ಸವ ಪ್ರಾರಂಭ, ಶ್ರೀ ಅಣ್ಣಪ್ಪ ಸ್ವಾಮಿ ದೈವದ ನೇಮ
ರಾತ್ರಿ ಗಂಟೆ 10.00ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ
ರಾತ್ರಿ ಗಂಟೆ 1.00ಕ್ಕೆ ಓಲಸರಿ, ದಳಿದೀಪ, ಶ್ರೀ ಮಹಮ್ಮಾಯಿ ಭೇಟಿ, ಗಡು ಸೇವೆ ನಡೆಸಿ ಕಲ್ಲುರ್ಟಿ ಭೇಟಿ, ಅನುಗ್ರಹ ಬೂಲ್ಯ ಪ್ರಸಾದ ವಿತರಣೆ
ದಿನಾಂಕ 02-03-2023ನೇ ಗುರುವಾರ
ಬೆಳಗ್ಗೆ ಗಣಹೋಮ, ದೈವ ಶುದ್ಧ, ಶ್ರೀ ನಾಗದೇವರ ತನು ತಂಬಿಲಾರಾಧನೆ, ಪ್ರಾಯಶ್ಚಿತ್ತ ಕಾರ್ಯಕ್ರಮಗಳು
ಸಂಜೆ ಗಂಟೆ 6.00ಕ್ಕೆ ಶ್ರೀ ಸತ್ಯದೇವತೆ, ಮಂತ್ರದೇವತೆ ದೈವಗಳ ಕೋಲ ಬಲಿ ಸೇವೆ
ನಂತರ ಶ್ರೀ ಕಲ್ಲುರ್ಟಿ-ಪಂಜುರ್ಲಿ ದೈವಗಳ ಎಣ್ಣೆ ಬೂಲ್ಯ
ರಾತ್ರಿ ಗಂಟೆ 9.00ರಿಂದ ಶ್ರೀ ಕಲ್ಲುರ್ಟಿ-ಪಂಜುರ್ಲಿ ದೈವಗಳ ಕೋಲ ಬಲಿ ಸೇವೆ
ರಾತ್ರಿ ಗಂಟೆ 12.00ರಿಂದ ಶ್ರೀ ಗುಳಿಗ ದೈವದ ಕೋಲ ಬಲಿ ಸೇವೆ
ದಿನಾಂಕ 03-03-2023ನೇ ಶುಕ್ರವಾರ
ಬೆಳಗ್ಗೆ ಶ್ರೀ ಮಹಿಷಂತಾಯ, ಶ್ರೀ ಅಣ್ಣಪ್ಪ ಸ್ವಾಮಿ, ಶ್ರೀ ಮಲರಾಯ ಬಂಟ, ಶ್ರೀ ಧೂಮಾವತಿ ಬಂಟ ದೈವಗಳ ಸನ್ನಿಧಿಯಲ್ಲಿ ಗಣಹೋಮ,
ಪ್ರಾಯಶ್ಚಿತ್ತ ಕಾರ್ಯಕ್ರಮಗಳು, ನವಕ ಕಲಶ ಪ್ರತಿಷ್ಠಾಪನೆ, ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪರ್ವಾರಾಧನೆ, ತೋರಣ ಮುಹೂರ್ತ,
ಭಂಡಾರ ಏರುವುದು, ಶ್ರೀ ಮಲರಾಯ ಬಂಟ ದೈವಗಳ ಎಣ್ಣೆ ಬೂಲ್ಯ ಕೊಡುವುದು
ಬೆಳಗ್ಗೆ ಗಂಟೆ 9.30ರಿಂದ ಶ್ರೀ ಮಲರಾಯ ಬಂಟ ದೈವಗಳ ವಾರ್ಷಿಕ ನೇಮೋತ್ಸವ
ಬೆಳಗ್ಗೆ ಗಂಟೆ 11.30ಕ್ಕೆ ಬೂಲ್ಯ ಪ್ರಸಾದ ವಿತರಣೆ, ನಂತರ ಮಹಾಸಂತರ್ಪಣೆ
ಸಂಜೆ ಗಂಟೆ 4.00ಕ್ಕೆ ಶ್ರೀ ಮಹಿಷಂತಾಯ ದೈವದ ನೇಮ ಪ್ರಾರಂಭ
ಸಂಜೆ ಗಂಟೆ 5.00ರಿಂದ ಶ್ರೀ ಅಣ್ಣಪ್ಪ ಸ್ವಾಮಿ ದೈವಕ್ಕೆ ಆವೇಶ ಎಣ್ಣೆ ಬೂಲ್ಯ
ನಂತರ ಶ್ರೀ ಅಣ್ಣಪ್ಪ ಸ್ವಾಮಿ ದೈವದ ನೇಮ
ರಾತ್ರಿ ಗಂಟೆ 8.00ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ
ಪೌರಾಣಿಕ ಹಿನ್ನೆಲೆ:
ದ್ವೀಪದಂತೆ ಹಿನ್ನೀರಿನಿಂದ ಸುತ್ತುವರಿದಿರುವ ಪ್ರದೇಶ ಇದಾಗಿದ್ದು, ಬ್ರಾಹ್ಮಣ ಚಾವಡಿ ಮೊದಲ್ಗೊಂಡು ಕೊರಗ ಸಮಾಜದ ತನಕ ಎಲ್ಲಾ ಜನಾಂಗದವರು ವಾಸಿಸುತ್ತಿದ್ದ ಇತಿಹಾಸ ಮತ್ತು ಕುರುಹುಗಳು ಇಲ್ಲಿ ಸಿಗುತ್ತವೆ. ಮಳಲಿ ಸಾವಿರ ಸೀಮೆಯ ಅಖಿಲೇಶ್ವರ ಸನ್ನಿಧಿಯ ಪಕ್ಕದಲ್ಲಿ ಈಗಿರುವ ಗಾಣಿಗ ಸಮಾಜದ ಕುಟುಂಬ ಇತ್ತೆಂದು ಐತಿಹ್ಯ ಹೇಳುತ್ತದೆ. ಅಂತೆಯೇ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಶೋಧನೆ ನಡೆಸಲಾಗಿದ್ದು ಪ್ರತಿಷ್ಠಾಪನೆಗೊಳ್ಳಲಿರುವ ಪ್ರಧಾನ ಸಾನಿಧ್ಯ ದೈವಗಳು ಅಲ್ಲಿ ಆರಾಧನೆ ಪಡೆಯುತ್ತಿದ್ದ ಇತಿಹಾಸವು ಆದಿ ಆಲಡೆ ಸಿರಿ ಕುಮಾರ ಮಹಾಲಿಂಗೇಶ್ವರ ಕ್ಷೇತ್ರ ನಾಶವಾಗಿ ಅಳಿದುಳಿದ ಕುರುಹುಗಳು ಅಲ್ಲಿ ಕಾಣಸಿಗುತ್ತವೆ. ಈಗಲೂ ಅಲ್ಲಿ ಮಲರಾಯ ಬಂಟ ಅಣ್ಣಪ್ಪ ಧೂಮಾವತಿ ಬಂಟ ದೈವಗಳ ನೇಮೋತ್ಸವವು ಪೊಲಸರಿ ಗದ್ದೆಗಳು, ನೇಮದ ಕಟ್ಟೆ ಇರುವುದು ಕಂಡು ಬರುತ್ತದೆ.
ಕಾರಣಾಂತರದಿಂದ ಬ್ರಾಹ್ಮಣ, ಬಂಟ ಸಮುದಾಯ, ಪೂಜಾರಿ ಬಿಲ್ಲವ, ಮೂಲ್ಯ ನಲಿಕೆ, ಗಾಣಿಗ ಸಮುದಾಯ ಒಟ್ಟಾಗಿ ಈ ದೈವಗಳ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಬಂದಾಗ ಹಿಂದಿನ ಕಲೆಂಬಿಯಲ್ಲಿ ತುಂಬಿಸಿ ಮಳಲಿ, ಗುರುಪುರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಒಟ್ಟಿಸುವ ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗದೆ ಹೋದಾಗ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿ ಅಖಿಲೇಶ್ವರಿ ದೇವ ಸನ್ನಿಧಿ ಪಕ್ಕದಲ್ಲಿ ಜಲ ವಿಸರ್ಜನೆ ಮಾಡಲಾಯಿತು. ಆ ಅಲ್ಲಿಂದ ಒಬ್ಬಾಕೆ ಮಹಿಳೆ ಬಗ್ಗು ಸಪಲ್ದಿ ಎಂಬಾಕೆ ಇದೇ ಉಳಿಯ ಕ್ಷೇತ್ರಕ್ಕೆ ವಿವಾಹ ಆಗಿ ಬಂದಿದ್ದು ಈ ಕಲೆಂಬಿಯು ಆಕೆಗೆ ಸಿಕ್ಕಿ ಅದರೊಳಗೆ ಕಲ್ಲುರ್ಟಿ, ಕೊರತಿ, ಕಲ್ಕುಡ ಮುಂತಾದ ದೈವಗಳ ಬಿಂಬಾದಿಗಳು ಸಿಕ್ಕಿ ಈ ಕ್ಷೇತ್ರದಲ್ಲಿ ಆರಾಧನೆ ಪಡೆಯುತ್ತಾ ಬಂದಿವೆ.
ಇದೀಗ ಈ ಕ್ಷೇತ್ರವು ಜ್ಯೋತಿಷಿ ಹಾಗೂ ತಂತ್ರಿ ವರೇಣ್ಯರಾದ ಪ್ರಕಾಶ ವಿ ಹೊಳ್ಳ ಶಕ್ತಿನಗರ ಮತ್ತು ಮಾಧವ ಮಯ್ಯ ಪೊಳಲಿ ಇವರಿಂದ ನೆರವೇರಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಪುನಃ ಪ್ರತಿಷ್ಠಾಪನೆ ಉತ್ಸವಗಳು ಫೆ 28ರಿಂದ ಮೊದಲ್ಗೊಂಡು ಮಾರ್ಚ್ 3ರ ವರೆಗೆ ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಧರ್ಮಚಾವಡಿ ಉಳಿಯ ಇದರ ಗೌರವಾಧ್ಯಕ್ಷರಾದ ಶ್ರೀ ರುಕ್ಮಯ ಸಪಳಿಗ ಉಳಿಯ, ಅಧ್ಯಕ್ಷರಾದ ಶ್ರೀ ಮಾಧವ ಮಾವೆ, ಉಪಾಧ್ಯಕ್ಷರಾದ ಶ್ರೀ ರಮೇಶ್ ಬೆಳ್ಳೂರು, ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಗುಣಶೇಖರ್, ಮುಲ್ಕಿ ಹಾಗೂ ಕೋಶಾಧಿಕಾರಿಗಳಾದ ಶ್ರೀ ರಾಜೇಶ್ ಕೊಯಿಲ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ